ಸ್ತ್ರೀ..

ಸ್ತ್ರೀ..

   ಸ್ತ್ರೀ ಜನ್ಮಕೆ ಸಾಠಿಯಾರು ಇಲ್ಲ. ಸ್ವಾರ್ಥದ ಹಂಗಿಲ್ಲ. ದುಖಃವನ್ನು ನುಂಗುತ, ಕಷ್ಟವನ್ನು ಸಹಿಸುತ, ತ್ಯಾಗ ಧರ್ಮವನ್ನು ಹಿಡಿದು

ನಡೆಯುವ ಜಾತಿ ಈ ಸ್ತ್ರೀ ಧರ್ಮವು. 'ಹೆಣ್ಣೆ ನೀನೆಕೆ ಹುಟ್ಟಿದೆ ಈ ಭೂಮಿಯ ಮೇಲೆ..' ಎಂಬ ವಾಕ್ಯವನ್ನು ಹೆಣ್ಣು ಮಗು ಹುಟ್ಟಿದ

ಸಮಯವೆ ಆಡುತ್ತಾರೆ. ಯಾವ ಕರ್ಮವೋ, ಯಾವ ರೀತಿಯ ಪುಣ್ಯವೋ, ಯಾವ ಸಂಧರ್ಭದಲ್ಲಿ ಈ ಹೆಣ್ಣೆಂಬ ಜಾತಿಯನ್ನು

ಸೃಷ್ಟಿಸಿದನೊ! ಆ ದೇವರು ದೊಡ್ಡ ತಪ್ಪಿನ ಶಿಕ್ಷೆಗಾಗಿ ಹುಟ್ಟಿಸಿದನೋ ಅಥವಾ ಕನಿಕರದ ಭಾವವಿಲ್ಲವೋ? ಪಾಪಿ ಮನಸ್ಸಿನ ಹೃದಯವೋ?

ಏಕೆ ಈ ಹೆಣ್ಣನ್ನು ಕೀಳೆಂದು ತಿಳಿದನೋ? ಇವೆಲ್ಲ ಮನಸ್ಸಿನ ಮಾತನ್ನು ಯಾರು ಕೇಳುವರು ಎಂದು ಹೆಣ್ಣಿನ ಜೀವ ಪರಿತಪಿಸುತ್ತಿರುತ್ತದೆ.

 

   ಕೆಲವರು ಮಾತ್ರ ಹೆಣ್ಣೇಂಬ ಜೀವಕ್ಕೆ ಒಳೆಯ ಅರ್ಥ ನೀಡುತ್ತಾರೆ,ಒೞೆಯ ಭಾವನೆಯಿಂದ ಕಾಣುತ್ತಾರೆ. ಯಾವ ಮನುಷ್ಯ ಗಂಡು-

ಹೆಣ್ಣು ಎರಡು ಸಮಾನವೆಂದು ತಿಳಿದವನೋ ಅವನು ಮಾತ್ರ ಮನುಷ್ಯತ್ವ ಹೊಂದಿರುವನು ಎಂದು ಹೆಣ್ಣಿನ ಮನಸ್ಸು ತಿಳಿದಿರುತ್ತದೆ. ಹುಟ್ಟಿದ

ಹೆಣ್ಣು ಮಗುವಿಗೆ ನೀಡುವ ಸಂಸ್ಕಾರಗಳೆಂದರೆ ನೀನು ಹೆಣ್ಣು ಜಾತಿ, ನೀನು ಹೀಗೆ ಇರಬೇಕು,ಹಾಗೆ ನಡೆಯಬೇಕು ಎಂಬ ಸ್ವತಂತ್ರವಿಲ್ಲದ

ಬಂಧನವನ್ನು ಒತ್ತಾಯಪೂರ್ವಕವಾಗಿ ತಿಳಿಸುತ್ತಾರೆ. ದೇವರು ಹೆಣ್ಣನ್ನು ಸೃಷ್ಟಿಸುವಲ್ಲಿ ಎಡವಿದನೋ ಅಥವಾ ಮನುಷ್ಯನು

ತಿಳಿದುಕೊಳುವಲ್ಲಿ ತಪ್ಪಿದನೊ ಎಂಬ ಪ್ರಶ್ನೆಗೆ ಇನ್ನೂ ಅರ್ಥ ಸಿಗದಂತಾಗಿದೆ..

