ರಾಜೀವ್ ದೀಕ್ಷಿತರ ನಿಧನದತ್ತ ಒಂದು ವಿಭಿನ್ನ ದೃಷ್ಟಿಕೋನ!
ರಾಜೀವ್ ದೀಕ್ಷಿತರ ನಿಧನದತ್ತ ಒಂದು ವಿಭಿನ್ನ ದೃಷ್ಟಿಕೋನ ಇಲ್ಲಿದೆ!
ಇದು ಇಂದಿನ ವಾರ್ತಾಭಾರತಿ ದಿನಪತ್ರಿಕೆಯಲ್ಲಿ ಪ್ರಕಟವಾದ ಓದುಗರ ಒಂದು ಪತ್ರ!
ರಾಜೀವ್ ದೀಕ್ಷಿತರ ನಿಧನದತ್ತ ಒಂದು ವಿಭಿನ್ನ ದೃಷ್ಟಿಕೋನ ಇಲ್ಲಿದೆ!
ಇದು ಇಂದಿನ ವಾರ್ತಾಭಾರತಿ ದಿನಪತ್ರಿಕೆಯಲ್ಲಿ ಪ್ರಕಟವಾದ ಓದುಗರ ಒಂದು ಪತ್ರ!
"ನಮಸ್ಕಾರ ರೀ.. ಮಾರ್ಕೆಟ್‌ಗೆ ಹೊರಟಿರಾ?"
ತಿರುಗಿ ನೋಡಿ- "ನಮಸ್ತೆ, ನಮಸ್ತೆ. ತಮ್ಮ ಪರಿಚಯವಾಗಲಿಲ್ಲ.."ಅಂದೆ.
"ಹೋ.. ನೀವು ಈ ಬೀದಿಗೆ ಹೊಸದಾಗಿ ಬಂದವರಲ್ವಾ? ಪತ್ರಿಕೆ ಓದುವವರಾಗಿದ್ದರೆ ನನ್ನ ಪರಿಚಯವಿರುತ್ತಿತ್ತು. ನಾನು ಪ್ರೇಮಕವಿ ತಮ್ಮಣ್ಣ. ಅಲ್ಲೊಂದು, ಅದೇ..ದೊಡ್ಡ ಬಂಗ್ಲೆ ಕಾಣಿಸುತ್ತಾ..ಅದರ ಪಕ್ಕದ ಶೀಟ್ ಮನೇನೆ ನನ್ನದು. ಬಾಗಿಲಲ್ಲೇ ದೊಡ್ಡ ಬೋರ್ಡ್ ಇದೆ. "ಪ್ರೇಮಕವಿ ತಮ್ಮಣ್ಣ, ಸಾಹಿತಿ". ಈ ಬೀದಿ ಜನ ಶಾರ್ಟ್ ಅಂಡ್ ಸ್ವೀಟಾಗಿ ಪ್ರೇತ ಸಾಹಿತಿ ಅಂತಾರೆ. ಹ್ಹ ಹ್ಹ ಹ್ಹ.."
ಒಳ್ಳೆ ಬಕರಾ ಸಿಕ್ಕಿದ. ಹೇಗೂ ಕ್ರಿಸ್‌ಮಸ್ ರಜೆಗೆಂದು ನನ್ನ ಮನೆಯಾಕೆ ಮಕ್ಕಳೊಂದಿಗೆ ಊರಿಗೆ ಹೋಗಿದ್ದಾಳೆ. ಪತ್ರಿಕೆಗೆಗಾಗಿ ತಮ್ಮ ಸಂದರ್ಶನ ಕೊಡಿ ಎಂದು ಇವರ ಮನೆಗೆ ಹೋದರೆ ಒಂದು ಹೊತ್ತಿನ ಕಾಫಿ, ತಿಂಡಿ, (ಸಂದರ್ಶನ ಜಾಸ್ತಿ ಹೊತ್ತಾದರೆ) ರಾತ್ರಿಯ ಊಟಾನೂ ಅಲ್ಲೇ ಮುಗಿಸಿ ಬಿಡಬಹುದಲ್ವಾ! ತಡಯಾಕೆ, ಕೇಳಿಯೇಬಿಟ್ಟೆ ..
