ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಜಿಲ್ಲಾ ಪಂಚಾಯತ್ ಚುನಾವಣಾ ಪ್ರಚಾರ..

೧) ಮಗಳು : ಅಪ್ಪ ನಾನು ಶಾಲೆಗೆ ಹೋಗಿ ಬರ್ತೀನಿ..

ಅಪ್ಪ : ಸಂತೋಷದಿಂದ, ಸರಿ ಮಗಳೇ ಹೋಗಿ ಬಾ

ಅಪ್ಪನ ಗೆಳೆಯ : ಏನ್ ರಾಮಣ್ಣ, ಮಗೀನ ಶಾಲೆಗೆ ಕಳ್ಸಲ್ಲ, ಬೋ ದೂರ ಆಯ್ತದೆ ಅಂತಿದ್ಯ ಈಗ ನೋಡಿದ್ರೆ ಮಗಿ ಶಾಲೆಗೆ ಒಯ್ತದೆ ಅಂತಿದ್ಯ ಏನಪ್ಪಾ ವಿಸ್ಯ...

ಅಪ್ಪ : ಏನಿಲ್ಲ ಶಂಕ್ರಣ್ಣ, ನಾನು ಮೊದಲು ಅಂಗೇ ಅಂದುಕೊಂಡಿದ್ದೆ. ಶಾಲೆ ದೂರ ಐತೆ ಅದೂ ಅಲ್ದೆ ಹೆಣ್ ಮಗ ಬೇರೆ. ಆದ್ರೆ ನಮ್ ಬಿ.ಜೆ.ಪಿ ಸರ್ಕಾರ ಬಂದ್ ಮ್ಯಾಕೆ ಶಾಲೆಗೆ ಹೋಗೋ ಹೆಣ್ ಮಕ್ಳಿಗೆ ಉಚಿತವಾಗಿ ಸೈಕಲ್ ಕೊಟ್ಟಿದೆ. ಅದಕ್ಕೆ ಮಗೀನ ಶಾಲೆಗೆ ಕಳಿಸ್ತಾ ಇದೀನಿ ಶಂಕ್ರಣ್ಣ.

ಅಶರೀರ ವಾಣಿ : ಬನ್ನಿ ಕರ್ನಾಟಕವನ್ನು ಮತ್ತಷ್ಟು ಮುಂದುವರೆಸೋಣ ಅಭಿವೃದ್ಧಿಯ ಮಳೆಗಾಗಿ ಬಿಜೆಪಿ ಗೆ ಮತ ನೀಡಿ.

 

ಅಭಯಾರಣ್ಯಗಳ ಉಳಿವಿಗೆ ಕ್ರಮಗಳೇನು ?

ಕರ್ನಾಟಕದಲ್ಲಿ ಸುಂದರ ಕಾನನಗಳು ಇವೆ.ಇದರಲ್ಲಿ ರಾಷ್ಟ್ರೀಯ ಉದ್ಯಾನವನ,ಅಭಯಾರಣ್ಯ,ರಕ್ಷಿತಾರಣ್ಯ ಹಾಗೂ ಪಕ್ಷಿಧಾಮಗಳೆಲ್ಲವೂ ಇವೆ.ನಮ್ಮ ಕರ್ನಾಟಕದಲ್ಲೇ ೫ ರಾಷ್ಟ್ರೀಯ ಉದ್ಯಾನವನಗಳು,೧೮ ಅಭಯಾರಣ್ಯಗಳು  ಕಂಡು ಬರುತ್ತವೆ.

ಇದಲ್ಲದೆ ಪಕ್ಷಿಧಾಮಗಳು ,ಮೃಗಾಲಯಗಳೂ ಕೂಡ ಇವೆ.ಪಶ್ಚಿಮ ಘಟ್ಟಗಳ ಶ್ರೇಣಿಗಳಲ್ಲಿ ಕರ್ನಾಟಕದ ಎಲ್ಲ ಅರಣ್ಯ ಪ್ರದೇಶಗಳು ಹೆಚ್ಚಾಗಿ  ಕಂಡು ಬರುತ್ತದೆ.ನಿತ್ಯ ಹರಿದ್ವರ್ಣ ಕಾಡುಗಳು ಎಲ್ಲ ವನ್ಯ ಮೃಗಗಳ ವಾಸಸ್ಥಾನ.

ಹಾಗಾದರೆ ಈ ರಾಷ್ಟ್ರೀಯ ಉದ್ಯಾನವನ (National park ) ಮತ್ತು (Wildlife sanctuaries) ಅಭಯಾರಣ್ಯಗಳ ವ್ಯತ್ಯಾಸಗಳೇನು ?  

ರೂಪದ ಒಡತಿಗೆ ನಾ ಒಮ್ಮೆ ಕೇಳಿದೆ..





ಸೌಂದರ್ಯದ ಲಹರಿಯೇ 
ಮುತ್ತಿನ ಸಿಂಗಾರಿಯೇ 
ಬಂಗಾರದ ಹುಡುಗಿಯನ್ನು ನಾ ಒಮ್ಮೆ ಕೇಳಿದೆ 
ಚೆಲುವಿನ ಚಿತ್ತಾರವೇ 
ರಂಬೆ ಊರ್ವಶಿ ಮೇನಕೆಯೇ 
ಚೆಂದಾದ ಗೊಂಬೆಯನ್ನು ನಾ ಒಮ್ಮೆ ಕೇಳಿದೆ 
ಬೆಳಂದಿಗಳ ಬಾಲೆಯೇ 
ಸುಂದರ ಹೂವಿನ ಪರಿಮಳವೇ 
ಶಿಲ್ಪಿಯು ಕೆತ್ತಿರುವ ಶಿಲಾಬಾಲೆಯನ್ನು ನಾ ಒಮ್ಮೆ ಕೇಳಿದೆ 
ಮಧುರ ನಾದದಿಂದ 
ಪ್ರೀತಿ ಮಾತುಗಳಿಂದ 
ದೇವರು ಸೃಷ್ಟಿಸಿದ ಹುಡುಗಿಯೇ 
ಸೌಂದರ್ಯದ ಕಾಣಿಕೆಯೆಂದು ನಾ ಒಮ್ಮೆ ಕೇಳಿದೆ ..


 

ಈ ಜೀವನ..

   ಈ ಜೀವನವೇ ಈ ತರಹ ಎಂದು ಕಾಡುವ ಪ್ರಶ್ನೆ ಮನದಲ್ಲಿ ಮನೆ ಮಾಡಿ ಕುಳಿತಿದೆ. ಉತ್ತರ ಹುಡುಕುವ ದಾರಿಯಲ್ಲಿ ತಗ್ಗಿ-ನುಗ್ಗಿ,

ಎದ್ದು-ಬಿದ್ದು,ಹುಡುಕಿದರು ಸಿಗದಂಥ ಪ್ರಶ್ನೆಗೆ ದೊರೆಯದಂಥ ಉತ್ತರ ಸಿಗುವ ಸ್ಥಳವೆಲ್ಲೂ ಕಾಣುವುದಿಲ್ಲ.ಜೀವನದ ದಾರಿಯಲ್ಲಿ ಸರಳ

ಸುಖದ ಹಾಗೇ, ವಿರಳ ದುಃಖದ ಕಷ್ಟವನ್ನು ಅನುಭವಿಸು ಎಂದು ಜೀವನವು ಪಾಠದ ಸರಮಾಲೆಯನ್ನು ಹೊತ್ತು ಮನುಷ್ಯನ ಮನಸ್ಸಿನ

ದಾರಿಯಲ್ಲಿ ಹೊಕ್ಕಿ ತನ್ನದೇ ಆಡಳಿತವನ್ನು ಚಲಿಸುತ್ತದೆ.

   ಮಾನವ ತಾನೇ ಶ್ರೇಷ್ಠ ಎಂದು ತಿಳಿದರೂ ಪರಿತಪಿಸುವ ಮನವ ಆ ಮಾನವ ಹೊಂದಿಹ, ಹಲವಾರು ಹೆಸರು ಈ ಜೀವಗಳಿಗೆ

ಪಾಪಿ ಜೀವ ನನ್ನದು, ಪುಣ್ಯ ಜೀವ ನನ್ನದು , ಕರ್ಮ ಜೀವ ನನ್ನದು ಎಂದು ಗೊಣಗುವ ಮನಗಳ ಸಂಖ್ಯೆಯ ಬೆಲೆ ಎಷ್ಟು ಎಂದು 

ಒಂದು ಮರೆಯಲಾಗದ ದಿನ!

