ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವರ - Worry

ವೆಂಕಜ್ಜಿ ಗಟ್ಟಿಯಾದ ನಿರ್ಧಾರದ ದನಿಯಲ್ಲಿ ತಮ್ಮ ಅಂತಿಮ ನಿರ್ಧಾರ ಪ್ರಕಟಿಸಿಯೇ ಬಿಟ್ಟರು ’ನೋಡೋ ರಾಮೂ. ನಿನ್ನ ಮಗಳು ಆ ಡಬ್ಬದ ಎಂಜಿಲ್ನ್ನೀರೇ ಆಗಿರಬಹುದು. ಕೈ ತುಂಬಾ ಸಂಪಾದನೇನೇ ಮಾಡಬಹುದು. ಆದರೆ ಹೊಟ್ಟೇಪಾಡೇ ಬೇರೆ, ಶಾಸ್ತ್ರ ಸಂಪ್ರದಾಯಾನೇ ಬೇರೆ. ನಾನು ನಿಮ್ಮ ಮನೆಯಲ್ಲೇ ಇರಬೇಕೂ ಅಂದರೆ ಈ ವಿಷಯದಲ್ಲಿ ನಾನ್ ಹೇಳಿದ ಹಾಗೆ ಕೇಳು. ಇಲ್ಲಾ ಅಂದರೇ ಗೋಪಾಲನ ಮನೆಗೆ ಹೊರಟು ಹೋಗ್ತೀನಿ’.

ನಾ ನಡೆವ ದಾರಿಯಲಿ ಮುಳ್ಳಿರಲಿ, ವೇದನೆಯ ಸಿಹಿ ಅರಿಯ ಬೇಕಿದೆ

ನಾ ನಡೆವ ದಾರಿಯಲಿ ಮುಳ್ಳಿರಲಿ, ವೇದನೆಯ ಸಿಹಿ ಅರಿಯ ಬೇಕಿದೆ
ನನ್ನ ನಗುವಲಿ ಒಂದು ಸುಳ್ಳಿರಲಿ, ಸಂತಸದ ಕಹಿಯ ಸವೆಯ ಬೇಕಿದೆ.
ಕೊನೆ ಇರದ ಮಾತು ನಾನಾಡಬೇಕಿದೆ, ಮೌನದ ನಡುವಿನ ದನಿಯ ಕೇಳಲು
ಅಂಬೆಗಾಲಿನ ಆಟಕ್ಕೆ ಮನಸೋಲಬೇಕಿದೆ, ಯೌವನದ ಹುರುಪಿಗೆ ಹಾತೊರೆಯಲು...

ಕಣ್ಣಿನ ನೋಟದಲಿ ಬರಿಯ ಅಂದಕಾರವಿರಲಿ, ಒಂದೇ ಬಣ್ಣದಿ ಲೋಕವ ನೋಡಲು
ದಾಹ ದ ದಾಹ ಅರಿಯಬೇಕಿದೆ, ಮರುಭೂಮಿಲಿ ಒರತೆ ಹುಡುಕಲು
ತಂಪಿನ ಸಿಂಚನ ಆಗಬೇಕಿದೆ, ನೀರು ಬತ್ತಿರುವದೇಹದಿ ಕಡು ಬೆಸಿಗೆಯೋಳು
ಇಂಪಿನ ಪರಿವಾಗಲಿ,ಬರಿಯ ಪ್ರತಿದ್ವನಿ ಆಲಿಸಲು


ಮನದಲಿ ಸಿರಿತನವಿರಲಿ, ಮನೆಯೊಳು ಬಡತನವಿರಲು

ಕೆಲವು ಚುಟುಕುಗಳು ಮತ್ತೊಮ್ಮೆ !!

ತುಂಬಾ ದಿನದಿಂದ ಬರೆದು, ಅಳಿಸಿ 

ಹೊರಬರುತ್ತಿದ್ದೇನೆ ಸಂಪದ .

