ಬರಲಿದೆ ಹೊಸ ವರುಷ
ಕವನ
ಬರಲಿದೆ ಹೊಸ ವರುಷ
ತರಲಿದೆ ಹೊಸ ಹರುಷ ||
ಹೊಸತನಕಿರಲಿ ತವಕ
ಗುರಿತಲುಪುವ ತನಕ
ಬೇಕಿದೆ ಬಿಡುಗಡೆ ಸತತ
ಬಂಧನ ಸಾಕು ಎನುತ ||
ಬರಲಿದೆ ಹೊಸ ವರುಷ
ತರಲಿದೆ ಹೊಸ ಹರುಷ ||
ಅರಳಲಿ ಹೊಸ ಚಿಗುರೀಗ
ನಗುಮೊಗ ಹೊಮ್ಮಲಿ ಬೇಗ
ಭಯವಳಿಯಲಿ ನಮಗಾಗ
ಚೇತನದೊಳಗನುರಾಗ ||
ಬರಲಿದೆ ಹೊಸ ವರುಷ
ತರಲಿದೆ ಹೊಸ ಹರುಷ ||
ಪ್ರಳಯದ ಭೀತಿಯ ಬಿಡಿರಿ
ಹುರುಪನು ಮೈಗೂಡಿಸಿರಿ
ಹೊಸಬಗೆಯನು ಕಾಣಿಸಿರಿ
ಎನ್ನುತಲಿದೆ ಸಡಗರಿಸಿ ||
ಬರಲಿದೆ ಹೊಸ ವರುಷ
ತರಲಿದೆ ಹೊಸ ಹರುಷ ||
- ಸದಾನಂದ
Comments
ಉ: ಬರಲಿದೆ ಹೊಸ ವರುಷ
In reply to ಉ: ಬರಲಿದೆ ಹೊಸ ವರುಷ by raghumuliya
ಉ: ಬರಲಿದೆ ಹೊಸ ವರುಷ
ಉ: ಬರಲಿದೆ ಹೊಸ ವರುಷ
In reply to ಉ: ಬರಲಿದೆ ಹೊಸ ವರುಷ by gopaljsr
ಉ: ಬರಲಿದೆ ಹೊಸ ವರುಷ