ಚೌ ಚೌ ಹಾಡು
ನಲವತ್ತೊಂದು ಸಿನಿಮಾ ಹೆಸರನ್ನು ಬಳಸಿ ಈ ಕವಿತೆಯನ್ನು ಬರೆದಿದ್ದೇನೆ.
- Read more about ಚೌ ಚೌ ಹಾಡು
- 8 comments
- Log in or register to post comments
ನಲವತ್ತೊಂದು ಸಿನಿಮಾ ಹೆಸರನ್ನು ಬಳಸಿ ಈ ಕವಿತೆಯನ್ನು ಬರೆದಿದ್ದೇನೆ.
’ನಿನ್ನ ಓದಿಸಿದ ಕರ್ಮಕ್ಕೆ ಇವತ್ತು ದೇವರಿಲ್ಲಂತಿಯೇನಲೇ?’ಎಂದು ರಾಯರು ತಮ್ಮ ಧ್ವನಿ ಪೆಟ್ಟಿಗೆಯ ಫ್ರೀಕ್ವೆನ್ಸಿಯನ್ನು ಆದಷ್ಟು ಜೋರಾಗಿ ಬಳಸಿದ್ದು ಇಡೀ ಗಲ್ಲಿಗೇ ಕೇಳಿಸಿ ಸರಿ ಸುಮಾರು ಹತ್ತರ ಹೊತ್ತಿಗೆ ಮಲಗಿದ್ದವರೆಲ್ಲಾ ಒಮ್ಮೆ ಎಚ್ಚರಗೊಂಡು ಪುನಃ ನಿದ್ದೆ ಹೋದರು. ಮನೆಯೊಳಗಿನಿಂದ ಬರುತ್ತಿದ್ದ ’ಬುಸ್ ಬುಸ್’ ಏದುಸಿರಿನ ಸದ್ದಿನಿಂದ ರಾಯರು ತಮ್ಮ ಮಗನಿಗೆ ಬುದ್ಧಿ ಕಲಿಸುವ ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆಂದು ಇನ್ನೂ ಮಲಗದವರು ಅಂದುಕೊಂಡರು. ಇಷ್ಟಕ್ಕೂ ಬೆಳೆದ ಮಗನೊಡನೆ ಸ್ನೇಹಿತನಾಗಿರಬೇಕು ಎಂಬ ಶ್ಲೋಕವೊಂದನ್ನು ಶಿರಸಾ ಪಾಲಿಸುತ್ತಿದ್ದ ರಾಯರು ಇಂದೇಕೆ ಇಷ್ಟು ಉದ್ರಿಕ್ತರಾದರು ಎಂಬುದು ಅಲ್ಲಿಯವರೆಗೆ ಅವರ ಸಂಭಾಷಣೆ ಕೇಳಿದವರಿಗೆ ಮಾತ್ರ ಅರಿವಿತ್ತು.
ಇಬ್ಬರು ಪ್ರೇಮಿಗಳ ಸಂಭಾಷಣೆ ಹೇಗಿರುತ್ತದೆ??
ಹುಡುಗಿ ಹುಡುಗನಿಗೆ ರಾತ್ರಿ ಮಿಸ್ಡ್ ಕಾಲ್ ಕೊಡುತ್ತಾಳೆ. ಹುಡುಗ ವಾಪಸ್ ಕರೆ ಮಾಡುತ್ತಾನೆ.
ಹುಡುಗಿ : ಹಲೋ
ಹುಡುಗ : (ಅಯ್ಯೋ ಇವತ್ತೇನು ಕುಯ್ಯುತ್ತಾಳೋ) ಹಾಯ್..ಏನು ಹೇಳು.
ಹುಡುಗಿ : ಏನಿಲ್ಲ ಸುಮ್ಮನೆ ಕಾಲ್ ಮಾಡಿದೆ.
ಹುಡುಗ : (ಕಾಲ್ ಯಾವತ್ತು ಮಾಡಿದ್ದೀಯ..ಯಾವಾಗಲೂ ಮಿಸ್ಡ್ ಕಾಲ್ ತಾನೆ ಕೊಡೋದು) ಸರಿ ಸರಿ..ಎನು ಮಾಡ್ತಿದ್ಯ ಚಿನ್ನು..
ಹುಡುಗಿ : ಈಗ ತಾನೆ ಊಟ ಆಯ್ತು ಹನಿ..ನೀನೇನು ಮಾಡ್ತಿದ್ಯ?
ಹುಡುಗ : ನಂದು ಈಗ ತಾನೆ ಊಟ ಆಯ್ತು. ರೇಡಿಯೋಲಿ ಕುಣಿದು ಕುಣಿದು ಬಾರೆ ಹಾಡು ಕೇಳ್ತಿದ್ದೆ.
ಹುಡುಗಿ : ನೈಸ್ ಸಾಂಗ್.
(ಹಾಗೆ ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ಎಂದು ಗುನುಗಿದಳು)
ಪ್ರತಿ ಸಲ ಸೋಲುತಿರುವ ನನ್ನ ಬದುಕಿಗೆ ನಿನ್ನ ನೆನಪೊಂದೆ ಕೈ ಹಿಡಿದು ನಡೆಸುವ ದಾರಿ ದೀಪ.ಅತ್ತು ಅತ್ತು ಸುಸ್ತಾದ ಕಣ್ಣಿಗೆ ನಿನ್ನ ನೋಡುವ ಬಯಕೆ ಗರಿ ಗೆದರಿ ಕಾಯುತಿದೆ.ಗೊತ್ತೇ ಇರ್ಲಿಲ್ಲ ಕಣೋ ನನ್ನ ತಪ್ಪು!
ಆ ದಿನ ನಿನ್ನ ಪ್ರೀತಿ ತುಂಬಿದ ಮಾತು ನನ್ನ ಕಿವಿಗೆ ಇಷ್ಟ ಆಗ್ಲಿಲ್ಲ.ಎಲ್ಲ ಬೊಗಳೆ ಅಂದ್ಕೊಂಡು ನಕ್ಕೆ.ನಿನ್ನ ಕಣ್ಣಲಿದ್ದ ಆ ಪ್ರೀತಿ ನನಗೆ ತೋರಲೇ ಇಲ್ಲ.ನಿನ್ನ ಮುಗ್ದ ಮುಖದ ಹಿಂದೆ ಏನೋ ಮೋಸ ಇದೆ ಅಂದ್ಕೊಂಡು ಸುಮ್ನಾದೆ.
ನನ್ನ ಹಿಂದೆ ಹಿಂದೆ ನೀನ ಬಂದಾಗ ಆ ದಿನ ತುಂಬಾನೆ ರೇಗಾಡಿ ಬಿಟ್ಟೆ.ನೀನ್ ಏನ್ ಹೇಳ್ಬೇಕು ಅಂತ ಬಂದ್ದಿಯ ಅಂತಾನು ಕೇಳೋದಕ್ಕೂ ಹೋಗಲಿಲ್ಲ. ಏನು ಹೇಳದೆ ನೀ ಹೋದಾಗ ನನಗೆ ಆಶ್ಚರ್ಯ ಆಯ್ತು.ಮತ್ತೆ ಅದ್ರ ಬಗ್ಗೆ ಜಾಸ್ತಿ ಯೋಚಿಸಲೂ ಇಲ್ಲ.ಆದೆ ನಾನ್ ಮಾಡಿದ ತಪ್ಪು.
ನಾವೆಲ್ಲರೂ ಮಂಜನ ಮನೆಗೆ ಊಟಕ್ಕೆ ಹೋಗಿದ್ದೆವು. ಮಂಜನ ಮನೆಗೆ ಮಂಜನ ತಂಗಿ ಶಾಂತಲಾ ತನ್ನ ಮಕ್ಕಳು ಸಂಕೇತ ಮತ್ತು ಶರತ ಜೊತೆ ಬಂದಿದ್ದಳು.
ಮಂಜ ನಿನಗೆ ಏನೇನು? ಬರುತ್ತೆ, ಶಾಲೆಯಲ್ಲಿ ನಿಮ್ಮ ಟೀಚರ್ ಏನೇನು ಹೇಳಿದ್ದಾರೆ ಎಂದು ಅಳಿಯ ಸಂಕೇತನಿಗೆ ಕೇಳಿದ.
ಅದಕ್ಕೆ ಸಂಕೇತ ಅವರಿಗೆ ಟೀಚರ್ ಅನ್ನಬಾರದು ಅವರು ಮಿಸ್ ಎಂದ.
ಮಿಸ್ ಅಂದರೆ ಇನ್ನೂ ಮದುವೆ ಆಗಿಲ್ಲವಾ? ಎಂದ.
ಪಾಪ ಆರು ವರ್ಷದ ಸಂಕೇತನಿಗೆ ಏನು? ತಿಳಿಯಬೇಕು. ಅವರ ಅಮ್ಮ ಶಾಂತಾ ಮದುವೆ ಆಗಿದೆ ಕಣೋ ಎಂದಳು. ನಿನಗೆ ಎರಡನೆ ಮದುವೆ ಮಾಡಿಕೊಳ್ಳುವ ಆಸೆ ಏನೋ? ನೋಡಿ ಅತ್ತಿಗೆ ಎಂದು ಅವನ ಹೆಂಡತಿಗೆ ಹೇಳಿದಳು.