ಚಿತ್ರ ಕೃಪೆ : ರಾಮಕೃಷ್ಣ ರೆಡ್ಡಿ
ತೋಟದ ಬದಿಯಲಿ ಸಪುರದ ಓಣಿ
ನೋಟಕೆ ಚ೦ದದ ಅಡಕೆಯ ಗೋಣಿ
ಮೀಟಿತು ಪಿಸಿಪಿಸಿ ಗುಸುಗುಸು ವಾಣಿ
ಪೇಟೆಯ ಕೂಸು ಊರಿನ ಮಾಣಿ
ಕೂಸಿನ ತಲೆಯೋ ಬಾಬಿನ ಕಟ್ಟು
ಕೇಸರಿ ಶರುಟು ಹೈಹೀಲ್ಡ್ ಮೆಟ್ಟು
ಮಾಸಿದ ಪ್ಯಾಂಟಲಿ ಗರಿಗರಿನೋಟು
ಕಿಸೆಯ ಮೊಬೈಲಲಿ ಇಂಟರ್ನೆಟ್ಟು
ಬಿಳಿಬನಿಯನ್ನು ತಲೆಗೆ ಮುಂಡಾಸು
ಗಿಳಿ ಬಣ್ಣದ್ದು ಹೆಗಲ ಬೈರಾಸು
ತಿಳಿನಗುವಿನ ಮೊಗ ಕೈಲಿ ಪಿಕ್ಕಾಸು
ಹಳ್ಳಿಯ ಮಾಣಿಯ ಸುಂದರ ಪೋಸು
ಕೂಸಿಗೆ ಗೊತ್ತು ಹೊಸ ಕಂಪ್ಯೂಟರ್
ಕ್ಲಾಸಿಗೆ ಹೋಗಲು ಬಣ್ಣದ ಸ್ಕೂಟರ್
ಆಸೆಯೋ ಮಾಣಿಗೆ ಪಂಪು ಮೋಟರ್
ಆಸರು ಆದರೆ ಬೆಲ್ಲಕೆ ವಾಟರ್
ಸಂಪದದ ಪ್ರತಿಕ್ರಿಯೆಗಳ ಸುತ್ತ ಹೊಸತೊಂದು ಫೀಚರ್ ಸೇರಿಸಲು ಕೆಲಸ ನಡೆಸುತ್ತಿದ್ದಾಗ ಗಮನಿಸಿದ ವಿಷಯ - ಸಂಪದದಲ್ಲಿ ಇದುವರೆಗೂ ಸೇರಿಸಲ್ಪಟ್ಟಿರುವ ಪ್ರತಿಕ್ರಿಯೆಗಳ ಸಂಖ್ಯೆ ೧,೨೫,೦೦೦ ಕ್ಕೂ ಹೆಚ್ಚು!
ಈಗಿನಂತೆ ಒಟ್ಟು ಸೇರಿಸಲ್ಪಟ್ಟ ಪ್ರತಿಕ್ರಿಯೆಗಳ ಸಂಖ್ಯೆ ೧,೩೧,೩೦೮.
ಅಷ್ಟೂ ಪ್ರತಿಕ್ರಿಯೆಗಳನ್ನು ಒಂದೊಂದೇ ಪುಟದಂತೆ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಅದೇ ಪುಟದಲ್ಲಿ "ಕೊನೆಯ" ಪುಟಕ್ಕೆ ಭೇಟಿ ನೀಡಿದರೆ ಐದು ವರ್ಷಗಳ ಹಿಂದೆ ಸೇರಿಸಿದ ಸಂಪದದ ಕೆಲವು ಮೊದಲ ಪ್ರತಿಕ್ರಿಯೆಗಳನ್ನೂ ಕಾಣಬಹುದು!
ಕಾಲು ಹಾಕುತ್ತಿದ್ದೇನೆ ಕಾಲ ಎಳೆದೆಡೆಯಲ್ಲಿ .
ಮುಂದಿನದೆಲ್ಲಾ ಒಳ್ಳೇಯದೇ ಆಗುತ್ತದೆಂಬ ನಿರೀಕ್ಶೆಯಲ್ಲಿ .
