ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಿಕಿಪೀಡಿಯ ಸಮ್ಮಿಲನ #೨

ವಿಕಿಪೀಡಿಯ ಕನ್ನಡದ ದ್ವಿತೀಯ ಸಮ್ಮಿಲನ  ಇದೇ ಶನಿವಾರದಂದು ಬೆಂಗಳೂರಿನಲ್ಲಿ ನಡೆಯಲಿದೆ.

ವಿಳಾಸ ಮತ್ತು ಸಮಯ ಈ ಕೆಳಕಂಡಂತೆ ಇರುತ್ತದೆ.
..
ದಿನಾಂಕ: ಡಿಸೆಂಬರ್ 25, ಶನಿವಾರ, 2010.
ಸಮಯ: ೧೦ ಗಂಟೆ ಬೆಳಿಗ್ಗೆ

ಅಲೆಗಳ ನೆಪದಲಿ...

ಬರಲೆ ನಾನು ನಿನ್ನ ಕೂಡಿ 

ಹೆಜ್ಜೆಯಿರದ ಹಾದಿಗೆ..

ಕಳ್ಳ ಸೂರ್ಯ ಕೆಂಗಡಲನು

ಕೂಡುವಾಗಿನೂರಿಗೆ..

 

ಮೊರೆವ ನೀರು ನಿನ್ನ ಮಾತ-

-ನಷ್ಟೆ ಬಸಿದು ಕೊಡುತಿದೆ

ಮುದ್ದೆ ಹೊಯಿಗೆ ಒದ್ದೆ ಕೈಗೆ 

ಬರೆಯುವಂತೆ ಕೆಣಕಿದೆ..

 

ನೂರು ಮಾತು ನುಡಿಯಲುಂಟು

ಅದರಲೊಂದು ಹೇಳಲೇ 

ದಿಗಿಲ ಮುಗಿಲ ಕಡಲ ಮಡಿಲ   

ಸೊಬಗಲೆಗಳ ನೆವದಲೆ..

 

ಬೆರಳ ತುದಿಗೆ ಬೆರಳು ತಾಕಿ

ನಿನ್ನ ಪ್ರೀತಿ ಹೀಗಿರಲಿ..

 

ನಗುವ ಮುಖವು ನಿಮ್ಮದಿರಲಿ
ನಿಮ್ಮ ದು:ಖದ ಗೆಳತಿ ನಾನಿರಲಿ 
ನನಗೆ ತಿಳಿದಿದೆ ನಿಮ್ಮ ಮನಸ್ಸು 
ಹೀಗಾಗಿ ಹೇಳುವೆ ನನ್ನ ಕನಸು 


ಮೌನವು ನಿಮ್ಮ ಪ್ರೀತಿಯಲ್ಲಿರಲಿ 
ಆದರೆ ಆ ಮೌನ ನಿಮ್ಮ 
ಮನಸ್ಸು ನೋವಿಸದಿರಲಿ


ಕೋಪವು ನಿಮ್ಮ ಪ್ರೀತಿಯಲ್ಲಿರಲಿ 
ಆದರೆ ಆ ಕೋಪ ನಿಮ್ಮ 
ಪ್ರೀತಿಯನ್ನು ಕಡಿಮೆ ಮಾಡದಿರಲಿ


ಹುಡುಗಾಟವು ನಿಮ್ಮ ಪ್ರೀತಿಯಲ್ಲಿರಲಿ 
ಆದರೆ ಆ ಹುಡುಗಾಟ ನಿಮ್ಮ 
ಜೀವನದ ಜೊತೆ ಆಟವಾಡದಿರಲಿ


ದು:ಖವು ನಿಮ್ಮ ಪ್ರೀತಿಯಲ್ಲಿರಲಿ 
ಆದರೆ ಆ ದು:ಖ ನಿಮ್ಮ 
ಜೀವನದಲ್ಲಿ ನಿರಾಸೆಯನ್ನು ತರದಿರಲಿ 

 

ಜೀವನ ಎಂಬ ಕಲ್ಪನೆ..

