'ಜ್ಞಾನಪಠ್ಯಗಳು' ಕನ್ನಡದಲ್ಲಿ ದೊರೆತರೆ ಜನ ಓದ್ತಾರೋ? ಇಲ್ಲವೋ?

'ಜ್ಞಾನಪಠ್ಯಗಳು' ಕನ್ನಡದಲ್ಲಿ ದೊರೆತರೆ ಜನ ಓದ್ತಾರೋ? ಇಲ್ಲವೋ?

ಬರಹ

ಯಾವುದೇ ಭಾಷೆಯಲ್ಲಿ ಸಾಹಿತ್ಯಕ ಪಠ್ಯಗಳು ಅತಿ ಹೆಚ್ಚು ಅನುವಾದವಾಗುತ್ತವೆ. ಕನ್ನಡದಲ್ಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಆದರೆ. ಜ್ಞಾನಪಠ್ಯಗಳು ಅಂದರೆ, ಮಾನವಿಕಗಳು(ಸಾಹಿತ್ಯವನ್ನು ಹೊರತುಪಡಿಸಿ), ಸಮಾಜ ವಿಜ್ಞಾನಗಳು, ವಿಜ್ಞಾನಗಳಿಗೆ ಸಂಬಂಧಿಸಿದ ಪಠ್ಯಗಳು ಕನ್ನಡಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅನುವಾದವಾಗಿಲ್ಲ. ಮೈಸೂರು ವಿಶ್ವವಿದ್ಯಾಲಯ 70-80ರ ದಶಕದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಪುಸ್ತಕಗಳನ್ನು ಪ್ರಕಟಿಸಿದರೂ ಅದಕ್ಕೆ ಸರಿಯಾದ ಪ್ರತಿಕ್ರಿಯೆ ದೊರಕಲಿಲ್ಲ. ಆದರೆ, ಆಗಿನ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ತುಂಬಾ ವ್ಯತ್ಯಾಸವಿದೆ. ಈಗಿನ ಸಂದರ್ಭದಲ್ಲಿ ನವಕರ್ನಾಟಕ ಪ್ರಕಾಶನದವರು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಅದಕ್ಕೆ ಉತ್ತಮ ಪ್ರತಿಕ್ರಿಯೆಯೂ ದೊರಕುತ್ತಿದೆ. ನನಗನಿಸುವ ಹಾಗೆ, ಇಂದಿನ ಪೀಳಿಗೆಯ ಯವಕರಲ್ಲಿ 'ಕನ್ನಡ ಪ್ರಜ್ಞೆ' ಸಾಕಷ್ಟು ಸುಧಾರಿಸುತ್ತಿದೆ. ಕನ್ನಡದಲ್ಲಿ ಬರೆಯುವ, ಕನ್ನಡ ಪುಸ್ತಕಗಳನ್ನು ಓದುವವರು ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಾಗಾಗಿ, ಇಂತಹ ಸಂದರ್ಭದಲ್ಲಿ ರೋಮಿಲಾ ಥಾಪರ್, ಕೋಸಂಬಿ, ಅಮರ್ತ್ಯ ಸೇನ್ ಮುಂತಾದವರ ಕೃತಿಗಳು ಕನ್ನಡದಲ್ಲಿ ದೊರತೆರೆ ವಿದ್ಯಾರ್ಥಿಗಳಾಗಲಿ, ಶಿಕ್ಷಕರಾಗಲಿ, ಸಾಮಾನ್ಯ ಜನರಾಗಲಿ ಓದುತ್ತಾರೆಯೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet