ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

"ಸಂನ್ಯಾಸಿಗೇಕೆ ಶೂಲಪ್ರಾಪ್ತಿ?"

 


ಉಡುಪಿ ಕೃಷ್ಣದೇವಾಲಯವನ್ನು ಅಷ್ಟಮಠಗಳ ಸುಫರ್ದಿಗೆ ಒಪ್ಪಿಸಿಕೊಡುವ ರಾಜ್ಯ ಸರಕಾರದ ಆದೇಶದ ಕಾನೂನು ಮಜಲುಗಳನ್ನು,ಪೇಜಾವರ ಶ್ರೀಗಳು ಜನತೆಗೆ ಇಷದವಾಗಿ ತಿಳಿಸಿಕೊಟ್ಟಿದ್ದಾರೆ. ಅದಕ್ಕೆ ಇದೊಂದು ಪ್ರತಿಕ್ರಿಯೆ.ಈ Unconventional ಪ್ರತಿಕ್ರಿಯೆಗಾಗಿ ಮೊದಲೇ ಕ್ಷಮೆ ಕೋರುತ್ತೇನೆ.


“ಸಾಲವೆಂಬುದು ಶೂಲ” - ಹೀಗೊಂದು ಗಾದೆ. “ಸಂನ್ಯಾಸಿಗೇಕೆ ಶೂಲಪ್ರಾಪ್ತಿ?” ಎಂಬ ಇನ್ನೊಂದು ಧ್ವನಿಪೂರ್ಣ ಗಾದೆಯೂ ಕನ್ನಡದಲ್ಲಿದೆ.

ಶಕ್ತಿವಂತರಾಗಲು ಮಾಂಸಾಹಾರ ಅಗತ್ಯವೇ?

 

ಸ್ಪಷ್ಟನೆ : ಇದು "ಶಕ್ತಿವಂತರಾಗುವ" ಬಗ್ಗೆ ಮಾತ್ರ. ಸಸ್ಯಾಹಾರ vs ಮಾಂಸಾಹಾರ ಬಗೆಗಿನ ಎಂದಿನ ವಾದ ಅಲ್ಲ.

 

ಕೆಳಗಿನ ಕೊಂಡಿಯಲ್ಲಿ ಕುಸ್ತಿಪಟು ಸುಶೀಲ್ ಕುಮಾರ್ ಅವರು ಸಸ್ಯಾಹಾರಿಗಳು ಎಂಬ ಬಗ್ಗೆ ವಿವರಗಳಿವೆ. 

http://www.petaindia.com/feat/f-sushil-kumar.asp

 

ಹಾಗೆಯೇ ಕೆಳಗಿನ ಕೊಂಡಿಯಲ್ಲಿ ಸಸ್ಯಾಹಾರಿಗಳಾದ ೧೦ ಪ್ರಖ್ಯಾತ ಕ್ರೀಡಾಪಟುಗಳ ಬಗ್ಗೆ ವಿವರಗಳಿವೆ :

ನನ್ನ ಆತ್ಮಹತ್ಯೆ ಪ್ರಯತ್ನ..

ಮೊನ್ನೆ ಹೆಗ್ಡೆ ಅವರ ಕವನ ಓದಬೇಕಾದಾಗ ನೆನಪಿಗೆ ಬಂದದ್ದು. ಸುಮಾರು ೧೬ ವರ್ಷದ ಹಿಂದಿನ ಮಾತು ಆಗಿನ್ನೂ ಒಂಭತ್ತನೇ ತರಗತಿಯಲ್ಲಿ ಕಲಿಯುತ್ತಿದ್ದೆ. ಆಗ ನನಗೆ ಸಿಕ್ಕಾಪಟ್ಟೆ ಕೋಪ ಬರುತ್ತಿತ್ತು, ಅಂದರೆ ಸುಮ್ಮ ಸುಮ್ಮನೆ ಕೋಪ ಮಾಡಿಕೊಳ್ಳುವುದು ಎಲ್ಲದಕ್ಕೂ ಹಠ ಮಾಡುವುದು, ಚಿಕ್ಕ ಚಿಕ್ಕ ವಿಷಯಕ್ಕೆ ಗಲಾಟೆ ಮಾಡುವುದು ಹೀಗೆ. ಆ ವಯಸ್ಸು ಅಂತಹುದು. ಇನ್ನೊಂದು ಕೆಟ್ಟ ಅಭ್ಯಾಸವೆಂದರೆ ಕೋಪ ಬಂದಾಗಲೆಲ್ಲ ಮನೆ ಬಿಟ್ಟು ಹೋಗುತ್ತೇನೆ, ಸತ್ತು ಹೋಗುತ್ತೇನೆ ಇಂಥಹ ಮಾತುಗಳನ್ನು ಆಡುತ್ತಿದ್ದೆ. ಮೊದಮೊದಲು ಬೈಯ್ಯುತ್ತಿದ್ದ ಅಪ್ಪ ಅಮ್ಮ ನಂತರ ಬೇಸತ್ತು ಏನಾದರೂ ಮಾಡಿಕೋ ಎನ್ನುತ್ತಿದ್ದರು. ಕೆಲವೊಮ್ಮೆ ಅಪ್ಪನ ಕೈ ರುಚಿಯ ಅನುಭವವೂ ಆಗಿದೆ (ಅಂದರೆ ಒದೆಗಳು ಬಿದ್ದಿವೆ) ಆದರೂ ನನ್ನ ಹಠ ಕಮ್ಮಿ ಆಗಿರಲಿಲ್ಲ.

ಜನ್ಮ ದಿನದ ಶುಭಾಷಯಗಳು

ನಮ್ಮ ನಿಮ್ಮೆಲ್ಲರ ಚಿಂತನೆಗಳನ್ನು ಬರೆಯಲು ಅನುವು ಮಾಡಿಕೊಟ್ಟಿರುವ, ಕನ್ನಡದ ಹೆಮ್ಮೆಯ ಸಂಪದದ ಕತೃ ಶ್ರೀಯುತ ಹರಿ ಪ್ರಸಾದ್ ನಾಡಿಗರು ಇಂದು ನೂತನ ವಸಂತಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅವರಿಗೆ ಕನ್ನಡಾಂಬೆ ಧೀರ್ಘ ಆಯಸ್ಸು ಹಾಗೇ ಮತ್ತಷ್ಟು ಹೆಚ್ಚಿನ ಯಶಸ್ಸನ್ನು ನೀಡಲಿ ಎಂದು ಹಾರೈಸುತ್ತೇನೆ.

ಹರಿಪ್ರಸಾದ್ ನಾಡಿಗರಿಗೆ ಹುಟ್ಟು ಹಬ್ಬದ ಶುಭಾಷಯಗಳು

ನನ್ನಿಂದಾಗೇ ಇಷ್ಟೆಲ್ಲಾ ಆಗಿದ್ದು…!


ಅಂದೂ ಕೂಡ ಎಂದಿನಂತೆ ಮುಂಜಾನೆ ಐದು ಘಂಟೆಗೆ ನನ್ನ ಚರದೂರವಾಣಿಯಲ್ಲಿ ಎಚ್ಚರಿಕೆಯ ಘಂಟೆ ಹೊಡೆದುಕೊಂಡಾಗಲೇ ನಿದ್ದೆಯಿಂದ ಎದ್ದಿದ್ದೆ.

ಎರಡು ಲೋಟ ನೀರನ್ನು ಬಿಸಿಮಾಡಿ ಕುಡಿದು, ಹಲ್ಲುಜ್ಜಿ, ಮುಖ ತೊಳೆದುಕೊಂಡು, ಎಂದಿನಂತೆ ಮುಂಜಾನೆಯ ನಡಿಗೆಗೆ ಹೊರಡುವಾಗ ಸರಿಯಾಗಿ ಐದೂ ಇಪ್ಪತ್ತೈದು.

ಮಾಮೂಲಿನಂತೆ, ದಾರಿಯಲ್ಲಿ ಸಿಕ್ಕ ಪರಿಚಯಸ್ತರಿಗೆ ಮುಗುಳ್ನಗೆ ಕೊಡುತ್ತಾ, ನಮಸ್ಕಾರ ಮಾಡುತ್ತಾ, ನಡಿಗೆ ಮುಗಿಸಿ, ಮನೆಗೆ ಬರುವಾಗ ಆರೂವರೆಗಿನ್ನೂ ಐದು ನಿಮಿಷ ಬಾಕಿ.

ಮಂಗಳೂರಿನಲ್ಲಿ ಕ್ವಿಜ಼್!

ಮಂಗಳೂರಿನಲ್ಲಿ ಕ್ವಿಜ಼್!


ಇದೇ ಶನಿವಾರ, ೨೦.೧೧.೨೦೧೦ ರ ಸಂಜೆ ೫.೦೦ ಗಂಟೆಗೆ


ಮಂಗಳೂರಿನ ಸಮ್ಮರ್ ಸ್ಯಾಂಡ್ ಬೀಚ್-ನಲ್ಲಿ ಕ್ವಿಜ಼್ ಕಾರ್ಯಕ್ರಮ ನಡೆಯಲಿದೆ


ದಕ್ಷಿಣ ಕನ್ನಡ ಜಿಲ್ಲಾ ಅಂತರ ಶಾಲಾ ವಿಜ್ಞಾನ ಕ್ವಿಜ಼್ ಕಾರ್ಯಕ್ರಮ!


ನೋಡಲು ಹಾಗೂ ಭಾಗವಹಿಸಲು ಬನ್ನಿ!


ಸರಿ ಉತ್ತರ ನೀಡಿದವರಿಗೆ ಒಂದು ಪುಸ್ತಕ ಹಾಗೂ ಕ್ಯಾಡ್ಬರಿ ಚಾಕೋಲೆಟ್ ಬಹುಮಾನ!!!


ಬನ್ನಿ! ಬೀಚಿನಲ್ಲಿ ಭೇಟಿಯಾಗೋಣ


ನಾ.ಸೋಮೇಶ್ವರ