ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ
ಮೂಢ ಉವಾಚ -53
ಮೂಢ ಉವಾಚ -53
ಪರಮಾತ್ಮ ರಚಿಸಿಹನು ನವರಸದರಮನೆಯ|
ನಡೆದಾಡುವೀ ಮಹಲಿನರಸನೆ ಜೀವಾತ್ಮ||
ಬುದ್ಧಿಯದು ಮಂತ್ರಿ ಮನವು ಸೇನಾಧಿಪತಿ|
ಇಂದ್ರಿಯಗಳು ಕಾವಲಿಗಿಹವು ಮೂಢ||
ತನುವು ನೀನಲ್ಲವೆನೆ ಯಾವುದದು ನಿನದು?
ಆ ಜಾತಿ ಈ ಜಾತಿ ನಿನದಾವುದದು ಜಾತಿ?
ಬಸವಳಿಯದಿರಳಿವ ದೇಹದಭಿಮಾನದಲಿ|
ಜೀವರಹಸ್ಯವನರಿತವನೆ ಜ್ಞಾನಿ ಮೂಢ||
***********************
-ಕವಿನಾಗರಾಜ್.
- Read more about ಮೂಢ ಉವಾಚ -53
- 6 comments
- Log in or register to post comments
ನಿಲುವು
ಜೀವನದ್ದೋ
ದೇಹದ್ದೋ
ನಡೆವ ದಾರಿಯದ್ದೋ.
- Read more about ನಿಲುವು
- 9 comments
- Log in or register to post comments
ಹೊಸದೊಂದು ಪರಿಚಯಕೆ
ಹೊಸದೊಂದು ಪರಿಚಯಕೆ
ಹಸನಾದ ಮನದಿಂದ
ಸ್ವಾಗತವ ಕೋರುವೆ
ಎದೆಯಾಳದೊಲವಿಂದ
ಎದೆಯ ಬನದ
ಕೇದಗೆಯ ಕಾದಿರಿಸಿ
ಕಾಯುವೆ ನೀ ಬರುವ ಘಳಿಗೆಗಾಗಿ
ಬಿರಿದ ಮಲ್ಲಿಗೆ ಮೊಗ್ಗ
ದಾರಿಯಲಿ ಹರಡಿಸಿ
ಕಾಯುವೆ ನೀ ಬರುವ ಘಳಿಗೆಗಾಗಿ
ಗಂಧ ಸೂಸುವ
ಚಂದನದ ಮರಗಳನು
ಇಕ್ಕೆಲದಿ ನೆಡಿಸಿ
- Read more about ಹೊಸದೊಂದು ಪರಿಚಯಕೆ
- 4 comments
- Log in or register to post comments
ಹಾಸ್ಟೇಲ ಗರ್ಲ್ಸ..
ಹಾಸ್ಟೇಲನಲ್ಲಿರುವ ಹುಡುಗಿಯರಿಗೆ ಹಗಲಾಗಲಿ ಇರುಳಾಗಲಿ ಕನಸು ಕಾಣುವ ಹಂಬಲವಿರುತ್ತದೆ. ಒಬ್ಬರೆ ಕುಳಿತರು ನಗುವರು, ಮಾತನಾಡುವರು,ನಾಚುವರು ಮತ್ತು ಭಾವನೆಗಳೊಂದಿಗೆ ಆಟವಾಡುವರು. ಯಾವ ಹೊತ್ತಿಗೆ ಯಾವ ಹುಡುಗ ಅವರ ಮನದಲ್ಲಿ ನೆಲೆಸುವನೊ ತಿಳಿಯದು. ಕಿಟಕಿಯಿಂದ ಬರುವ ತಂಗಾಳಿಯು ಪ್ರತಿ ಕ್ಷಣಕೆ ಹೊಸ ಬಯಕೆ ಹೊತ್ತು ತರುವುದೋ? ಹೊಸ ಪ್ರೀತಿ ಮಾತು ಆಲಿಸಿವುದೊ? ಕಾಣಲಾರೆವು.
ಸ್ನೇಹ- ಪ್ರೀತಿ ತುಂಬಿದ ಭಾವನೆಗಳ ಸುಂಟರಗಾಳಿ ಆ ಹುಡುಗಿಯರನ್ನು ಮುತ್ತಿ ಬಿಟ್ಟಿರುತ್ತದೆ. ಅವರ ಆತ್ಮೀಯವಾದ ಗೋಡೆಗಳು ಪ್ರೀತಿ ಮಾತುಗಳಿಗೆ ಸ್ಪಂದಿಸುವವು.
ತಮ್ಮೆಲ್ಲ ಭಾವನೆಗಳನ್ನು, ಕದ್ದು ನೋಡಲು, ಸುಖ ದುಃಖದ ಗಳಿಗೆಯನ್ನು ಹಂಚಿಕೊಳಲು ಬಂದಿರುವ ಅವರ ಜೀವದ ಗೆಳೆಯ ಸುಂದರವಾದ ಕನ್ನಡಿಯಾಗಿರುತ್ತದೆ.
- Read more about ಹಾಸ್ಟೇಲ ಗರ್ಲ್ಸ..
