ಅಭ್ಯಾಸ ೭ ಕುಮಾರವ್ಯಾಸನ ಕರ್ಣಾಟ ಭಾರತ ಕಥಾ ಮಂಜರಿ ವ್ಯಾಖ್ಯಾನ : ಖ್ಯಾತ ವಿಮರ್ಶಕ ಶ್ರೀಮಾನ್ ವಿಜಯ ಶಂಕರ ಅವರಿಂದ
ಅಭ್ಯಾಸ ೭
ಕುಮಾರವ್ಯಾಸನ ಕರ್ಣಾಟ ಭಾರತ ಕಥಾ ಮಂಜರಿ
ಶ್ರೀಯುತ ಸ್ಕಂದರ ಮನೆಯಲ್ಲಿ
ಈ ಸಾರಿಯ ಅಭ್ಯಾಸದ ನಲಿವು ಕುಮಾರವ್ಯಾಸ ಭಾರತ ಮಹಾ ಕಾವ್ಯ
ಈ ಕಾವ್ಯವನ್ನು ಮೂರು ಅಭ್ಯಾಸದ ವೇಳೆಯಾಗಿ ಮೀಸಲಿಟ್ಟು ಮೂರು ಹಂತಗಳಲ್ಲಿ ನಮ್ಮ ಕಣ್ಣ ಮುಂದೆ ಈ ಮಹಾ ಕಾವ್ಯವನ್ನು ಕಟ್ಟಿಡಲು ನಿರ್ಧರಿಸಿದ್ದರು, ಎಚೆಸ್ವೀ ಮತ್ತು ರಾಜಶೇಖರವರು.
ಮೊದಲ ಭಾಗ ನಮ್ಮ ನಿಮ್ಮೆಲ್ಲರ ನೆಚ್ಚಿನ ವಿಮರ್ಶಕ ಶ್ರೀಯುತ ವಿಜಯ ಶಂಕರರಿಂದ
ಮುಂದಿನ( ಎರಡನೆ ಭಾಗ) ಅಭ್ಯಾಸ ಜನವರಿ ೧೬ ರವಿವಾರ ದಂದು ಶ್ರಿಮತಿ ಸತ್ಯವತಿ ಮತ್ತು ಶ್ರೀಮತಿ ಪದ್ಮಿನಿರಾಮಮೂರ್ತಿ ಅವರಿಂದ " ಅಕ್ಷಯ ಪಾತ್ರ" ದ ಗಮಕ ವಾಚನ
ಮೂರನೆಯ ( ಅಂತಿಮ ಭಾಗದ ಅಭ್ಯಾಸ- ಈ ಕುಮಾರವ್ಯಾಸ ಭಾರತ ಕಥೆಯಲ್ಲಿ) ಗುರುಗಳೇ ಓದಿ ವ್ಯಾಖ್ಯಾನಿಸಲಿರುವರು.
ಕಾವ್ಯ, ಸಾಹಿತ್ಯಾಸಕ್ತರಿಗೆ ಮಹಾ ಮಜ್ಜನವಿದು.
ಅಂತೆಯೆ ಇಂದಿನ ವಿಜಯ ಶಂಕರರ ಕಾವ್ಯ ಮಜ್ಜನದಲ್ಲಿದ್ದು ಬಂದವರೇ ಪುಣ್ಯವಂತರು.
ನನಗಂತೂ ಇವತ್ತು ಇಬ್ಬಿಬ್ಬರು ಮಹಾನ್ ಆತ್ಮಗಳ ಉನ್ನತ ಮಹತ್ವದ ಅರಿವಿನ ಮಜ್ಜನವಾಯ್ತು.
ಅಬ್ಯಾಸಕ್ಕೆ ಬಂದವರೆಲ್ಲರೂ ಹದಿನೈದನೇ ಶತಮಾನಕ್ಕೆ ವಿಜಯ ಶಂಕರರ ಕಾಲಾಯಾನದಲ್ಲಿ ಪಯಣಿಸಿ ಆನಂದ ಪಟ್ಟರು.
ನಮ್ಮೆಲ್ಲರ ನಡುವೆ ಗುರುಗಳಾದ ಎಚ್ ಎಸ್ವೀಯವರೂ ಸೇರಿಕೊಂಡರು.
ಇಡೀ ಕುಮಾರವ್ಯಾಸನನ್ನೇ( ಭಾರತ ಕಥೆಯನ್ನೇ) ಅರೆದು ಕುಡಿದ ಮಹನೀಯ ಈ ವಿಜಯ ಶಂಕರರು ಕುಮಾರ ವ್ಯಾಸನ ಭಾರತ ಕಾವ್ಯದ ತನ್ನದೇ ಕ್ರಮದಲ್ಲಿ ವಿಶಿಷ್ಟ ಪದ್ಯಗಳನ್ನು ಹೆಕ್ಕಿ ತೆಗೆದಿದ್ದು ಒಂದೊಂದು ಪದ್ಯವನ್ನೂ ಹಿನ್ನೆಲೆ ಸಮೇತ ವಿವರಿಸುತ್ತಾ ಇಡೀ ಭೂಮಂಡಲದ ದಾರ್ಶನೀಕರು, ಕವಿಗಳು ವಿಜ್ಞಾನಿಗಳನ್ನೂ ಅವರವರ ನುಡಿಗಟ್ಟು, ಮಾತು, ಮತ್ತು ಅಭಿವ್ಯಕ್ತತೆಯಲ್ಲಿಯೇ ವಿವರಿಸುತ್ತಿದ್ದುದು ಒಂದು ವಿಶೇಷ. ಮಧ್ಯೆ ಮಧ್ಯೆ ಅಡಿಗರು ಬೇಂದ್ರೆಯವರು, ಕುವೆಂಪು, ಶಂಕರ ಭಟ್ಟರನ್ನೂ ಅವರವರ ದೃಷ್ಟಿ ಕೋನದಲ್ಲೇ ವಿಹರಿಸುತ್ತಾ, ಕುಮಾರ ವ್ಯಾಸನ ಭಾರತವನ್ನು ನಮ್ಮ ಕಣ್ಣೆದುರಿಗೇ ಬಿಚ್ಚಿಟ್ಟರು.
