ನನಗೇನು ಬೇಕು ಎಂಬುದ ನಾ ಅರಿತರೆ...!
ನನಗೇನು ಬೇಕು ಎಂಬುದ ನಾ ಅರಿತರೆ...!
- Read more about ನನಗೇನು ಬೇಕು ಎಂಬುದ ನಾ ಅರಿತರೆ...!
- 7 comments
- Log in or register to post comments
ನನಗೇನು ಬೇಕು ಎಂಬುದ ನಾ ಅರಿತರೆ...!
ಅಂಗರಚನೆ ಅಭ್ಯಾಸಕ್ಕೆ ಗೂಗಲ್ ಬಾಡಿ ಬ್ರೌಸರ್
ಚೀನಾದ ಹೊಸ ಸರ್ಚ್ ಇಂಜಿನ್ "goso.cn" ಅನ್ನು ಹೊರ ತಂದಿದೆ.ಇದನ್ನು "ಪೀಪಲ್ಸ್ ಡೈಲಿ " ಪತ್ರಿಕೆ ವರದಿ ಮಾಡಿದೆ.ಇದು ಆಡಳಿತ ಪಕ್ಷವಾದ "ಕಮ್ಯುನಿಸ್ಟ್ ಪಾರ್ಟಿ ಆಫ್ ಚೈನಾ "ಅವರ ಪತ್ರಿಕೆ.
ಇದೆಲ್ಲ ಬೆಳವಣಿಗೆಗಳು ಇದೇ ಮಾರ್ಚ್ ೨೦೧೦ ರಲ್ಲಿ ಗೂಗಲ್ ತನ್ನ ಚೈನೀಸ್ ಸರ್ಚ್ ಇಂಜಿನ್ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಿದ ನಂತರ ಕಂಡ ಮಹತ್ತರ ಬೆಳವಣಿಗೆ.
ಏಕಾಂಗಿಯಲ್ಲ ನೀ
ಓ ಮುದುಡಿದ ಮನವೇ,
ನೀ ಏಕಾಂಗಿಯಲ್ಲ
ಒಮ್ಮೆ ಈ ಕಡೆ ದೃಷ್ಟಿ
ಹಾಯಿಸಿ ನೋಡು
ನಿನ್ನ ಆ ನಿಷ್ಕಲ್ಮಷ
ಪ್ರೀತಿಗೆ, ಸ್ನೇಹಕ್ಕೆ,
ನಗುವಿಗೆ ಕಾದಿಹವು
ನೂರಾರು, ಸಾವಿರಾರು
ಜೀವಿಗಳು
ನೀನೋರ್ವನೇ
ಎಂಬ ಚಿಂತೆ ಬಿಡು
ಆಕಾಶದೆತ್ತರಕೆ ಏರುವ
ಆಸೆಯ ಏಕೆ ಪಕ್ಕಕ್ಕೆಸೆಯುವೆ?
ಪ್ರಕೃತಿ ಇದೆಲ್ಲವ
ನಿನಗಾಗಿಯೇ
ಸೃಷ್ಟಿಸಿಹಳು
ಯಾವ ಹಣ್ಣನ್ನೂ ಸೃಷ್ಟಿಸುವದಿಲ್ಲ
ಮಲೆನಾಡಿನ ಕೆಲವು ವಸ್ತುಸ್ಥಿತಿಗಳನ್ನು ಹಾಸ್ಯಭರಿತ ಧಾಟಿಯಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ. ನಿಮಗೆ ಇಷ್ಟವಾದರೆ ಸರಿ, ಇಲ್ಲದಿದ್ದರೆ ನಿಮ್ಮ ಸಮಯ ವ್ಯರ್ಥ ಮಾಡಿದ್ದಕ್ಕೆ ಕ್ಷಮೆಯಿರಲಿ,
1. ಭಟ್ರ ಮನೆ ಕೊಟ್ಟಿಗೆಯಲ್ಲಿ ನೇತು ಹಾಕಿರೋ ಚೀಲದಲ್ಲಿ ಕೋಳಿ ಕೂಗ್ತಿದೆ ಅಂದ್ರೆ, ಅವತ್ತು ಭಟ್ರ ಮನೇಲಿ ಹರಕೆ ಇದೆ ಅಂತ ಅರ್ಥ!
