ಸಿಎಂ ಉಲಿದ ಸಾರ್ವಕಾಲಿಕ ಸತ್ಯ!
“ಅಧಿಕಾರದಲ್ಲಿದ್ದಾಗ ಎಲ್ಲರೂ ತಪ್ಪು ಮಾಡಿದ್ದಾರೆ” ಎಂಬ ಮುಖ್ಯಮಂತ್ರಿಗಳ ಉಕ್ತಿಯನ್ನು ತಲೆಬರಹ ಮಾಡಿ, ನವೆಂಬರ್ 16ರ ವಿಜಯ ಕರ್ನಾಟಕ ವರದಿ ಪ್ರಕಟಿಸಿದೆ. ಸಿಎಂ ಆಡಿರುವ ಈ ನುಡಿ ಮೆಚ್ಚಬೇಕಾದ್ದು. “ಈಗ ತಪ್ಪು ಮಾಡುತ್ತಿದ್ದೇನೆ; ಅಧಿಕಾರ ಇರುವವರೆಗೆ ಮಾಡುತ್ತಲೂ ಇರುತ್ತೇನೆ” ಎಂಬ ಪ್ರಾಮಾಣಿಕ Confession ಧ್ವನಿ ಸಹ ಇದರಲ್ಲಿ ಕೇಳಿಸುತ್ತದೆ. ‘ಇಳೆಯ ಪಾಪವನ್ನೆಲ್ಲ ಅಳೆಸಿ, ಶುದ್ಧ ರಾಜಕೀಯದ ಉದ್ಧಾರಕ್ಕಾಗಿ ಉದ್ಭವಿಸಿದ ಅವತಾರ ಪುರುಷ’ ಎಂದು ಅವರು ಎಂದೂ Claim ಮಾಡಿದ್ದಿಲ್ಲವಲ್ಲಾ! ಇಲ್ಲಿ “ತಪ್ಪು” ಎನ್ನುವುದನ್ನು “ಅಪರಾಧ” ಎಂಬರ್ಥದಲ್ಲಿ ತೆಗೆದುಕೊಂಡಗ ವಿಷಯ ಇನ್ನಷ್ಟು ವಿಷದವಾಗುತ್ತದೆ. ರಾಜಕೀಯದ ಅಧಿಕಾರವಿರುವುದೇ “ಅಪರಾಧ” ಮಾಡಲಿಕ್ಕೆ; ಮತ್ತು ಮಾಡಿದ್ದನ್ನು ಜೀರ್ಣ ಮಾಡಿಕೊಳ್ಳಲಿಕ್ಕೆ ಎಂಬ “ಅಲಿಖಿತ ಸತ್ಯ” ಸೂಚ್ಯವಾಗಿ ನಮ್ಮೆಲ್ಲರಿಗೂ ಭಾಸವಾಗಿರುವುದೇ. ಅದು ಇಲ್ಲಿ ಬೀದಿಬಿಚ್ಚಾಗಿರುವುದು ವಿಶೇಷ!
ನಮಗೆ, ಅಂದರೆ ವೋಟು ಹಾಕುವ ಬಕರಾಗಳಿಗೆ ಇದು ಏನಾದರೂ ಹೊಸ “ದರ್ಶನ” ಮಾಡಿಸುವುದಿದೆಯೇ?
- Read more about ಸಿಎಂ ಉಲಿದ ಸಾರ್ವಕಾಲಿಕ ಸತ್ಯ!
- 4 comments
- Log in or register to post comments