ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು
ಕೇವಲ ಎರಡು-ಮೂರು ತಿಂಗಳ ಹಿಂದೆ ಸಂಪದ ಎಂದರೇನು ಎಂದು ಯಾರಾದರು ಕೇಳಿದರೆ ಅದೊಂದು ಸೇವಾಸಂಸ್ಥೆ ಎಂದೊ ಇಲ್ಲ ಕನ್ನಡ ಸಂಘವಿರಬಹುದೆಂದು ಊಹೆ ಮಾಡಿ ಹೇಳಿರುತ್ತಿದ್ದೆ. ನನ್ನ ತಮ್ಮನ ಮಗಳು ಪದೆ ಪದೆ ’ದೊಡ್ಡಪ್ಪ ಯಾವುದಾದರು ದೆವ್ವದ ಕಥೆ ಹೇಳು’ ಎಂದು ತೊಂದರೆ ಕೊಟ್ಟಾಗ ಅದನ್ನು ಅರಸುತ್ತ ಗೂಗಲ್ ಎಂಬ ರೈಲಿನಲ್ಲಿ ಹೊರಟಾಗ ಇಳಿದ ನಿಲ್ದಾಣ ಈ ಸಂಪದ ಎಂಬ ತಾಣ. ಇದು ನನಗೆ ಬೇಕಾದ ಜಾಗವಲ್ಲ ಎಂಬ ಅರಿವಿದ್ದರು ಕಡೆಗೆ ಇಲ್ಲಿಯೆ ನಿಂತು ಬಿಟ್ಟೆ. ಇಲ್ಲಿ ಯಾರು ಬರೆಯಬಹುದೆಂಬ ವಿಷಯ ಅರಿತು ಕುತೂಹಲದಿಂದ ಎಲ್ಲ ನೋಡುತ್ತ ಹೋದಂತೆ ಮನಸ್ಸಿನಲ್ಲಿ ಯಾವುದೋ ಆಸೆ ಗರಿಕೆದರಿತು ಕಾಲೇಜು ದಿನಗಳ ನಂತರ ಕನ್ನಡವೆಂಬ ಬಾಷೆ ಮಾತೃ ಬಾಷೆಯಾದರು ಬಾಯಲ್ಲಿ ಉಳಿದಿತ್ತೆ ವಿನಃ ಪುನಃ ಕೈಯಲ್ಲಿ ಬರೆಯಬಲ್ಲನೆಂಬ ಅಭ್ಯಾಸವೆ ತಪ್ಪಿ ಹೋಗಿತ್ತು. ಇಪ್ಪತ್ತು ವರ್ಷಗಳ ಹಿಂದೆ ಪ್ರಜಾವಾಣಿಯ ವಾಚಕರವಾಣಿಗೆ ಬರೆದ ಪತ್ರದ ನೆನೆಪು, ಬಿಟ್ಟರೆ ಮನೆ ಕಟ್ಟಲು ಸೈಟ್ ತೆಗೆದಾಗ ಆ ಪತ್ರವನ್ನು ಬರಹದಲ್ಲಿ ಟೈಪ್ ಮಾಡಿದ ನೆನಪು ಬಿಟ್ಟರೆ ಕನ್ನಡದ ಬಳಕೆ ಕಡಿಮೆಯೆ. ಹೀಗಾಗಿ ಇಲ್ಲಿ ಏನಾದರು ಬರೆಯಬೇಕೆಂಬ ಬಯಕೆ ಬಲವಾಗಿ ಅಲ್ಪಸ್ವಲ್ಪ ಬರೆಯಲು ಪ್ರಾರಂಬಿಸಿದೆ. ನಂತರ ಇಲ್ಲಿ ಬರೆಯುವ ಇತರ ಲೇಖಕರ ಬರಹಗಳನ್ನು ಅಭ್ಯಾಸಮಾಡುತ್ತಲೆ ಜೊತೆಗೆ ಅವರುಗಳ ಪರಿಚಯ(??) ವಾಗುತ್ತ ಹೋಯಿತು. ಇದಾದರೆ ಒಂದು ಸೋಜಿಗ ನಾನು ಯಾರನ್ನು ಕಾಣೆ ಆದರೆ ಪ್ರಪಂಚದ ಯಾವುದೋ ಮೂಲೆಯಲ್ಲಿರುವ ಆ ವ್ಯಕ್ತಿಗಳೊಂದಿಗೆ ಈ ಮಾಯಪೆಟ್ಟಿಗೆಯ ಮೂಲಕ ಬಾಂಧವ್ಯ !!. ಮಲೆನಾಡಿನ ಕಣಿವೆಯಲ್ಲಿರುವ ಸ್ನೇಹಿತರು ಪ್ರಪಂಚದ ಇನ್ನೊಂದು ಬದಿಯಲ್ಲಿರುವ ಗೆಳೆಯರು ಬೆಂಗಳೂರಿನಲ್ಲಿ ನನ್ನ ಸುತ್ತಲೂ ಕಂಡು ಕಾಣದಂತೆ ಸುತ್ತುತ್ತಿರುವ ಗೆಳೆಯ ಗೆಳತಿಯರು. ಒಬ್ಬರನ್ನು ಕಾಣೆ ಆದರೂ ಬೆಸೆದುಕೊಳ್ಳುವ ಈ ಮಧುರ ಬಾಂಧವ್ಯಕ್ಕೆ ಮನಸ್ಸಿನಲ್ಲಿ ಅಚ್ಚರಿ ಮೂಡುತ್ತದೆ.ಅಟೋ ಡ್ರೈವರ್ ಮೀಟರ್ ಮೇಲೆ ಇಪ್ಪತ್ತು ರೂಪಾಯಿ ಕೊಡಿ ಎಂದರೆ ಹೆಂಡತಿ ತಡೆಯುತ್ತಿದ್ದರೂ ’ಸುಮ್ಮನೆ ಏಕೆ ಅವನ ಜೊತೆ ವಾದ ’ ಎಂದು ಕೊಟ್ಟು ಹೋಗುವ ನಾವು , ಇಲ್ಲಿ ಯಾರೊ ಕಾಣದ ವ್ಯಕ್ತಿಗಳಜೊತೆ ಕೇಳಿಸದ ದ್ವನಿಯಜೊತೆ ವಾದ ಮಾಡುತ್ತೇವೆ. ಎಂತಹ ಕೌತುಕ. ಬೆಳಗ್ಗೆಯೆ ಓದಿದ ಕೆಲವು ಕವನಗಳಿಗೆ , ನಾವಡರ ಲೇಖನ ಅಂತು ಇಂತು ಬಂತು ಬಿಡುಗಡೆಯ ಬಾಗ್ಯ - ಕಾಲದ ಕನ್ನಡಿಗೆ ’ಚೆನ್ನಾಗಿದೆ ’ ಎಂದು ಪ್ರತಿಕ್ರೆಯೆ ಬರೆಯಲು ಹೊರಟರೆ ಎಲ್ಲಿಂದಲೊ ಯಾವುದೋ ಒಂದು ದ್ವನಿ ’ಅಲ್ಲಿಯವರೆಗು ನಡೆಯುತ್ತಿರಲಿ ಚೆನ್ನಾಗಿದೆ ಎಂಬ ಜೈತ’ಎಂದು ಕಿವಿಯಲ್ಲಿ ನುಡಿಯಿತು. ವ್ಯಂಗ್ಯವೋ ನಿರಾಶೆಯೊ ಅರ್ಥವಾಗದ ಯಾವುದಿದಿ ಅಪರಿಚಿತ ದ್ವನಿ ಎಂದುಕೊಂಡರೆ ಅದು ರಘು s p ಯವರ ’ನಾ ಕಂಡ ಸಂಪದ ’ಲೇಖನದ ಪ್ರಭಾವ ಅನ್ನಿಸಿ ಸುಮ್ಮನಾದೆ. ಈಗ ಏಕೊ ಚೆನ್ನಾಗಿದೆ ಚೆನ್ನಗಿಲ್ಲ ಎಂದು ಮನೋಟನಸ್ ಪ್ರತಿಕ್ರಿಯೆ ವ್ಯಕ್ತಪಡಿಸಲು ಬೇಸರವೆನಿಸಿ ಮತ್ತೇನಾದರು ಪದಗಳನ್ನು ಹುಡುಕಿ ನಾವಡರನ್ನು ಅಭಿನಂದಿಸಬೇಕೆನ್ನಿಸಿತು. ಆದರು ಇದೆಂತಹ ವಿಭ್ರಮೆ ನನ್ನದು ಎಂದುಕೊಳ್ಳುವ ಮನಸಿನಲ್ಲಿ ಎಷ್ಟೆಲ್ಲ ಜನ ಅವರಲ್ಲಿ ಒಬ್ಬರನ್ನು ಎಂದು ನಾನು ಬೇಟಿ ಮಾಡಿಲ್ಲ. ಆದರೆ ನನ್ನ ಮನಸ್ಸೆಂಬ ಜೇನುಗೂಡಲ್ಲಿ ಇವರೆಲ್ಲ ನೆಲೆಸಿದ್ದಾರೆ. ಇದು ಮನಸ್ಸಿನ ಒಂದು ವಿಶಿಷ್ಟತೆ ತನ್ನ ಸಂಪರ್ಕಕ್ಕೆ ಬರುವ ಪ್ರಾಪಂಚಿಕವಾದ ಪ್ರತಿ ವಸ್ತುವಿನ ಬಗೆಗು ಪ್ರತಿ ವ್ಯಕಿಯ ಬಗೆಗು ತನ್ನದೆ ಆದ ಕೋಪವೊ ಪ್ರೀತಿಯೊ ವ್ಯಾಮೋಹವೊ ದ್ವೇಷವೋ ಎನೋ ಒಂದನ್ನು ಬೆಳೆಸಿಕೊಳ್ಳುತ್ತಲೇ ಸಾಗುವ ಇದು ಸದಾ ನಿರ್ಲಿಪ್ತವಾಗಿರಬೇಕೆಂಬ ಎಲ್ಲ ದಾರ್ಶನೀಕರ ಮಾತುಗಳನ್ನು ಗಾಳಿಗೆ ತೂರಿಬಿಡುತ್ತದೆ.
Comments
ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು
In reply to ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು by Jayanth Ramachar
ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು
In reply to ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು by Jayanth Ramachar
ಉ: ನೀವ್ ಏನ್ ಹೇಳ್ತೀರ ? ಸಂಪದ-ಮತ್ತು-ನಾವು..??
ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು
In reply to ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು by kavinagaraj
ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು
ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು
In reply to ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು by ksraghavendranavada
ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು
In reply to ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು by ksraghavendranavada
ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು
ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು
In reply to ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು by asuhegde
ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು
ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು
In reply to ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು by gopaljsr
ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು
In reply to ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು by partha1059
ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು
ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು
In reply to ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು by sm.sathyacharana
ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು
ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು
In reply to ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು by santhosh_87
ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು
ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು
In reply to ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು by ksraghavendranavada
ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು
In reply to ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು by partha1059
ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು
In reply to ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು by asuhegde
ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು
ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು
In reply to ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು by hariharapurasridhar
ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು
In reply to ಉ: ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು by hariharapurasridhar
ಉ: ನೀವ್ ಏನ್ ಹೇಳ್ತೀರ ?:ಹರಿಹರ ಪುರ ಶ್ರೀಧರ್ ಅವ್ರೆ..??