ಸಾವೇ ಉತ್ತರವಲ್ಲ ನಮ್ಮೆಲ್ಲಾ ಸಮಸ್ಯೆಗಳಿಗೆ!

ಸಾವೇ ಉತ್ತರವಲ್ಲ ನಮ್ಮೆಲ್ಲಾ ಸಮಸ್ಯೆಗಳಿಗೆ!



ನಾವೆಷ್ಟೇ ವಿದ್ಯಾವಂತರಾದರೂ, ಅಂತರ್ಯದಲಿ ನಾವೆಲ್ಲರೂ ಇನ್ನೂ ಮಕ್ಕಳೇ
ಮಾನಸಿಕ ಶಾಂತಿ ಮತ್ತು ಸ್ವಲ್ಪ ಸ್ವಾತಂತ್ರ್ಯ ಇವು ನಮ್ಮೆಲ್ಲರ ಆವಶ್ಯಕತೆಗಳೇ
 
ಮದುವೆ ಈಗ ಪವಿತ್ರ ಸಂಬಂಧವಾಗುಳಿದಿಲ್ಲ, ಆಗಿದೆ ಅದೂ ಒಂದು ವ್ಯವಹಾರ
ಕೊಡು-ಕೊಳ್ಳುವ ವ್ಯವಹಾರ ಸರಿ, ಕೊಡುವಿಕೆಯೇ ಅತಿಯಾದರಷ್ಟೇ ಸಂಚಕಾರ
 
ಕೊಂಚ ಪಕ್ಕಕ್ಕೆ ಸರಿದು ಹೊಚ್ಚ ಹೊಸ ಬಾಳನ್ನಾರಂಭಿಸಿ, ಜೊತೆ ದುಸ್ತರವಾದಾಗ
ಸಾವೇ ಉತ್ತರವಲ್ಲ ನಮ್ಮೆಲ್ಲಾ ಸಮಸ್ಯೆಗಳಿಗೆ, ಈ  ಬಾಳೇ ಕೊನೆಗೊಳ್ಳಬಾರದಾಗ
 
ಅಳಿದವರ ಆತ್ಮಕ್ಕೆ ಶಾಂತಿ ಸಿಗಲಿ, ಇದಷ್ಟೇ ನಾವೀಗ ಮಾಡಬಹುದಾದ ಪ್ರಾರ್ಥನೆ
ಧೈರ್ಯವಂತರಾಗಿ ಸಮಸ್ಯೆಗಳನು ಎದುರಿಸೋಣ, ಜೀವನದ ದಿನಗಳು ಕೆಲವೇನೇ

********************

ಮೊನ್ನೆ ಆತ್ಮಹತ್ಯೆ ಮಾಡಿಕೊಂಡ ಈರ್ವರು ವಿದ್ಯಾವಂತ ಉದ್ಯೋಗಿ ಮಹಿಳೆಯರ ಆತ್ಮಗಳಿಗೆ ಶಾಂತಿ ಸಿಗಲೆಂಬ ಪ್ರಾರ್ಥನೆ!

http://thatskannada.oneindia.in/news/2010/11/15/two-software-engineers-end-life-bangalore.html



Rating
No votes yet

Comments