ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನನ್ನ ಬೆಳದಿಂಗಳ ಬಾಲೆ

ಬೆಳದಿಂಗಳ ಬೆಳಿಕಿನಲಿ.

ಬರುವಾಗ ನೀ ಬಳುಕುತಲಿ..

ನಿನ್ನ ಕಣ್ಣೋಟ ನನ್ನ ಮನಸು ಕೆಣುಕುತಲಿ..

ಹುಚ್ಚೆದ್ದು ಕುಣಿದೆನು ನಾನು ಹರುಷದಲಿ...

ನನ್ನ ಹುಚ್ಚು ಕಂಡ ಆ ಚಂದಿರ ಬಾನಲಿ..

ಮರೆಯಾದನು ಮೋಡದ ಮರೆಯಲಿ.....

 

ನಿಮ್ಮ ಒಡನಾಟದಿಂದ ಚಿಂತೆಗೆ ಬೇಸರವಾಗುವುದನ್ನು ತೃಪ್ತಿ ಎನ್ನಬಹುದು--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೯

(೩೦೧) ಸತ್ತ ವ್ಯಕ್ತಿಗಳು ಕನಸಿನಲ್ಲಿ ಮಾತ್ರ ನಮ್ಮನ್ನು ಭೇಟಿ ಮಾಡುವುದರಿಂದ, ಎಚ್ಚರದ ಸ್ಥಿತಿಯ ಬಗ್ಗೆ ಏನೋ ಎಡವಟ್ಟಿದೆ.

(೩೦೨) ನೀವು ಎಂದಾದರೂ ನಕ್ಷತ್ರಗಳನ್ನು ನೋಡಿರುವಿರ? ಹೌದೆಂದಾದರೆ ನೀವು ಸುಳ್ಳರು, ಏಕೆಂದರೆ ನಿಮಗೆ ಕಂಡ ನಕ್ಷತ್ರಗಳಲ್ಲನೇಕವು ಈಗಾಗಲೇ ಸತ್ತು ಸ್ವರ್ಗ ಸೇರಿವೆ. ಇಲ್ಲವೆಂದಾದರೂ ನೀವು ಅನುಮಾನಿಗಳುಃ ಏಕೆಂದರೆ ನಕ್ಷತ್ರಗಳಲ್ಲಿ ಕೆಲವು ಇನ್ನೂ ಉಳಿದಿರುವ ಸಾಧ್ಯತೆ ಇದೆ!

(೩೦೩) ತೃಪ್ತಿಕರ ಭಾವವೆಂಬುದು ಖುಷಿಯಾಗಿರುವುದಲ್ಲ. ಬದಲಿಗೆ ಅದು ಎಲ್ಲ ಚಿಂತೆ, ಯೋಚನೆಗಳು ನಿಮ್ಮ ಒಡನಾಟದಿಂದ ಬೇಸರಗೊಳ್ಳುವುದೇ ಆಗಿದೆ!

(೩೦೪) ನಮ್ಮ ಐಡಿಯಗಳನ್ನು ಪರಸ್ಪರ ಬದಲಿಸಿಕೊಳ್ಳುವ? ಹೇಗಿದೆ ನನ್ನ ಐಡಿಯ?

ಮೂಢ ಉವಾಚ -54

          


       ಮೂಢ ಉವಾಚ -54


ಸುಕ್ಕುಗಳು ಮೂಡಿಹವು ತಲೆಯು ನರೆತಿಹುದು|
ಮುಪ್ಪು ಬಂದಡರಿ ಕೈಕಾಲು ನಡುಗಿಹುದು||
ರೋಗಗಳು ಮುತ್ತಿ ಬಳಲಿ ಬೆಂಡಾಗಿಹರು|
ತೀರದಿಹ ಆಸೆಗೆ ಮುಪ್ಪಿಲ್ಲ್ಲವೋ ಮೂಢ||


 


ವೃದ್ಧಾಪ್ಯ ಮುಸುಕಿರಲು ದಂತಗಳುದುರಿರಲು|
ಕಿವಿಯು ಕೇಳದಿರೆ ನೋಟ ಮಂದವಾಗಿರಲು||
ತನುವು ಕುಗ್ಗಿರಲು ಯಾರು ಗಣಿಸುವರು ನಿನ್ನ|
ಜಯವಿರುವವರೆಗೆ ಭಯವಿಲ್ಲ ಮೂಢ||


******************


-ಕ.ವೆಂ.ನಾಗರಾಜ್.

ನಾ ನಿನಗೆ ಸೋಲುವುದಿಲ್ಲ ಓ ಜವರಾಯ

ಮನವೇಕೋ ಭಾರವಾಗಿದೆ ಇಂದು, ಗೊಂದಲದ ಗೂಡಾಗಿದೆ..
ಹಲವು ಚಿಂತೆಗಳು ಕಾಡುತಿವೆ ನನ್ನ ಈ ಮನದೊಳಗೆ..

ಏನೊಂದೂ ಮಾಡಲು ತೋಚದಾಗದೆ ನಿಂತಿಹೆನು ನಾ ಒಬ್ಬಂಟಿಯಾಗಿ..
ಶುಭಘಳಿಗೆಗೆ ಕಾಯುತ ಕಾಯುತ ಬಸವಳಿದು ಬರಿದಾದೆನು..