 

              ಹೆಣ್ಣು ಹೊನ್ನೆಂದರು

              ಹೆಣ್ಣು ದೇವತೆಯೆಂದರು

              ಹೆಣ್ಣು ಹೆಮ್ಮಾರಿಯೆಂದರು

              ಹೆಣ್ಣು ಕೀಳೆಂದರು

              ಹೆಣ್ಣು ಅಬಲೆಯೆಂದರು

 

ಏಕೆ? ಏಕೆ? ಈ ಎಲ್ಲ ವಿವಿಧ ರೀತಿಯ ಪಟ್ಟಗಳು ಈ ಜಾತಿಗೆ ಹೆಣ್ಣಿಗೇಕೆ ಗೌರವ ಸಿಗುವುದಿಲ್ಲ? ಹೀಗೆ ಹಲವಾರು ಪ್ರಶ್ನೆಗಳು ಹೆಣ್ಣಿನ

ಮನದಲ್ಲಿ ಅನುಭವವಾಗಿ, ಸತ್ಯವಾಗಿ, ತಿಳಿಯಾಗಿ ಮೂಡಿ ಬಿಟ್ಟಿವೆ.    

       ಸ್ತ್ರೀ ತನಕೆ ಎರಡು ಬೆಳಗು ಮನೆಗಳು. ಇವಳ ಜೀವನವೇ ಹೀಗೆ ಹುಟ್ಟುವುದೊಂದು ಮನೆಯಲ್ಲಿ , ಸಾಯುವುದೊಂದು ಮನೆಯಲ್ಲಿ.

ಎರಡು ಅವಳ ಮನೆಗಳೆ. ಆದರೆ ಎಲ್ಲೂ ಸ್ವತಂತ್ರದ ಭಾವವಿಲ್ಲ. ಹೆಣ್ಣಿನ ಜೀವನದ ಶಬ್ದಕೋಶದಲ್ಲಿ ಆ ದೇವರು 'ಸ್ವಾತಂತ್ರ್ಯ' ಎಂಬ

ಪದವನ್ನು ದೇವರು ಬರೆಯಲು ಮರೆತು ಬಿಟ್ಟಿದ್ದಾನೆ. ಹೀಗಾಗಿ ಇವಳ ಜೀವನ ಶೈಲಿ ಬಲು ಚಿತ್ರ-ವಿಚಿತ್ರವಾಗಿದೆ. ಹೀಗೆಯೆ ಸುಖದ

ಸಮಾನವಾಗಿ ಗಂಡು, ದುಃಖದ ಸಮಾನವಾಗಿ ಹೆಣ್ಣು ಎಂದು ಈ ಅಜ್ನ್ಯಾನ ಮನುಷ್ಯರು ತಿಳಿದಿದ್ದಾರೆ.

 

  ಸ್ತ್ರೀ ಜನ್ಮದ ಜೀವದ ಬಗೆಃ ಹುಟ್ಟಿನಿಂದ ಬೆಳೆದು ಎಲ್ಲರ ಜೊತೆ ಬೆರೆತು, ತನ್ನದೇ ಬಂಧು-ಬಾಂಧವ್ಯವನ್ನು ಹೊಂದಿರುವ ಗೂಡನ್ನು

ಕಟ್ಟುತ್ತಾಳೆ. ತನ್ನ ಪುಟ್ಟ ಪುಟ್ಟ ಹೆಜ್ಜೆಗಳೊಂದಿಗೆ,ಪುಟ್ಟ ಪುಟ್ಟ ಕನಸುಗಳನ್ನು ಬೆಳೆಸಿ, ಭಾವನೆಗಳ ಜೊತೆ ಆಟವಾಡುತ್ತಾ ದಿಡೀರನೆ

ಬೆಳೆದು ನಿಲ್ಲುತ್ತಾಳೆ. ಮನಸ್ಸುಗಳ ಜೊತೆ ಸ್ನೇಹ ಬೆಳೆಸಿ ಪ್ರೀತಿ ಉಲ್ಲಾಸದಿಂದ ತನ್ನ ಹದಿನೆಂಟರ ಹರೆಯತನಕ ಸಮಯವನ್ನು

ಆನಂದದಿಂದ ಮುಗ್ಧ ಭಾವಗಳೊಂದಿಗೆ ಕಳೆಯುತ್ತಾಳೆ.

