ನಿನಗೆ ವಯಸ್ಸಾದಾಗ
ಯಾವಾಗ ನಿನಗೆ ವಯಸ್ಸಾಗುವುದೋ!;
ತಲೆಗೂದಲು ನೆರೆಯುವುದೋ!;
ನಿದ್ದೆ ಎಡನಿಡದೇ ಕಾಡುವುದೋ!;
ಎಲ್ಲಕ್ಕೂ ನಿನಗೆ ಒಪ್ಪಿಗೆ ಇದ್ದಲ್ಲಿ ಈ ಪುಸ್ತಕ ತೆಗೆದು ಕೋ;
ನಿನ್ನ ಕಂಗಳಲ್ಲಿ ಒಮ್ಮೆ ಹಿಂದಿನದೆಲ್ಲವನ್ನೂ ನೆನಪಿಸಿ ಕೋ;
ಈ ಪುಸ್ತಕದ ಒಳಹೊಕ್ಕು ನೋಡು;
ಎಷ್ಟು ಅಹ್ಲಾದಕರ ಸನ್ನಿವೇಶಗಳು ಬಂದವು, ಹೋದವು;
ನಿನ್ನ ಪ್ರೀತಿಸಿದರು ಅಥವಾ ದ್ವೇಷಿಸಿದರು
ದೇಹ ಹಾಗು ಮನಸ್ಸಿನ ಸುಂದರತೆಗೆ ಸೋತು;
ಆದರೆ ಒಬ್ಬ ಮಾತ್ರ ಎಡಬಿಡದೆ ನಿನ್ನ ಪ್ರೀತಿಸಿದ
ಅದೇ ನಿನ್ನಯ ಪವಿತ್ರ ಯಾತ್ರಿಕ ಆತ್ಮ;
ಬದಲಾದ ನಿನ್ನಯ ಚರ್ಯಯ ಕಣ್ಣೀರಿನ ವ್ಯಥೆಗೆ
ಮರುಗಿ ನಿನ್ನನ್ನು ಪ್ರೀತಿಸಿದವನು;
ನಿನ್ನ ಎಲ್ಲಾ ಸನ್ನಿವೇಶಗಳಿಗೂ ನಿನ್ನೊಡನಿದ್ದು ಬಾಗಿ
ನಡೆದು ಜೊತೆಯದವನು;
ನಿನ್ನ ನೋವಿನ ನರಳಾಟಕ್ಕೆ ಎಷ್ಟು ಪ್ರೀತಿಧಾರೆ ಹರಿಯಿತು;
ಬಾನಿನೆತ್ತರಕ್ಕೆ ಹಿಮಾಲಯ ಪರ್ವತ ದಾಟಿ
ನಿನ್ನ ಮುಖವನ್ನು ತಾರೆಗಳ ಮಧ್ಯದಲ್ಲಿ ಹುದುಗಿಸಿದವನು;
ನೀನು ಮಾತ್ರ ಬಲ್ಲೆ
ಎಲ್ಲವೂ ಕನಸಿನಂತೆ ಕರಗುತಿದೆ
ನಿನಗೆ ವಯಸ್ಸಾಗುತ್ತಿದೆ
ಕಡೆಯ ಕರೆ ಅವನಿಂದ ಬರುವುದ ನೀ ಕಾಯುತ್ತಿರುವೆ ಮೌನವಾಗಿ;
ಪ್ರೇರಣೆ:"When you are old" by William Butler Yeats.