ಆಸೆಯ ಸೆಲೆಗಳು ಬತ್ತಿ ಮರುಭೂಮಿಯಂತಾಗಿದೆ ಮನವು..
ಮನದ ಮುಗಿಲಿನ ಕಾರ್ಮೋಡ ಸರಿದು ಮೂಡುವುದೇ ಕಾಮನಬಿಲ್ಲು?

ಏನೇ ಆದರೂ ನಾ ನಿನಗೆ ಸೋಲುವುದಿಲ್ಲ ಓ ಜವರಾಯ..
ಮನದ ದುಗುಡಗಳು ಕರಗುವುದೆಂಬ ಭರವಸೆಯಲ್ಲೇ ದೂಡುವೆನು ಕಾಲವನು

ಚುಟುಕು..

 

 

*ನೀ ನನ್ನ ಅಪ್ಪಿಕೊ ಎಂದೆ

ನನ್ನಲ್ಲಿ ಬಚ್ಚಿಕೊ ಅಂದೆ

ನಾ ದಪ್ಪ ಚಾದರ ತಂದೆ

ಬಾ ಮುಚ್ಚಿಕೊ ಅಂದೆ

 

* ಅವಳು ಕೊಟ್ಟಳು ಮುತ್ತು

ಎನಿಸಿದಳು ಮುತ್ತು ಹತ್ತು

ಹೇಳಿದಾ ಕೊಡಲೆ ಇನ್ನು ಕತ್ತು

ನೋಡಿ ಕಲಿತಿರುವ ನೀತಿ ಪಾಠ....

ನಮ್ಮ ಊರಿಂದ ನನ್ನ ಮಡದಿಯ ದೂರದ ಸಂಭಂಧಿ ಬಂದಿದ್ದ. ಹೆಸರು ಸುರೇಶ. ಅವನು ನಾನು ತುಂಬಾ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಕಡೆಗೆ ಒಂದು ದಿನ ಅಂಕಲ್ ಮದುವೆ ಮಾಡಿಕೊಳ್ಳಬೇಕೆ ಅಥವ ಬೇಡವೇ. ನಾನು ತುಂಬಾ ಜನರಿಗೆ ಇದರ ಬಗ್ಗೆ ಕೇಳಿದ್ದೇನೆ. ನನಗೆ ಇದುವರೆಗೆ ಕೂಡ ಉತ್ತರ ಸಿಕ್ಕಿಲ್ಲ, ನೀವಾದರೂ ಹೇಳಿ ಎಂದು ಪೀಡಿಸುತ್ತಿದ್ದ. ಅವನಿಗೆ ಏನು ಉತ್ತರ ಹುಡುಕಬೇಕೆಂದು ತಡಕಾಡಿ ಸುಮ್ಮನಾಗಿದ್ದೆ. ಮತ್ತೆ ಮರುದಿನ ನನ್ನ ಆಫೀಸ್ ರಜೆ ಇತ್ತು. ನಾನು ಅವನಿಗೆ ನಿನ್ನೆ ಒಂದು ಪ್ರಶ್ನೆ ಕೇಳಿದ್ದೇಯಲ್ಲಾ?. ಇವತ್ತು ಅದರ ಉತ್ತರ ಹೇಳುತ್ತೇನೆ. ನಮ್ಮಿಬ್ಬರನ್ನೂ ಗಮನಿಸು, ಆಮೇಲೆ ನಿನಗೆ ತಿಳಿಯುತ್ತೆ ಮದುವೆ ಬೇಕಾ ಅಥವಾ ಬೇಡವಾ ಎಂದು ಅವನಿಗೆ ಹೇಳಿದೆ.

ಪ್ರೀತಿ ಮರೆತಾಗ..

ನಾ ನಿನ್ನ ಮರೆತಾಗ   

ನೀ ನನ್ನ ನೆನೆದಾಗ 

 

ನನ್ನದೆಯ ಬಡಿತ       

ನಿನಗಾಗಿ ಮಿಡಿದಾಗ 

 

ಆ ನಿನ್ನ ನೆನಪು       

ಅಲೆಯಾಗಿ ಬಂದಾಗ 

 

ನನ್ನೆದೆಯ ಪ್ರೀತಿ 

ಹಬ್ಬಿ ಬೆಳೆದಾಗ 

 

ನೀ ನನ್ನ ಹೆಸರು 

ಮರೆತು ಬಿಟ್ಟಾಗ 

 

ಈ ನಿನ್ನ ಪ್ರೀತಿ 

ಕರಗಿ ಹೋದಾಗ 

 

ನೀನಿಲ್ಲದ ಬದುಕ 

ಬಾಡಿದ ಹೂಹಾಂಗ

 

ನೆನಪಿನ ಜೀವ 

ಅಗಲಿ ಹೋದಾಗ 

 

ನಿನ್ನ ಜೊತೆಯ ಉಸಿರು 

ನನ್ನನ್ನು ಮರೆತಾಗ 

 

ನನ್ನಿನ್ನ ಹೆಸರು 

ಅಳಿಸಿ ಹಾಕಿದಾಂಗ

 

ಆ ನಿನ್ನ ಪ್ರೀತಿ 

ನೆನಪು ಬಂದಾಗ