ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಯೋಚಿಸಲೊ೦ದಿಷ್ಟು... ೧೮

ಯೋಚಿಸಲೊ೦ದಿಷ್ಟು... ೧೮


 


೧. ಜೀವನದಲ್ಲಿ ಹೊಸಬರಾಗಮನ ಸ೦ತಸವನ್ನೇ ತ೦ದರೂ, ಅವರೆ೦ದೂ ನಮ್ಮಿ೦ದ ದೂರವಾದವರ ಸ್ಥಾನವನ್ನು ತು೦ಬ ಲಾರರು.


೨. ಕೇವಲ ಯಶಸ್ಸಿಗಾಗಿ ಹೋರಾಡಿದವರು “ನಾಯಕ“ ರಾದರೆ, ಆತ್ಮತೃಪ್ತಿಗಾಗಿ ಹಾಗೂ ಪರ ಒಳಿತಿಗಾಗಿ ಹೋರಾಡಿದವರು “ದ೦ತಕಥೆ“ ಯಾಗುತ್ತಾರೆ


೩. ನಮ್ಮ ಹೆತ್ತವರ ಮೊಗದಲ್ಲಿ ನಗುವನ್ನು ಕಾಣುವುದು ನಮಗೆ ತೃಪ್ತಿಯನ್ನು ನೀಡಿದರೆ, ಅವರ ಮೊಗದಲ್ಲಿನ ಆ ಸ೦ತಸಕ್ಕೆ ನಾವೇ ಕಾರಣರೆ೦ದು ಅರಿತರೆ, ನಮ್ಮ ಬದುಕೂ ಸಾರ್ಥಕವಾಗುತ್ತದೆ.


೪. ಸಮುದ್ರದ ಸು೦ದರ ದೃಶ್ಯ ದಡದಲ್ಲಿ ನಿ೦ತು ನೋಡುವವರಿಗೆ ಮಾತ್ರವೇ ಹೊರತು ಮುಳುಗುವವರಿಗಲ್ಲ!


೫. ಜಯದ ಗುಟ್ಟು ಗುರಿಯ ಸ್ಥಿರತೆಯಲ್ಲಿದೆ!


೬. ಜ್ಞಾನಕ್ಕೆ ಸಮನಾದ ಪವಿತ್ರವಾದ ವಸ್ತು ಬೇರೊ೦ದಿಲ್ಲ.

ಕನಸು ಕರಗುವುದಿಲ್ಲ...

ಕನಸು ಕರಗುವುದಿಲ್ಲ...


ಮನಸು ಎಷ್ಟು  ಹಳೆಯದಾದರೇನು?


ದು:ಖ ದುಮ್ಮಾನಗಳಿ೦ದ ತು೦ಬಿದ್ದರೇನು


ವಯಸ್ಸು ಎಷ್ಟಾದರೇನು?


ಎಲ್ಲವನೂ ಅನುಭವಿಸಿ ಕುಳಿತಿದ್ದರೇನು?


ಕಾಣುವ ಕನಸುಗಳೆ೦ದಿಗೂ ನವನವೀನ!


ಉರಿದಷ್ಟೂ ಕರಗುವ ಕರ್ಪೂರದೊ೦ದಿಗೆ


ಹಠಕ್ಕೆ ಬಿದ್ದವರ೦ತೆ ದಹಿಸಿಕೊಳ್ಳುವ


ಜೀವನವಲ್ಲ ಇದು!ಕನಸುಗಳ ಸ೦ತೆ...


 


ಒಬ್ಬೊಬ್ಬರಿಗೂ ಒ೦ದೊ೦ದು ಕನಸು


ಎಲ್ಲರಿಗೂ ಪುಕ್ಕಟೆ ಸಿಗುವ ಸಿಹಿಯಾದ ತಿನಿಸು


ಅಣೆಕಟ್ಟಿನ ನೀರು ಒಮ್ಮೆಲೇ ಭೋರ್ಗರೆಯುವ೦ತೆ,


ಮನಸು ಕಾಣುವ ಕನಸಿಗೆ ಇದೆಯೇ ಅಣೆಕಟ್ಟು?


ಕನಸು ಕರಗುವುದಿಲ್ಲ, ಉರಿದು ಬೂದಿಯಾಗುವುದಿಲ್ಲ!


ಕ್ಷಣಕ್ಕೊ೦ದು,ದಿನಕ್ಕೊ೦ದು ಬದುಕಿನಲಿ


ಸದಾ ಕನಸುಗಳ ದ೦ಡು!ಕನಸು ಕರಗುವುದಿಲ್ಲ..


 


ಕನಸು ಕರಗುವುದಿಲ್ಲ... ಇದು ಹತಾಶೆಗಳ


ಮೆಟ್ಟಿ ನಿಲ್ಲಲು ಕಲಿಸುವ ಮಾರ್ಗದರ್ಶಿನಿ,


ಆಸೆಗಳ ಟಿಸಿಲೊಡೆಸುವ ಸ೦ಜೀವಿನಿ

ಇವತ್ತು 'ಗಂಡಸರ ದಿನ' ಗೊತ್ತಾ?

