ದೀವಿಗೆಯ ಹಬ್ಬ
ಹಚ್ಚು ದೀಪದಿಂದ ದೀಪ
ದೂರವಾಗಲಿ ಮನದ ಹುಚ್ಚು ತಾಪ
ಕರಗಲಿ ಎಲ್ಲರ ಮನದ ಕೋಪ
ಬರುವನು ಧರೆಗಂದು ಬಲಿ ಭೂಪ
ಹೊಟ್ಟೆಗಾಗಿ ಕಾದಿದೆ ವಿವಿಧ ವ್ಯಂಜನ
ತಲೆಗಾಗಿ ತೈಲ ಅಭ್ಯಂಜನ
ಮನಕೆ ಕತ್ತಲ ತೊಡೆವ ದೀಪದ ರಂಜನ
ಜೀವನಕೆ ತತ್ವ ರಸ ಗಾಯನ
ಮನದ ಒಳಗಿನ ಕತ್ತಲ ಒಗೆದು
ಸ್ನೇಹದ ಬಂಧನ ಬಿಗಿದು
ಸಂತಸದ ಸಿಹಿಯನು ಸವಿದು
ಹರಸುವ ಎಲ್ಲರ ಪ್ರೀತಿಯ ಮೊಗೆದು
ಎಲ್ಲ ಸಂಪದ ಮಿತ್ರರಿಗೆ ದೀವಿಗೆಯ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.
ಈ ದೀಪಾವಳಿ ಎಲ್ಲರ ಮನೆ ಮನಗಳಿಗೆ ಸಂತೋಷ ಸಮೃದ್ಧಿ ತರಲಿ ಎಂದು ಹಾರೈಸುತ್ತೇನೆ
- Read more about ದೀವಿಗೆಯ ಹಬ್ಬ
- Log in or register to post comments