ನೆನ್ನೆ ನಮ್ಮ ತಂದೆ ತಾಯಿಗಳ ವಿವಾಹ ವಾರ್ಷಿಕೋತ್ಸವ. ಆಫೀಸಿಂದ ಸ್ವಲ್ಪ ಬೇಗ ಹೊರಟೆ.
ಎಷ್ಟು ಬೇಗ ಅಂದರೂ ೬ ಗಂಟೆ ಆಗಿಹೋಯ್ತು. ೬-೮ ರ ಮಧ್ಯೆ ಹೊರಡದೆ ಇರುವುದು ಲೇಸು ಎಂಬುದು ನನ್ನ ಅಭಿಪ್ರಾಯ. ಯಾಕೆಂದರೆ ಆ ಎರಡು ಘಂಟೆಗಳಲ್ಲಿ ಯಾವಾಗ ಹೊರಟರೂ ಮನೆ ಸೇರೋದು ಒಂದೇ ಸಮಯಕ್ಕೆ! ೯ ಘಂಟೆ ಮೇಲೆಯೇ :)

ಮಧ್ಯಾಹ್ನವೇ ನನ್ನ ತಂಗಿ ಫೋನ್ ಮಾಡಿ ಇವತ್ತು ಊಟಕ್ಕೆ ಹೊರಗೆ ಹೋಗೋಣ ಬೇಗ ಬಾ ಅಂತ ಹೇಳಿದ್ಲು. ಅದೇನೋ ಗೊತ್ತಿಲ್ಲ ನಾನು ಬೇಗ ಬರ್ತೀನಿ ಅಂತ ಮನೇಲಿ ಹೇಳಿದ ದಿನವೇ ಏನಾದರೊಂದು ಕೆಲಸ ಬಂದು ೭:೩೦ ಕ್ಕೆ ಮೊದಲು ಹೊರಡಲಾಗುವುದಿಲ್ಲ :(  ಅಂತೂ ಬೇರೆಯವರು ನನ್ನ ನೋಡಿ ಕೆಲಸ ಹೇಳೋ ಮೊದಲು ಹೊರಟೆ. ಪುಣ್ಯಕ್ಕೆ ಹೆಚ್ಚು ಟ್ರಾಫಿಕ್  ಇರಲಿಲ್ಲ. ಹೇಗೋ ೮ ಘಂಟೆ ಹೊತ್ತಿಗೆ ಹೋಟೆಲ್ ಸೇರಿದೆ.

ಪ್ರೀತ್ಯರ್ಥ

ಕೆಲವೊಮ್ಮೆ ನಮಗಿಷ್ಟವಿಲ್ಲದ ಅಥವಾ ನಮಗೆ ವಿಶ್ವಾಸವಿಲ್ಲದ ಕೆಲಸಗಳನ್ನು ಇನ್ನೊಬ್ಬರ ಪ್ರೀತ್ಯರ್ಥ ಮಾಡಬೇಕಾಗುತ್ತದೆ. ದೇವರು, ದೇವಸ್ಥಾನ, ಪೂಜೆ, ಇತ್ಯಾದಿಗಳಲ್ಲಿ ನಂಬಿಕೆಯಿಲ್ಲದಿರುವವರು ಈ ರೀತಿಯ ಪ್ರಸಂಗಗಳಿಗೆ ಒಳಗಾಗುತ್ತಾರೆ. ಇಂಥವರು ತಮ್ಮ ಆತ್ಮೀಯರು, ಮುಖ್ಯವಾಗಿ ಮಕ್ಕಳು, ಆಕಸ್ಮಿಕ/ಅಪಘಾತಕ್ಕೊಳಗಾಗಿ ಅತ್ಯಂತ ದಾರುಣ ಪರಿಸ್ಥಿತಿಯಲ್ಲಿರುವಾಗ ಹರಕೆ-ಬೇಡಿಕೆಗಳನ್ನು ಮಾಡಿಕೊಂಡು ಸೇವೆಸಲ್ಲಿರುವದನ್ನು ನಾವು ನೋಡಿರುತ್ತೇವೆ. ತಮ್ಮದೇ ಆದರ್ಶ-ದರ್ಶನಗಳಿಗೆ ಕಟ್ಟುಬಿದ್ದುಕೊಂಡಿರುವ ಸಂದರ್ಭದಲ್ಲಿ ಇನ್ನೊಬ್ಬರನ್ನು ಸಂತೋಷಪಡಿಸಲು ಈ ಕಾರ್ಯಗಳನ್ನು ಮಾಡುವಾಗ ಮೊದಲಿಗೆ ಮುಜುಗರ, ಕಿರಿಕಿರಿಯಾದರೂ, ಬಳಿಕ ನಿಧಾನವಾಗಿ ಯೋಚಿಸಿದಾಗ ಒಂದು ಕೆಲಸವನ್ನು ಸಂಪೂರ್ಣಗೊಳಿಸಿದಾಗ ಸಿಗುವ ತೃಪ್ತಿಯ ಅನುಭವವಾಗುತ್ತದೆ. ಈ ರೀತಿಯ ಪರಿಸ್ಥಿತಿಯ ಒಂದು ಲಘು ಅನುಭವ ಇಲ್ಲಿದೆ. ***