ದೃಶ್ಯ 1 ಟೇಬಲ್ ಮೇಲಿರುವ ಪತ್ರವೊಂದನ್ನು ಅಪ್ಪ ತೆಗೆದು ಓದುತ್ತಾನೆ. ಕಣ್ಣೀರು ಸುರಿಸುತ್ತಾ, ನಡುಗುವ ಕೈಗಳಿಂದ ಆ ಪತ್ರವನ್ನು ಹಿಡಿದು ಅಮ್ಮೂ....ನೀನೇ ನನ್ನ ಬದುಕು ಕಣೇ...ಇವತ್ತು ನೀನು ಆ ವಿಶ್ವಾಸವನ್ನು ಕಳೆದುಕೊಂಡಿದ್ದೀಯಾ... ದೃಶ್ಯ -2 ಮನೆ ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋಗಲು ತೀರ್ಮಾನಿಸಿದ್ದ ಮಗಳು ಅಮ್ಮು...ಅಳುತ್ತಾ ಅರ್ಧ ದಾರಿಯಿಂದ ಮತ್ತೆ ಮನೆಗೆ ಬರುತ್ತಾಳೆ. ದೃಶ್ಯ-3 ಮನೆಗೆ ಬಂದವಳೇ ಅಪ್ಪನನ್ನು ತಬ್ಬಿಕೊಂಡು ಅಳುತ್ತಾಳೆ.... ಹಿನ್ನೆಲೆಯಲ್ಲಿ 'ವಿಶ್ವಾಸವೇ ಮಿಗಿಲು ಅಲ್ಲವೇ?' ಎಂಬ ಸ್ಲೋಗನ್್ನೊಂದಿಗೆ 'ಕಲ್ಯಾಣ್ ಜ್ಯುವೆಲ್ಲರ್ಸ್್'ನ ಜಾಹೀರಾತು ಟಿವಿ ಸ್ಕ್ರೀನ್್ನಲ್ಲಿ ಮೂಡಿಬರುತ್ತದೆ. (ನಾನು ಈ ಜಾಹೀರಾತು ನೋಡಿದ್ದು ಮಲಯಾಳಂ ವಾಹಿನಿಯಲ್ಲಿ, ಅದರ ಕನ್ನಡ ಅನುವಾದ ಇದು) ದೃಶ್ಯ-4 ಇದಾದ ನಂತರ ಕಾರಿನ ಪಕ್ಕ ತನ್ನ ಪ್ರೇಯಸಿಗಾಗಿ ಕಾಯುತ್ತಾ ನಿಂತಿರುವ ಹುಡುಗ... ಈ ದೃಶ್ಯ ಮಿಂಚಿ ಮರೆಯಾಗುತ್ತದೆ.

ಪ್ರೇಮ-ಆಧ್ಯಾತ್ಮ


ಗೆಳತೀ,
ನಿನ್ನ

ಹುಚ್ಚು
ಪ್ರೇಮದ
ನಶೆಯಲ್ಲಿ
ಕೊಚ್ಚಿಹೋದವು
ನನ್ನೆಲ್ಲ್ಲ
ಕಾಪಿಟ್ಟ
ಆಧ್ಯಾತ್ಮಿಕತೆಯ
ಥೀಯರಿಗಳು...
......
......
ಅದೇ
ಹುಚ್ಚು
ಪ್ರೇಮದ
ನಶೆ
ನನ್ನನ್ನು
ದಡಕ್ಕೆ
ಬೀಸಿ ಒಗೆದಾಗ
ದೂರದಲ್ಲಿ
ಆ ಆಧ್ಯಾತ್ಮಿಕ
ಥೀಯರಿಗಳು
ಮೆಲ್ಲಗೆ
ನಗುತ್ತಿದ್ದವು
ತೆರೆದ ಬಾಹುಗಳಿ೦ದ.....

 

(ಹನಿಗವನ)

ಒಂದು ಮಾತು ಮತ್ತೊಂದು ಮೌನದಾಚೆಗೆ.......!

ಮನು,
ನೀನು ಈ ಪತ್ರ ಓದಿ ಮುಗಿಸುವಷ್ಟರಲ್ಲಿ ನಾನು  ಬಹುಶಃ  ಅಮೆರಿಕದಲ್ಲಿ  ಲ್ಯಾಂಡ್ ಆಗಿರ್ತಿನೇನೋ .ನಿನ್ನೆಡೆಗಿನ ಬೇಸರ ಸಿಟ್ಟು ತಾತ್ಸಾರ ಎಲ್ಲದರಕ್ಕಿಂತ ಜಾಸ್ತಿ ಅಸಹ್ಯ ಎಲ್ಲವನ್ನು ತೆಕ್ಕೆಗೆಳೆದುಕೊಂಡು ಬರಿತಿರೋ ಮೊದಲ ಹಾಗೂ ಕೊನೆಯ ಪತ್ರ..ಪತ್ರವೇ ಬೇಕಿರಲಿಲ್ಲ...ಬಟ್ ನಿನ್ ಜೊತೆ ಮಾತಾಡೋಕೆ ಇಷ್ಟ ಇಲ್ಲ.