ಗಾರಿಗಿ
ಸಾಮಗ್ರಿಗಳು
1 ಬಟ್ಟಲು ತುರಿದ ಸಿಹಿ ಕುಂಬಳಕಾಯಿ
1 ಬಟ್ಟಲು ಬೆಲ್ಲ
ಏಲಕ್ಕಿ ಪುಡಿ
ಎಣ್ಣೆ
ಗೋಧಿ ಹಿಟ್ಟು
ಗಸಗಸೆ
ಮಾಡುವ ವಿಧಾನ
ತುರಿದ ಕುಂಬಳಕಾಯಿಯಲ್ಲಿರುವ ನೀರನ್ನು ತೆಗೆಯಬೇಕು.
ಬಾಣಲೆಗೆ ನೀರು ತೆಗೆದಿರುವ ತುರಿದ ಕುಂಬಳಕಾಯಿ, ಬೆಲ್ಲವನ್ನು ಹಾಕಿ ಕುದಿಸಬೇಕು. ಇದನ್ನು ಚೆನ್ನಾಗಿ ಕುದಿಸಿ ಇದಕ್ಕೆ ಎಷ್ಟು ಬೇಕೊ ಅಷ್ಟು ಗೋಧಿ ಹಿಟ್ಟು, ಏಲಕ್ಕಿ ಪುಡಿ ಹಾಕಿ ಕಲಸಬೇಕು.( ಈ ಮಿಶ್ರಣ ವಡೆ ಹಿಟ್ಟಿ ಹದಕ್ಕೆ ಇರಬೇಕು)
ವಡೆ ತರಹ ತಟ್ಟಿ ಗಸಗಸೆಯಲ್ಲಿ ಹೊರಳಿಸಿ ಎಣ್ಣೆಯಲ್ಲಿ ಕರಿಯಬೇಕು.
Rating
Comments
ಉ: ಗಾರಿಗಿ