 

  ಸ್ವತಂತ್ರವಾಗಿ ಹಕ್ಕಿಯ ಹಾಗೆ ಹಾರುವ ಆಸೆ ಅವಳದ್ದಾಗಿರುತ್ತದೆ. ಸಮಾಜದ ದೃಷ್ಟಿಯಲ್ಲಿ ಅವಳು ಕೇವಲ ಸ್ತ್ರೀಯಾಗಿದ್ದರು -

ಅವಳಿಗೆ ಮೀನಿನ ಹಾಗೆ ಈಜಿ ಆನಂದಿಸುವ ಆಸೆಯಾಗಿರುತ್ತದೆ. ನವಿಲುಗಳು ಗಿರಿ ಬಿಚ್ಚಿ ಕುಣಿಯುವ ಹಾಗೆ ತನ್ನ ಭಾವನೆಗಳ

ಸುಂದರತೆಯಲ್ಲಿ ಕುಣಿಯಬೇಕೆಂಬ ಮನಸ್ಸು ಹೊಂದಿರುತ್ತಾಳೆ. ರೆಕ್ಕೆಯ ಹಕ್ಕಿಯ ಹಾಗೆ ತಾನು ನೀಲಿ ಬಾನಿನಲ್ಲಿ ತೇಲಬೇಕೆನ್ನುತ್ತಾಳೆ.

ಸರಿಗಮ ರಾಗದ, ಚೆಂದಾದ ಕವನದ, ಸಂಗೀತ ಗಾನದಲ್ಲಿ ಖುಷಿಯಿಂದ ತೇವಗೊೞುತ್ತಾಳೆ. ಸ್ತ್ರೀಯು ಚಿಕ್ಕ ಮಗುವಿನಿಂದ ಬೆಳೆದು

ಹದಿ ಹರೆಯವಳಾಗಿ ಮದುವೆಯ ತನಕ ತನ್ನದೆ ಆದ ಹಟದಿಂದ ಸ್ವತಂತ್ರ ಜೀವಿಸಲು ಪ್ರಯತ್ನಿಸುತ್ತಾಳೆ. ಕೆಲವು ಚಿಕ್ಕ- ಪುಟ್ಟ

ವಿಷಯಕ್ಕಾಗಿ ಕೋಪಗೊಂಡು ತನ್ನ ಮನಸ್ಸನ್ನು ಬೇಜಾರಲ್ಲಿಡುತ್ತಾಳೆ. ನೋವನ್ನು ಸಹಿಸಲು ದುಃಖವನ್ನು ಮನದಲ್ಲಿಟ್ಟು ಬೇರೆಯವರ

ಸುಖಕ್ಕಾಗಿ ಜೀವಿಸುತ್ತಾಳೆ.

 

   ಈ ರೀತಿಯಲ್ಲಿ ಬೆಳೆದ ಮನೆಗೆ ಅವಳು ತನ್ನ ತವರು ಎಂದು ತವಕದ ಪ್ರೀತಿಯಿಂದ ಹೇಳುತ್ತಾಳೆ. ತನ್ನದೆ ಆದ ಪ್ರಪಂಚದಲ್ಲಿ

ಮುಳುಗಿ ಮುದ್ದೆಯಾಗುತ್ತಾಳೆ. ನಾನು ಏಕಾಂಗಿ ಎಂದು ಭಾವಿಸುತ್ತಾಳೆ. ಕುಟುಂಬ ಮತ್ತು ಸಮಾಜದ ಬಂಧನದಲ್ಲಿ ಕೊರಗಲು ಯಾವ

ಹುಡುಗಿಯು ಇಷ್ಟ ಪಡುವುದಿಲ್ಲ. ನಿಜವಾಗಲೂ ಕುಟುಂಬವಿರಲಿ ಅಥವಾ ಸಮಾಜವಿರಲಿ ಹುಡುಗಿ ಅಂದರೆ ಬಂಧಿತ ವಸ್ತುವೇ..

(ಮುಂದುವರೆಯುವುದು..)

 

Comments