ನನ್ನ ಪ್ರೇಯಸಿಯ ಮದುವೆ
ನನ್ನ ಮುಂದೆ ಸಾಲಿನಲ್ಲಿ ಇನ್ನು ೧೮ ಜನರಿದ್ದರು. ಇದ್ದದ್ದು ಇನ್ನು ಕೇವಲ ಹತ್ತು ನಿಮಿಷ, ಟಿಕೆಟ್ ಸಿಗುವುದೋ ಇಲ್ಲವೋ ಎಂದು ಹಾಗೇ ಸಾಲಿನಲ್ಲಿ ಮುನ್ನುಗ್ಗುತ್ತಿದ್ದ ನನಗೆ ಕೊನೆಗೂ ಟಿಕೆಟ್ ಸಿಕ್ಕಿತು. ಓಡಿ ಹೋಗಿ ಆಗತಾನೇ ಹೊರಟಿದ್ದ ರೈಲನ್ನು ಹತ್ತಿದ ನನಗೆ, ಪಂದ್ಯದಲ್ಲಿ ಪದಕ ಗೆದ್ದಂತೆ ಭಾಸವಾಯಿತು. ಕೈಲಿದ್ದ ದಿನಪತ್ರಿಕೆಯನ್ನು ತಿರುವು ಹಾಕುತ್ತಾ ಇದ್ದಂತೆ, ತುಮಕೂರು ನಿಲ್ದಾಣ ಬಂದಾಗಿತ್ತು. ಅಲ್ಲಿ ಇಡ್ಲಿ ವಡೆ ರುಚಿ ನೋಡಿದ ನಾನು, ಪ್ರಯಾಣ ಮುಂದುವರೆಸುತ್ತ ಇದ್ದಂತೆಲ್ಲಾ ಬೇಜಾರಾಗುತ್ತಿತ್ತು. ಆಗ ರೈಲು ತಿಪಟೂರು ಬಿಟ್ಟು ಅರಸೀಕೆರೆಯತ್ತ ಮಂದಗತಿಯಲ್ಲಿ ಸಾಗಿತ್ತು.
- Read more about ನನ್ನ ಪ್ರೇಯಸಿಯ ಮದುವೆ
- 2 comments
- Log in or register to post comments