ಆಯಿತು ಏನೇನು ಹೇಳಿದ್ದಾರೆ ಸಂಕೇತ ನಿಮ್ಮ ಮದುವೆಯಾದ ಮಿಸ್ ಎಂದು ಮಂಜ ಕೇಳಿದ.
ಬಾ ಬಾ ಬ್ಲ್ಯಾಕ್ ಶೀಪ ಹಾವಿ ಎನಿ ಹುಲ್ಲ ಎಂದ ತೊದಲುತ್ತಾ ಹೇಳಿತು.
ಎಲ್ಲಾ ಅರ್ಥ ಆಯಿತು. ಆದರೆ, ಕೆಲವು ಬಿಟ್ಟು ಎಂದ ಮಂಜ. ಬಾ.. ಬಾ.. ಎಂದು ಏನನ್ನು ಕರೆದೆ . ಹಾವಿಗಾ? ಮತ್ತೆ ಅದಕ್ಕೆನು ಗೊತ್ತು ಹುಲ್ಲ ಇದೆಯೋ ಇಲ್ಲವೋ ಎಂದು ತಮಾಷೆಗೆ ಕೇಳಿದ.
’ಸಂಪದ’ದಲ್ಲಿ ಆಳವಾದ ಚರ್ಚೆ ಮತ್ತು ವಿಮರ್ಶೆಯ ತಥಾಕಥಿತ ಕೊರತೆಯ ಬಗ್ಗೆ ಕಳೆದ ವಾರ ಇದೇ ’ಸಂಪದ’ದಲ್ಲಿ ಆಳವಾದ ಚರ್ಚೆ ನಡೆಯಿತಷ್ಟೆ. ಸಂಪದಿಗರೆಲ್ಲರೂ ಸಾಹಿತ್ಯವನ್ನು ವಿಮರ್ಶಿಸುವಷ್ಟು ಅಥವಾ ವಿಷಯಗಳನ್ನು ಆಳವಾಗಿ ಚರ್ಚಿಸಿ ಬರೆಯುವಷ್ಟು ಪ್ರಬುದ್ಧರಾಗಿರಲೇಬೇಕೆಂದು ನಿರೀಕ್ಷಿಸುವುದು ಸರಿಯಲ್ಲ ಎಂಬ (ಒಪ್ಪತಕ್ಕ) ಅಭಿಪ್ರಾಯ ಆ ಚರ್ಚೆಯಲ್ಲಿ ವ್ಯಕ್ತವಾಗಿದೆ. ಆದರೆ, ’ಹಾಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಎಲ್ಲ ಮಿತ್ರರೂ, ಬರವಣಿಗೆಯ ಮೂಲಕ ಚರ್ಚೆಯಲ್ಲಿ ಅಥವಾ ವಿಮರ್ಶೆಯಲ್ಲಿ ಪಾಲ್ಗೊಳ್ಳಲು ಅತ್ಯಂತ ಸಮರ್ಥರು’ ಎಂಬ ವಾಸ್ತವದ ಅನಾವರಣವು ಆ ಮಿತ್ರರ ಸದರಿ ಪ್ರತಿಕ್ರಿಯೆಗಳಿಂದಲೇ ಉಂಟಾಗಿದೆ! ಇದು ನಿಜಕ್ಕೂ ಸಂತಸದ ವಿಷಯ.
ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ.......
ಅದೊಂದು ಕಾಲ......
ಮಾರುದ್ದ ಜಡೆಯವಳು (ಮಾರುದ್ದ ಏನು ಬಂತು..ಆಕೆ ರಸ್ತೆಯಲ್ಲಿ ೫ನೇ ಕ್ರಾಸ್ ತಲುಪಿದರೂ, ಜಡೆ ತುದಿ ಇನ್ನೂ ೪ನೇ ಕ್ರಾಸ್‌ನಲ್ಲೇ ಇರುತ್ತಿತ್ತು!!) ಮಲ್ಲಿಗೆ ಮುಡಿದು ಹೋಗುವಾಗ ಈ ಹಾಡು ಬಾಯಲ್ಲಿ (ಛೇಡಿಸಲಿಕ್ಕಲ್ಲ) ತನ್ನಷ್ಟಕ್ಕೇ ಬರುತ್ತಿತ್ತು.