ಒಗ್ಗಟ್ಟಿನಲ್ಲಿ ಬಲವಿದೆ!
‘ಒಗ್ಗಟ್ಟಿನಲ್ಲಿ ಬಲವಿದೆ; ಆ ಬಲದ ಬಡಿತದಿಂದ ಸರಕಾರಗಳನ್ನೂ ಬೇಕಾದಂತೆ ಬಗ್ಗಿಸಿಕೊಳ್ಳಬಹುದು; ಮುಂದಿಡುವ ಡಿಮ್ಯಾಂಡ್ ಸಾಧುವೂ, ಸಿಂಧುವೂ ಆಗಿರದಿದ್ದರೂ ಪರವಾಗಿಲ್ಲ!’ ಎನ್ನುವದಕ್ಕೆ ರಾಜಾಸ್ಥಾನದಲ್ಲಿ ಗುಜ್ಜರರ, ಆಂಧ್ರದಲ್ಲಿ ತೆಲಂಗಾಣರ ವಿಜಯ ಉದಾಹರಣೆ.
ಪ್ರತ್ಯೇಕತಾವಾದವೂ, ಮೀಸಲಾತಿಯ ಶಾಶ್ವತ ಕೈತುತ್ತೂ ಉನ್ನತ ಮೌಲ್ಯಗಳೇನೂ ಅಲ್ಲವೆನ್ನುವುದು ಎಲ್ಲರಿಗೂ ಗೊತ್ತು. ಆದರೂ ಉಪವಾಸ ಮಾಡಿ ಸತ್ತುಹೊಗುತ್ತೆವೆಂಬ ಬ್ಲ್ಯಾಕ್‌ಮೇಲ್‌ನಿಂದ, ರೈಲು-ಬಸ್ಸು ತಡೆದು ಜನತೆಯನ್ನು ಪಟ್ಟಾಡಿಸುವ ಗೂಂಡಾ ಬಲದಿಂದ ಆ ನಾಯಕರು ಕೇಳಿದ್ದನ್ನೆಲ್ಲಾ ಪಡೆದುಕೊಂಡರು! ಇದು ಅವರ ಗೆಲುವಲ್ಲ; ಸರಕಾರಗಳ ಸೋಲು; ಭ್ರಷ್ಟರು ಭ್ರಷ್ಟರಿಗಾಗಿ ನಡೆಸುವ, ಭ್ರಷ್ಟತೆಯ ಹುಳ ಹಿಡಿದ ಸರಕಾರಗಳ ನೈತಿಕ ದೌರ್ಬಲ್ಯ. ತಿಳಿಗಾಳಿ ಬೀಸಿದರೂ ಸಾಕು, ಪಾದಕ್ಕೇ ಮಣಿಯುವಷ್ಟು ನಾಜೂಕು, ಅವು!
- Read more about ಒಗ್ಗಟ್ಟಿನಲ್ಲಿ ಬಲವಿದೆ!
- 1 comment
- Log in or register to post comments