ಸಂಪದ ಸುಧೆ.

ಸಂಪದ ಸುಧೆ.

ಸಂಪದ ವೃಕ್ಷದ ಕೊಂಬೆಗಳು ನಾವು,
ಸಂಪದ ಬಳ್ಳಿಯ ಹೂವುಗಳು ನಾವು
ಸಂಪದ ಗೂಡಿನ ಜೇನುಗಳು ನಾವು
ಹರಿಯಲಿ ಬರಹದ ಸುಧೆ ಸದಾ ಸಂಪದದಲಿ.
ಹರಿಯಲಿ ಬರಹದ ಸುಧೆ ಸದಾ ಸಂಪದದಲಿ.

ಎಲ್ಲಿದ್ದರೂ ಹೇಗಿದ್ದರೂ ನಾವೆಲ್ಲರೂ ಸಂಪದಿಗರು.
ನಮ್ಮ ಬರಹಗಳಿಗೆ ಶೃಂಗಾರಗೊಂಡ ವೇದಿಕೆ ಈ ಸಂಪದ..
ಓದುವ ಮನಸಿಗೆ ಮುದ ನೀಡುವ ಬರಹಗಳು
ಬರೆಯುವ ಮನಸಿಗೆ ಉತ್ತೇಜನ ನೀಡುವ ಪ್ರತಿಕ್ರಿಯೆಗಳು
ಹರಿಯಲಿ ಬರಹದ ಸುಧೆ ಸದಾ ಸಂಪದದಲಿ.
ಹರಿಯಲಿ ಬರಹದ ಸುಧೆ ಸದಾ ಸಂಪದದಲಿ.

ಕನ್ನಡ ನಾಡಿನ ಸೊಗಡನ್ನು ಕನ್ನಡ ನುಡಿಯ ಕಂಪನು ಬೀರುತಿಹುದು
ಕಥೆ,ಕವನ, ಹಾಸ್ಯ, ಅನುಭವ, ಪ್ರವಾಸ, ಚರ್ಚೆ ಒಂದೇ ಎರಡೇ
ಒಂದೇ ಸಾಲಿನಲ್ಲಿ ಹೇಳಲಾಗದಷ್ಟು ವಿಷಯಗಳು
ಒಂದೇ ಹಾಳೆಯಲ್ಲಿ ಹೇಳಲಾಗದಷ್ಟು ಬರಹಗಾರರು.
ಹರಿಯಲಿ ಬರಹದ ಸುಧೆ ಸದಾ ಸಂಪದದಲಿ.
ಹರಿಯಲಿ ಬರಹದ ಸುಧೆ ಸದಾ ಸಂಪದದಲಿ.

ಐದು ವರ್ಷದ ಪುಟ್ಟ ಕಂಡ ಈ ಸಂಪದ
ನವನವೀನ ರೂಪದ ನಮ್ಮೀ ಸಂಪದ..
ವಿದೇಶದಲ್ಲೂ ಛಾಪನ್ನು ಮೂಡಿಸಿರುವ ಸಂಪದ..
ಹೀಗೆ ಸಾಗಲಿ ನಮ್ಮೀ ಸಂಪದ ಜಯಪ್ರದವಾಗಿ..
ಹರಿಯಲಿ ಬರಹದ ಸುಧೆ ಸದಾ ಸಂಪದದಲಿ.
ಹರಿಯಲಿ ಬರಹದ ಸುಧೆ ಸದಾ ಸಂಪದದಲಿ.

ಸಂಪದ ವೃಕ್ಷದ ಕೊಂಬೆಗಳು ನಾವು,
ಸಂಪದ ಬಳ್ಳಿಯ ಹೂವುಗಳು ನಾವು
ಸಂಪದ ಗೂಡಿನ ಜೇನುಗಳು ನಾವು
ಹರಿಯಲಿ ಬರಹದ ಸುಧೆ ಸದಾ ಸಂಪದದಲಿ.
ಹರಿಯಲಿ ಬರಹದ ಸುಧೆ ಸದಾ ಸಂಪದದಲಿ

Comments