 ಜೀವನ ಎಂಬ ವಿಷಯದಲ್ಲಿ

 ಕಲ್ಪನೆಯೊಂದು ಸಾಕು

 ಈ ಕನಸಿನೆಂಬ ಕಲ್ಪನೆಯಲ್ಲಿ

 ಮನಸ್ಸೊಂದು ಬೇಕು

 ಮನವೆಂಬ ಮೃದುವಾದ ದುಂಬಿಯಲ್ಲಿ

 ಸಿಹಿತನದ ಗುಣ ಇರಬೇಕು

 ಸಿಹಿಯಾದ ಪ್ರೀತಿಯನ್ನು

 ದುಂಬಿಯಾದ ಮನವು ಹೀರಿಕೊಳ್ಳಬೇಕು

 ದ್ವೇಷವೆಂಬ ಕಹಿತನದಲ್ಲಿ

 ಪ್ರೀತಿಯನ್ನು ತುಂಬಬೇಕು

 ಹೀಗೆ ಜೀವನವು ಪ್ರೀತಿ ಮತ್ತು

 ಸಿಹಿತನದಿಂದ ಸಂಪತ್ಭರಿತವಾಗಿರಬೇಕು..

 

ಆ ನಾಕವೇ ಧರೆಗೆ ಇಳಿದು ಬಂದಂತಾಯಿತು

ಮಂಜು ಮಂಜು ಮಂಜು ಎಲ್ಲಿ ನೋಡಿದರಲ್ಲಿ ಮಂಜು..

ಈ ಮಂಜಲ್ಲಿ ನಿನ್ನೊಡನೆ ಕೈ ಹಿಡಿದು ನಡೆಯಬೇಕೆಂಬ 

ಆಸೆಯಾಗಿದೆ ಮಂಜು..

ಈ ಮಂಜ ನೋಡಿ ನೀ ಅಂಜಬೇಡ ಮಂಜು...

ನಿನ್ನ ಸನಿಹ ನಾನಿರುವವರೆಗೆ ಹೆದರಬೇಡ ನೀ ಮಂಜು...

 

ಈ ಮಂಜಲ್ಲಿ ನಿನ್ನೊಡನೆ ನಡೆಯುತಿರಲು..

ತಣ್ಣನೆ ಕುಳಿರ್ಗಾಳಿ ಸೋಕಿ ಝುಂ ಎಂದಿದೆ ಮನವು..

ನನ್ನೆದೆಯ ಹೂದೋಟದಲ್ಲಿ ಹೂವೊಂದು ಅರಳಿ

ನಿನ್ನ ಮುಡಿಯೇರಲು ತುದಿಗಾಲಲ್ಲಿ ನಿಂತಿದೆ..

 

ಎಲ್ಲೆಡೆಯೂ ತಣ್ಣನೆ ಹವೆಯ ಘಮ ತುಂಬಿರಲು..

ನೀ ಸನಿಹದಲ್ಲಿರಲು ಪುಳಕಗೊಂಡಿದೆ ಮನವು..

ನಿನ್ನ ಹೆಜ್ಜೆಯೊಂದಿಗೆ ನನ್ನ ಹೆಜ್ಜೆ ಸೇರಿಸಿ ನಡೆಯುತಿರಲು..

ಆ ನಾಕವೇ ಧರೆಗೆ ಇಳಿದು ಬಂದಂತಾಯಿತು...

 

ಮೌನ..

ಮಾತಲ್ಲಿ ಮೌನ ತುಂಬಿದೆ

ಮನಸ್ಸು ಒಡೆದರು ನೋವು ಕಾಡಿದೆ

ಭಸ್ಮದ ಚಿತೆಯಲಿ ಚಿಂತೆ ಕಾದಿದೆ

ಜೀವ ಅಳಿದರು ಜೀವನ ನಿಂತಿದೆ

ಏಕಾಂಗಿ ಹೃದಯಕೆ ನೆನಪು ಬಂದಿದೆ

ದುಃಖ ಸೊರಗಿ ಕಣ್ಣೀರು ಬತ್ತಿದೆ

ಲೋಕ ಮಾಯಾಲೋಕವೆನಿಸಿದೆ

ಸತ್ಯ-ಸುಳ್ಳು ಕವಲು ದಾರಿಯಾಗಿದೆ

ಪ್ರೀತಿ ಸರಸದ ದ್ವೇಷವಾಗಿದೆ

ಸ್ವಾರ್ಥವೇ ಗುಣದಲ್ಲಿ ನೆಲೆಸಿದೆ

ಸುಖಮಯ ಬದುಕು ಬಲು ಭಾರವಾಗಿದೆ

 

 

ಸರಸ..

