ಮನಸ್ಸು ತಿಳಿಯಾಗಬೇಕು

ಮನಸ್ಸು ತಿಳಿಯಾಗಬೇಕು

  ಮನಸ್ಸು ತಿಳಿಯಾಗಬೇಕು


ಒಮ್ಮೆ ಗುರುಗಳ ಬಳಿ ಶಿಷ್ಯನೋರ್ವನು ಬಂದನು.  
"ಗುರುಗಳೇ,  ನನಗೇಕೋ ಈ ಜೇವನವೇ ಬೇಸರವಾಗಿದೆ,  ಮನಸ್ಸಿನ್ನಲ್ಲಿ ಏನೋ ಕೋಲಾಹಲ,  ಏನೋ ಚಿಂತೆ,  ಸಂಸಾರದ ಒತ್ತಡ, ಸಾಕಾಗಿದೆ,
ಇಲ್ಲೇ ಈ ಕಾನನದಲ್ಲೆ ತಪ್ಪಸ್ಸು ಮಾಡೋಣ ಎಂದೆಣಿಸಿ ನಿಮ್ಮ ಬಳಿ ಬಂದೆ.  ದಯಮಾಡಿ ಅನುಗ್ರಹಿಸಿ" ಎಂದು ಅಂಗಲಾಚಿದ.
"ಬಹಳ ತತ್ವ ಪರಿಣಿತ ನೀನು, ನಿನ್ನಂತಹವರು ಈ ರೀತಿ ಪಲಾಯನ ವಾದಕ್ಕೆ ಬೆಲೆ ಕೊಡಬಾರದು,  ಇಂದು ವಿರಮಿಸು, ನಾಳೆ ನೋಡೋಣ" ಎಂದರು ಗುರುಗಳು.
ಬೆಳಿಗ್ಗೆ ಎಲ್ಲರೊ ಗುರುಗಳೊಡನೆ, ನದಿ ಸ್ನಾನಕ್ಕೆ ಹೊರಟರು.
ಕಾನನದಲ್ಲಿ ಕಾಡಾನೆಗಳು ನದಿಯಲ್ಲಿ ಮಿಂದು, ಆಚೆ ದಡಕ್ಕೆ ಹೋಗುತ್ತಿದ್ದವು.
"ಓ, ಇದೇನು ನೀರಲ್ಲ ಬಗ್ಗಡವಾಗಿದೆ,  ಇದರಲ್ಲಿ ಈಗ ಸ್ನಾನ ಮಾಡಲಾಗದು" ಎಂದು ಎಲ್ಲರೊ ಕಾಯುತ್ತ ಕುಳಿತರು.
ಸ್ವಲ್ಪ ಸಮಯದ ನಂತರ ಬಗ್ಗಡವೆಲ್ಲ ಹೋಗಿ ನೀರು ತಿಳಿಯಾಯಿತು.
ಗುರುಗಳು ಶಿಷ್ಯನಿಗೆ "ಮೊದಲು ಸ್ನಾನ ಮುಗಿಸಿ ಬಾ" ಎಂದರು.
ನಂತರ ಹೇಳಿದರು
" ನೋಡಪ್ಪ, ನಮ್ಮ ಮನಸ್ಸು ಆ ನದಿಯ ಹಾಗೆ, ಹರಿಯುತ್ತಾ ಮುಂದೆ ಓಡುತ್ತಿರುತ್ತದೆ,  ನಮಗೆ ಬರುವ , ದುಗುಡ ದುಮ್ಮಾನಗಳು ಆನೆಯ ತರ ಕಂಡರೂ ಅದು ಸ್ವಲ್ಪ ಸಮಯವೇ,  ಹೇಗೆ ಬಗ್ಗಡವೆಲ್ಲಾ ಹೋಗಿ ನೀರು ತಿಳಿಯಾಗುವವರೆಗೊ ನಾವು ಕಾದೆವೋ, ಹಾಗೆ ತಾಳ್ಮೆ ಇರಬೇಕು,  ಮನಸ್ಸು ತಿಳಿಯಾಗಬೇಕು,  ನೀನು ತಪ್ಪಸ್ಸು ಮಾಡಲು ಕೂತರೆ ಇಲ್ಲಿದ್ದ ಮನಸ್ಸೇ ತಾನೆ ಅಲ್ಲಿಯೂ ಕೂಡ.  ಸುಮ್ಮನೆ ಮನೆಗೆ ಹೋಗಿ ನಿನ್ನ ಸಂಸಾರದೊಂದಿಗೆ ಸುಖವಾಗಿರು,  ಬೇರೆಯವರಿಗೂ ದಾರಿದೀಪವಾಗಿರು"  ಎಂದು ಕಳುಹಿಸಿಕೊಟ್ಟರು.


                                                                                                -ಮಧ್ವೇಶ್.


 

Comments