- Log in or register to post comments
- 6 comments
ಸಚಿನ್ ರಮೇಶ್ ತೆಂಡೂಲ್ಕರ್
ಸಚಿನ್ ರಮೇಶ್ ತೆಂಡೂಲ್ಕರ್, ಬಹುಷಃ ಈ ಹೆಸರನ್ನು ಕೇಳದೆ ಇರುವವರು ಯಾರೂ ಇರುವುದಿಲ್ಲ. ಈ ಹೆಸರೇ ಕ್ರಿಕೆಟ್ ಪ್ರೇಮಿಗಳಲ್ಲಿ ಒಂದು ರೀತಿಯ ರೋಮಾಂಚನ ಉಂಟು ಮಾಡುವುದು. ೧೯೮೯ ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಈ ವಾಮನ ಮೂರ್ತಿ ಇಪ್ಪತ್ತು ವರ್ಷಗಳ ನಂತರ ಈ ಮಟ್ಟಕ್ಕೆ ಬೆಳೆಯಬಹುದು ಎಂದು ಬಹುಷಃ ಯಾರೂ ಎಣಿಸಿರುವುದಿಲ್ಲ. ಇಂದು ಭಾರತದಲ್ಲಿ ಕ್ರಿಕೆಟ್ ಎಂಬುದು ಒಂದು ಜಾತಿ ಎಂದು ಆದರೆ ಅದಕ್ಕೆ ಸಚಿನ್ ದೇವರು ಎಂಬ ಮಾತಿದೆ.
- Read more about ಸಚಿನ್ ರಮೇಶ್ ತೆಂಡೂಲ್ಕರ್
- Log in or register to post comments
- 8 comments
ಒಂಟಿ
ನಿಂತಿದ್ದೆ ನಾ ಬಸ್ ಸ್ಟ್ಯಾಂಡಿನಲಿ
ಬಸ್ಸಿಗಾಗಿ
ಕಾದಿದ್ದಳು ಒಬ್ಬಳಲ್ಲಿ
ಯಾರಿಗೋ ಒಬ್ಬಂಟಿಯಾಗಿ
ಪಕ್ಕದಲ್ಲೇ ಇತ್ತು ಒಂದು
ಒಂಟಿ ಮರ
ಅದರ ಮೇಲೊಂದು
ಒಂಟಿ ಕಾಗೆ
ಕೂಗುತ್ತಲೇ ಇತ್ತು
ಕಾ ಕಾ ಕಾ ಎಂದು
ಅರಿಯಲಿಲ್ಲ ಕಾಗೆಯ
ಮಾತಾ ನಾನಂದು
ಅದಕೆ ಆಗಿದೆ
ನಮಗೀಗ ಒಂದು ಮಗು
ಮತ್ತೆ ನಾ ಆಗಿದ್ದೇನೆ
ಒಂಟಿ
ಮತ್ತೆ ನಿಂತಿದ್ದೇನೆ ಅದೇ
ಬಸ್ ಸ್ಟ್ಯಾಂಡಿನಲಿ
ಅದೇ ಮರದ ಪಕ್ಕ
ಈಗಲೂ ಅಲ್ಲಿದ್ದಾಳೆ
ಒಂಟಿ ಹುಡುಗಿ
ಈಗಲೂ ಇದೆ
ಅಲ್ಲಿ
ಆ ಒಂಟಿ ಕಾಗೆ
ಆದರೆ ಅದು
ಕೂಗಿದಾಗಲೆಲ್ಲ
ಕೆಳತೊಡಗಿದೆ ನನಗೆ
ಅಕ್ಕ,ಅಕ್ಕ ,ಅಕ್ಕ ಎಂದು
- Read more about ಒಂಟಿ
- 1 comment
- Log in or register to post comments
ಲೈಫು ಇಷ್ಟೇನೆ...
ಲೈಫು ಇಷ್ಟೇನೆ...
ಹುಡುಗಿ ಹಿಂದೆ ಸುತ್ತಾಡೋಕೆ
ಬೈಕು ಒಂದು ಇದ್ದರೆ ಸಾಕು
ಶಾಪಿಂಗ ಅಂತಾ ಮಾಲು ತಿರುಗಿರಿ
ಲೈಫು ಇಷ್ಟೇನೆ...
ಹುಡುಗಿ ಲೋಫರು ಅಂದು ಕೊಂಡ್ರು
ಹುಡುಗನಿಗ ಚಪ್ಪಲ ತೋರಿಸಿ ಬಿಟ್ರು
ಹಾಳುಬುಧ್ಧಿ ಬಿಡೊದಿಲ್ಲ ಅವನದು
ಲೈಫು ಇಷ್ಟೇನೆ...
ಮೆಸ್ಸೆಜ ಮೇಲೆ ಮೆಸ್ಸೆಜ ಮಾಡಿ
ಪ್ರಪೊಜ್ ಅಂತಾ ಗುಲಾಬಿ ಕೊಟ್ರು
ಪ್ರೀತಿ ಕೊನೆಗೆ ಕೈ ಕೊಡತ್ತೆ
ಲೈಫು ಇಷ್ಟೇನೆ...
ಪ್ರೀತಿ ಮಾಡಿ ಕೆಟ್ಟು ಹೊದ್ರು
- Read more about ಲೈಫು ಇಷ್ಟೇನೆ...
- Log in or register to post comments
ಮೊಬೈಲ್..
- Read more about ಮೊಬೈಲ್..
- Log in or register to post comments