ಧನ್ಯವಾಗಲಿ, ಕನ್ನಡತನ
ಸಮಗ್ರ ಕರ್ನಾಟಕದ ಭಾಗಗಳನ್ನು ಅಧೀಕೃತವಾಗಿ ಪ್ರತ್ಯೇಕತಾ ಹೆಸರುಗಳಿಂದ ಕರೆಯುವ ಅಸಮಂಜಸ ಸಲಹೆಯೊಂದನ್ನು ಇತ್ತೀಚೆಗೆ ವಿದ್ವಾಂಸರೊಬ್ಬರು ಅಪ್ಪಣೆ ಕೊಡಿಸಿದ್ದಾರೆ. ಹೈದರಾಬಾದ್ ಕರ್ನಾಟಕವನ್ನು “ಕಲ್ಯಾಣ ಕರ್ನಾಟಕ”, ಮುಂಬೈ ಕರ್ನಾಟಕವನ್ನು “ಕಿತ್ತೂರು ಕರ್ನಾಟಕ” ಎಂದು ರಾಜಪತ್ರ ಪ್ರಕಟಣೆ ಹೊರಡಿಸಬೇಕಂತೆ! ಕಿತ್ತೂರ ರಾಣಿ, ಇಡೀ ಕರ್ನಾಟಕಕ್ಕೇ ಚಿರಂತನ ಸ್ಫೂರ್ತಿ ಮತ್ತು ಕಲ್ಯಾಣದ ಬಸವಣ್ಣ ಲೋಕಗುರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕರ್ನಾಟಕದ ಈ “ಹೆಮ್ಮೆ”ಗಳನ್ನು ಕ್ರಮವಾಗಿ ಬೆಳಗಾವಿ ಮತ್ತು ಬೀದರ್ ಜಿಲ್ಲೆಗಳನ್ನೊಳಗೊಂಡ ವಿಭಾಗಗಳಿಗೆ ಕಟ್ಟಿಹಾಕುವುದು ಎಷ್ಟುಮಾತ್ರಾ ವಿವೇಕ?
ಇಷ್ಟಕ್ಕೂ “ನಿಜಾಂ ಕರ್ನಾಟಕ”, “ಮುಂಬೈ ಕರ್ನಾಟಕ” ಎಂಬ ಹೆಸರುಗಳಾದರೋ ಬಂದಿರುವುದು ಹೇಗೆ? ಕುಬ್ಜನನ್ನು ಕುಳ್ಳ, ಕದಿಯುವವನನ್ನು ಕಳ್ಳ ಎಂದಂತೆ ರೂಢನಾಮವಾಗಿಯೇ ಹೊರತು ಹಾಗೆಂದು “ಅಂಕಿತ” ಮಾಡಲಾಗಿದೆಯೇ?
- Read more about ಧನ್ಯವಾಗಲಿ, ಕನ್ನಡತನ
- Log in or register to post comments