ನಿನ್ನ ಪ್ರೀತಿ ಹೀಗಿರಲಿ..

ನಿನ್ನ ಪ್ರೀತಿ ಹೀಗಿರಲಿ..

ಕವನ

 

ನಗುವ ಮುಖವು ನಿಮ್ಮದಿರಲಿ
ನಿಮ್ಮ ದು:ಖದ ಗೆಳತಿ ನಾನಿರಲಿ 
ನನಗೆ ತಿಳಿದಿದೆ ನಿಮ್ಮ ಮನಸ್ಸು 
ಹೀಗಾಗಿ ಹೇಳುವೆ ನನ್ನ ಕನಸು 


ಮೌನವು ನಿಮ್ಮ ಪ್ರೀತಿಯಲ್ಲಿರಲಿ 
ಆದರೆ ಆ ಮೌನ ನಿಮ್ಮ 
ಮನಸ್ಸು ನೋವಿಸದಿರಲಿ


ಕೋಪವು ನಿಮ್ಮ ಪ್ರೀತಿಯಲ್ಲಿರಲಿ 
ಆದರೆ ಆ ಕೋಪ ನಿಮ್ಮ 
ಪ್ರೀತಿಯನ್ನು ಕಡಿಮೆ ಮಾಡದಿರಲಿ


ಹುಡುಗಾಟವು ನಿಮ್ಮ ಪ್ರೀತಿಯಲ್ಲಿರಲಿ 
ಆದರೆ ಆ ಹುಡುಗಾಟ ನಿಮ್ಮ 
ಜೀವನದ ಜೊತೆ ಆಟವಾಡದಿರಲಿ


ದು:ಖವು ನಿಮ್ಮ ಪ್ರೀತಿಯಲ್ಲಿರಲಿ 
ಆದರೆ ಆ ದು:ಖ ನಿಮ್ಮ 
ಜೀವನದಲ್ಲಿ ನಿರಾಸೆಯನ್ನು ತರದಿರಲಿ 

 

ನಗುವು ನಿಮ್ಮ ಪ್ರೀತಿಯಲ್ಲಿರಲಿ 
ಆದರೆ ಆ ನಗುವು ನಿಮ್ಮನ್ನು 
ಪ್ರತಿ ಕ್ಷಣವೂ ಸುಖವಾಗಿರಲಿ 

 

ಕನಸು ನಿಮ್ಮ ಪ್ರೀತಿಯಲ್ಲಿರಲಿ
ನನ್ನ ಕನಸು ನಿಮ್ಮ ಮನಸ್ಸಿನಲ್ಲಿರಲಿ 
ಈ ಪ್ರೀತಿಯ ಕನಸ್ಸನ್ನು ನೀವು ಮರೆಯದಿರಿ 
ಹೀಗಿರುವ ನನ್ನ ಕನಸ್ಸನ್ನು ನೀವು ನಿಜ ಮಾಡಿರಿ 

Comments