2. ದೀಪಾವಳಿ ಬಿಟ್ಟು ಬೇರೆ ಟೈಮಲ್ಲಿ ಪಟಾಕಿ ಅಥ್ವಾ ಈಡಿನ ಸೌಂಡು ಕೇಳ್ತು ಅಂದ್ರೆ, ಯಾರೋ ಹೊಗೆ ಹಾಕಿಸ್ಕೊಂಡಿದಾರೆ ಅಂತ ಅರ್ಥ!
3. ಮನೇಲಿ ನೆಲದ ಮೇಲೆ ರಕ್ತದ ಕಲೆ ಆಗಿದೆ ಅಂದ್ರೆ, ಯಾರೋ ತೋಟದಿಂದ ಇಂಬ್ಳ ಹತ್ತಿಸ್ಕೊಂಡು ಬಂದಿದಾರೆ ಅಂತ ಅರ್ಥ!
4. ಯಾರ್ದಾದ್ರೂ ಮನೇಲಿ ಹುರುಳಿ ಸಾರು ಆಗಿದೆ ಅಂದ್ರೆ, ಹೂಟೆ ಶುರುವಾಯ್ತು ಅಂತ ಅರ್ಥ!
ಇಷ್ಟು ದಿನ ರಜನಿ ಬಗ್ಗೆ ದಿನಕ್ಕೊಂದು ಸಂದೇಶಗಳು ಬರುತ್ತಿದ್ದವು. ಈಗ ಸಚಿನ್ ಸರಣಿ ಶುರುವಾಗಿದೆ ಎಂದೆನಿಸುತ್ತೆ. ಏಕೆಂದರೆ ನೆನ್ನೆ ನನ್ನ ಮೊಬೈಲ್ ಗೆ ಬಂದ ಸಂದೇಶವನ್ನು ನೋಡಿ ಹಾಗೆನಿಸಿತು. ಅದರ ಒಂದು ನೋಟ ಇಲ್ಲಿದೆ
೧) ನನ್ನ ಮಗ ಸಚಿನ್ ತೆಂಡೂಲ್ಕರ್ ಹಾಗೆ ಆಗಬೇಕು (ಬ್ರಯಾನ್ ಲಾರ, ವೆಸ್ಟ್ ಇಂಡೀಸ್)
೨) ನಾವು ಸೋತಿದ್ದು ಭಾರತ ಎಂಬ ತಂಡದ ಎದುರು ಅಲ್ಲ, ಸಚಿನ್ ಎಂಬ ಮಾಂತ್ರಿಕನ ಎದುರು (ವೆಟ್ಟೊರಿ, ನ್ಯೂಜಿಲೆಂಡ್ ನಾಯಕ)
೩) ಸಚಿನ್ ನಮ್ಮೊಂದಿಗೆ ವಿಮಾನದಲ್ಲಿದ್ದರೆ ಏನು ಅಪಘಾತ ಸಂಭವಿಸುವುದಿಲ್ಲ (ಹಶಿಮ್ ಆಮ್ಲ, ದಕ್ಷಿಣ ಆಫ್ರಿಕಾ)
೪) ಸಚಿನ್ ಬ್ಯಾಟ್ಟಿಂಗ್ ಗೆ ಬ್ಯಾಟ್ ಬೇಕೇ ಬೇಕೆಂದಲ್ಲ, ಆತ ಊರುಗೋಲಿಂದಲೂ ಆಡಬಲ್ಲ (ವಾಸಿಂ ಅಕ್ರಂ, ಪಾಕಿಸ್ತಾನ್)
೫) ಪ್ರಪಂಚದಲ್ಲಿ ಎರಡು ರೀತಿಯ ಬ್ಯಾಟ್ಸಮನ್ ಗಳು ಇದ್ದಾರೆ, ಒಂದು ಸಚಿನ್ ರೀತಿ ಆದರೆ, ಉಳಿದವರೆಲ್ಲ ಒಂದು ರೀತಿ (ಆಂಡಿ ಫ್ಲವರ್, ಜಿಂಬಾಬ್ವೆ)