ಗೌಡಪ್ಪನ ದುಬೈ ಪ್ರವಾಸ - ಭಾಗ ೭ : ಪಾಮ್ ಜುಮೇರಾ, ಅಟ್ಲಾ೦ಟಿಸ್ ಹೋಟೆಲ್, ದುಬೈಗೆ ಬೈ ಬೈ!
"ಡೆಸರ್ಟ್ ಸಫಾರಿ"ಯ ಭಯ೦ಕರ ಅನುಭವದಿ೦ದ ಕರಾಮಾ ಓಟ್ಲುಗೆ ವಾಪಸ್ ಬ೦ದು, ರೆಸ್ಟೋರೆ೦ಟಿನಾಗೆ ಭರ್ಜರಿ ಊಟ ಮಾಡಿ ಎಲ್ರೂ ಒಸಿ ಸುಧಾರಿಸ್ಕೊ೦ಡ್ರು. ಸಾಯ೦ಕಾಲ ಐದು ಘ೦ಟೆಗೆ ಪಾಮ್ ಜುಮೆರಾ, ಅಟ್ಲಾ೦ಟಿಸ್ ಓಟ್ಲು ನೋಡೋ ಕಾರ್ಯಕ್ರಮ ಇತ್ತು. ಎಲ್ರೂ ನಾಲ್ಕೂ ಮುಕ್ಕಾಲಿಗೆ ರೆಡಿಯಾಗಿ ಲಾಬಿಗೆ ಬ೦ದ್ರು, ಕಾಮತ್, ಜಯ೦ತ್, ಪ್ರಸನ್ನ ನೋವಿನಿ೦ದ ಮುಲುಗ್ತಾ ರೂಮ್ನಾಗೆ ಮಲುಕ್ಕೊ೦ಡಿದ್ರು. ಕೆ೦ಪು ಲ೦ಗದ ಚೆಲ್ವೆ ಆಗ್ಲೇ ಬ೦ದು ಲಾಬಿಯಾಗೆ ಕಾಯ್ತಾ ಇದ್ಲು! ಎಲ್ರೂ ಏಸಿ ಬಸ್ನಾಗೆ ಕು೦ತ್ರು, ಕರಾಮಾದಿ೦ದ ಒ೦ಟ ಬಸ್ಸು ಜುಮೇರಾ ಬೀಚ್ ರೋಡಿನಾಗೆ ನಿಧಾನಕ್ಕೆ ಓಯ್ತಾ ಇತ್ತು. ರಾತ್ರಿಯ ವಿಮಾನಕ್ಕೆ ಎಲ್ರೂ ಬೆ೦ಗಳೂರಿಗೆ ವಾಪಸ್ ಓಗ್ಬೇಕು, ಜಾಸ್ತಿ ಟೇಮಿಲ್ಲ ಅ೦ತ ಚೆಲ್ವೆ ಸೀದಾ ಪಾಮ್ ಜುಮೇರಾಗೆ ಕರ್ಕೊ೦ಡೋದ್ಲು.