ಮನದಾಳದಿಂದ ಮಹದಾಸೆಯೊಂದು

ಬೆನ್ನತ್ತಿ ಬಂದಿತು

ಕಗ್ಗತ್ತಲಲ್ಲಿ ಕಿರು ಬೆಳಕನ್ನು

ಹೆಕ್ಕಿ ಹುಡುಕಿತು

ಚಂದ್ರನ ಬೆಳಕಲ್ಲಿ ಮಂದದ

ಇರುಳಲಿ ಪ್ರೀತಿಯ ಕಾದಿತ್ತು

ಮಂದ ವಾಸನೆ ಮೆತ್ತು ಹಾಸಿಗೆ

ಇನಿಯನ ಕರೆದಿತು

ಸುಂದರ ಮೊಗವ ಸವಿಜೇನು ಹನಿಯ

ತಂಪು ತುಟಿಗಳು ಚುಂಬಿಸಿತು

ಕೆಂಪು ಕೆನ್ನೆಗೆ ಹೊಳೆವ ಕಣ್ಣಿಗೆ

ಮುತ್ತಿನ ಮಾಲೆ ಪೋಣಿಸಿತು

ಕಾಲ್ಗೆಜ್ಜೆ ನಾದವ ಕಾಲುಂಗುರ ಬೆರಳ

ಒಬ್ಬಟ್ಟಿನ ಹಾಗೆ ಸುತ್ತಾಡಿತು

ಕಾಣುವ ಸೊಂಟವ ಮೆಲ್ಲಗೆ ಕಚ್ಚಿ

ಮುತ್ತಿಟ್ಟು ಮಲ್ಲಿಗೆ ಮಳೆಯಾಯಿತು

ಉಸಿರು ಹಸಿರಾಗಿ ಮೌನ ಮಾತಾಗಿ

ತುಟಿಯ ಅಂಚು ಪ್ರೀತಿಯ

ಓಲೆ ಬರೆದಿತು

ಸ್ತ್ರೀ..

   ಸ್ತ್ರೀ ಜನ್ಮಕೆ ಸಾಠಿಯಾರು ಇಲ್ಲ. ಸ್ವಾರ್ಥದ ಹಂಗಿಲ್ಲ. ದುಖಃವನ್ನು ನುಂಗುತ, ಕಷ್ಟವನ್ನು ಸಹಿಸುತ, ತ್ಯಾಗ ಧರ್ಮವನ್ನು ಹಿಡಿದು

ನಡೆಯುವ ಜಾತಿ ಈ ಸ್ತ್ರೀ ಧರ್ಮವು. 'ಹೆಣ್ಣೆ ನೀನೆಕೆ ಹುಟ್ಟಿದೆ ಈ ಭೂಮಿಯ ಮೇಲೆ..' ಎಂಬ ವಾಕ್ಯವನ್ನು ಹೆಣ್ಣು ಮಗು ಹುಟ್ಟಿದ

ಸಮಯವೆ ಆಡುತ್ತಾರೆ. ಯಾವ ಕರ್ಮವೋ, ಯಾವ ರೀತಿಯ ಪುಣ್ಯವೋ, ಯಾವ ಸಂಧರ್ಭದಲ್ಲಿ ಈ ಹೆಣ್ಣೆಂಬ ಜಾತಿಯನ್ನು

ಸೃಷ್ಟಿಸಿದನೊ! ಆ ದೇವರು ದೊಡ್ಡ ತಪ್ಪಿನ ಶಿಕ್ಷೆಗಾಗಿ ಹುಟ್ಟಿಸಿದನೋ ಅಥವಾ ಕನಿಕರದ ಭಾವವಿಲ್ಲವೋ? ಪಾಪಿ ಮನಸ್ಸಿನ ಹೃದಯವೋ?

ಏಕೆ ಈ ಹೆಣ್ಣನ್ನು ಕೀಳೆಂದು ತಿಳಿದನೋ? ಇವೆಲ್ಲ ಮನಸ್ಸಿನ ಮಾತನ್ನು ಯಾರು ಕೇಳುವರು ಎಂದು ಹೆಣ್ಣಿನ ಜೀವ ಪರಿತಪಿಸುತ್ತಿರುತ್ತದೆ.