ಅಲ್ಲಲ್ಲಿ ಕಂಡ ಪಯಣಿಗರೊಡನೆ ನಗೆ ವಿನಿಮಯಿಸಿ
ಹತ್ತಕ್ಕೇರದ ಆರಕ್ಕಿಳಿಯದ ಸ್ನೇಹದಲ್ಲಿ
ಹೊಸ ನಂಟುಗಳು ಅಂಟಾಗುತ್ತಿದ್ದಂತೆ ಬಂಧನವೋ
ಬಂಧವೋ ಎಂದು ತಿಳಿಯುವ ಮುಂಚೇಯೇ
ಹಳೇ ಎಳೆಗಳು ಅರಿವಿಲ್ಲದೆ ಹರಿದು
ಚೂರಾಗಿ ಕಣ್ಣಲ್ಲಿ ನೀರಾಗಿ ಧೂಳಾಗಿವೆ
ಕಲ್ಪನೆಗೆ ಮನಸ ಕೊಡುತ್ತಾ
ವಾಸ್ತವಕ್ಕೆ ಬುದ್ದಿಯನ್ನು ಒಡ್ಡಿಕೊಂಡು
ಹಗಲುಗನಸಿಗೆ ವಿದಾಯ ಕೋರುವ
ದಿನಗಳ ಎಣಿಕೆ
ಅಂದಿದ್ದ ಆ ನಂಬಿಕೆ ಆತ್ಮ ವಿಶ್ವಾಸಗಳು
ಇಂದೆಲ್ಲೋ ಮೂಲೆಯಲ್ಲಿ
ಕಾಲು ಮುರಿದುಕೊಂಡು ಬಿದ್ದಿವೆ.
ಸಾವು ಎಂದೊಡನೆಯೇ ಎಲ್ಲರೂ ಬೆಚ್ಚಿ ಬೀಳ್ತೀವಿ ಅಲ್ವಾ? ಏ, ಬಿಡ್ತು ಅನ್ನು, ಅಶ್ವಿನಿ ದೇವತೆಗಳಿದ್ದಾರೆ, ಅಸ್ತು ಅಂದು ಬಿಡ್ತಾರೆ ಎಂದು ಹೆದರಿಸುತ್ತೇವೆ. ಹುಟ್ಟಿದವರೆಲ್ಲರೂ ಸಾಯಲೇ ಬೇಕು. ಯಾರೂ ಇಲ್ಲಿ ಶಾಶ್ವತವಲ್ಲ. ವಿಜ್ಞಾನ ಎಷ್ಟೇ ಮುಂದುವರಿದಿದೆ ಎಂದರೂ, ನಮಗ್ಯಾರಿಗೂ ಸಾವನ್ನು ಗೆಲ್ಲಲಾಗಿಲ್ಲ. ಸ್ವಲ್ಪ ಮಟ್ಟಿಗೆ ಸಾವನ್ನು ಮುಂದೂಡಬಹುದೇ ಹೊರತು ಸಾಯುವುದೇ ಇಲ್ಲ ಎನ್ನಲಾಗದು. ಇಷ್ಟಿದ್ದರೂ ನಾವೆಲ್ಲರೂ ಹೀಗ್ಯಾಕೆ? ಪ್ರತಿಯೊಂದಕ್ಕೂ ಹುಟ್ಟಿದ ದಿನದಿಂದ ಹಿಡಿದು ಪ್ರತಿಯೊಂದು ಗಳಿಗೆಯನ್ನೂ ನಮ್ಮ ಕ್ಯಾಮೆರಾಗಳಲ್ಲಿ ದಾಖಲಿಸಲು ಇಷ್ಟ ಪಡುವ ನಾವು ಅದೇ ಸಾವನ್ನು ಮಾತ್ರ ಫೋಟೋದಲ್ಲಿ ಹಿಡಿದಿಟ್ಟುಕೊಳ್ಳಲಾರೆವು.
ಪ್ರಾರ್ಥನೆ
ಸದ್ವರ್ಥನೆ ಸತ್ಪ್ರಾರ್ಥನೆ
ಎರಡಿದ್ದರೆ ಸಾಕು ಎರಡಿದ್ದರೆ ಸಾಕು
ಇರಲೇ ಬೇಕು ಇವು ಇರಲೇ ಬೇಕು ||ಪ||