ಈ ಸಾರಿಯ ಅಭ್ಯಾಸ ಸಾಹಿತ್ಯಾಸಕ್ತರಾಗಿದ್ದೂ ಸ್ಕಂದರವರ ಮನೆಯಲ್ಲಿ ನಡೆದ ಈ ಕಾಲಯಾನಕ್ಕೆ ತಲುಪಲಾರದವರಿಗೂ ಅಷ್ಟೇ ಸಂತೋಷವನ್ನು ನೀಡಲಿದೆ. ಏಕೆಂದರೆ ಅಲ್ಲಿ ನಡೆದ ಪ್ರತಿಯೊಂದೂ ಘಟನೆಯ ವಿವರ ನಿಮ್ಮ ಮುಂದಿಡಲು ಸಜ್ಜಾಗಿಯೇ ನಾನು ಅಲ್ಲಿಗೆ ತೆರಳಿದ್ದೆ. ಹಿಂದೆಂದಿಗಿಂತಲೂ ಜಾಸ್ತಿಯೇ ತಯಾರಿ ನಡೆಸಿದ್ದೆ, ಇಲ್ಲಿಯವರೆಗೆ ನನ್ನ ಪ್ರಯತ್ನದಲ್ಲಿ ನನ್ನ ಕ್ಯಾಮರಾ ಸಾಕಷ್ಟು ಬಲವಾಗಿಯೇ ಇದ್ದರೂ ಎರಡು, ಎರಡೂವರೆ ಘಂಟೆಗಳ ಈ ಅಭ್ಯಾಸವನ್ನು ಕಟ್ಟಿಡಲು ಅದರ ಬ್ಯಾಟರಿಯ ಶಕ್ತಿ ಸಾಕಾಗುತ್ತಿರಲಿಲ್ಲ. ಈ ಸಾರಿ ಎರಡು ಬ್ಯಾಟರಿ ಇಟ್ಟುಕೊಂಡಿದ್ದೆ. ಅದಕ್ಕೇ ಈ ಸಾರಿಯ ಎಲ್ಲಾ ವಿಷಯಗಳನ್ನೂ ನೀವು ನಮ್ಮೆಲ್ಲರ ಹಾಗೆಯೇ ವಿಜಯ ಶಂಕರರು ಹೇಳುವ ಹಾಗೆ ಕಿವಿಯಿಂದಲೇ ರುಚಿ ನೋಡ ಬಹುದು.
ಇವತ್ತಿನ ಅಭ್ಯಾಸದ ಸಂಪೂರ್ಣ ದೃಶ್ಯಾವಳಿಗಳಿಗಾಗಿ ಇಲ್ಲಿ ನೋಡಿ: www.youtube.com/user/rgbellal/ 5.12.2010
1. http://www.youtube.com/watch?v=CLG_aoUfCJw
2. http://www.youtube.com/watch?v=hunLXdiYDOQ
3. http://www.youtube.com/watch?v=9X2Yd9uhpMY
4. http://www.youtube.com/watch?v=aErZEI1UwFw
5. http://www.youtube.com/watch?v=sCR-oYAIEaU
6. http://www.youtube.com/watch?v=DjbVpUzAUVU
7. http://www.youtube.com/watch?v=bIL-QDfLilc
8. http://www.youtube.com/watch?v=FeQWb8-zmeA
9. http://www.youtube.com/watch?v=ZqOzOZodTCo
10. http://www.youtube.com/watch?v=Z91jmLEJzbY
11. http://www.youtube.com/watch?v=TtW9j9-ScsA
12. http://www.youtube.com/watch?v=XYLdWa4zlKQ
13. http://www.youtube.com/watch?v=JvpEilxqqJY
14. http://www.youtube.com/watch?v=zm0dPIAr_RM
15. http://www.youtube.com/watch?v=KcGIHCPsqqM
16. http://www.youtube.com/watch?v=Y24PKSGIZK4
Comments
ಉ: ಅಭ್ಯಾಸ ೭ ಕುಮಾರವ್ಯಾಸನ ಕರ್ಣಾಟ ಭಾರತ ಕಥಾ ಮಂಜರಿ ವ್ಯಾಖ್ಯಾನ ...
ಉ: ಅಭ್ಯಾಸ ೭ ಕುಮಾರವ್ಯಾಸನ ಕರ್ಣಾಟ ಭಾರತ ಕಥಾ ಮಂಜರಿ ವ್ಯಾಖ್ಯಾನ ...