ಬರೆದದ್ದ್ಯಾವುದೂ ಹಿತ ಅನ್ನಿಸಲಿಲ್ಲ,

ಎಲ್ಲೋ ಮಿಸ್ಸಿಂಗ್ 'some' ಪದ !

 

ಮನೆ ತುಂಬಿ ಮನತುಂಬಿ ಖುಷಿ ಪಟ್ಟಿದ್ದೆ,

ಆಹಾ!ಒಳ್ಳೆ ಹೆಸರು , ಗಾಯತ್ರಿ .

ಬೆಳ್ಳಗೆ ಇರೋದೆಲ್ಲ ಹಾಲಲ್ಲ ,

ಈಗ ಮೈ ತುಂಬಾ ಗಾಯಯ್ತ್ರಿ!  

 

ಉನ್ನತ ವ್ಯಾಸಂಗಕ್ಕೆ ದೇಶ ಬಿಟ್ಟ

ಹರೀಶ ಕೃಷ್ಣ

ಕಾದಿದ್ದೇ ಬಂತು, ಬರಲೇ ಇಲ್ಲ ಅಲ್ಲಿಂದ,

ಕ್ರಿಸ್ ಹ್ಯಾರಿಸ್ !!

ವಿಶೇಷ ದೀಪಾವಳಿ ಫ್ರಮ್ ಗೌಡಪ್ಪ

ಬೆಳಗ್ಗೆನೇ ಗೌಡಪ್ಪ ತಲೆ ಮೇಲೆ ಟವಲ್ ಹಾಕಂಡು ಹೊರಗೆ ಬಂದು ನೋಡ್ತಾನೆ. ಮನೆ ಮುಂದೆ ಸಾನೇ ಸಗಣಿ ಅದರ ಮ್ಯಾಕೆ ಚೆಂಡು ಹೂವು. ಗೌಡ ತಕ್ಷಣನೇ ಅವನ ಹೆಂಡರು ಬಸಮ್ಮನ್ನ ಕರೆದು, ಏನಮ್ಮಿ ಇದು, ಹಸಾನ ಕೊಟ್ಟಿಗೇಲಿ ಕಟ್ಟಲಿಲ್ವಾ ಅಂದ. ಯಾಕ್ರೀಈಈ, ಇಲ್ಲೇ ಸಗಣಿ ಹಾಕೈತೆ. ಏ ಇವತ್ತು ದೀಪಾವಳಿ ಅದಕ್ಕೆ ಸಗಣಿಗೆ ಇಟ್ಟು ಪಾಂಡವರ ಪೂಜೆ ಮಾಡಿದೀನಿ ಅಂತು ಗೌಡನ ಹೆಂಡರು ಬಸವಿ. ಹಿಂಗಾದ್ರೆ ಪಾಂಡವರು ಬರಕ್ಕಿಲ್ಲಾ. ಸೊಳ್ಳೆ ಕೂತು ಚಿಕನ್ ಗುನ್ಯಾ ಬತ್ತದೆ ಅಂದ ಗೌಡಪ್ಪ. ಬಸಮ್ಮ ಹೆಂಗೆ ಪೂಜೆ ಮಾಡಿದ್ಲು ಅಂದ್ರೆ ಒಂದೊಂದು ಸಗಣಿ ಗುಪ್ಪೆ ಸಣ್ಣ ಗುಡ್ಡ ಕಂಡಂಗೆ ಕಾಣೋದು. ಏನಾದ್ರೂ ತುಳಿದ್ರೆ. ಒಂದು ಬಕ್ಕಿಟ್ಟು ನೀರು ಬೇಕು, ತೊಳೆಯೋಕ್ಕೆ. ಇನ್ನೂ ಪಕ್ಕದ ಮನೆಯಿಂದ ಸಗಣಿ ಇನ್ನೂ ತರ್ತಾನೆ ಇದ್ಲು. ಯಾಕಮ್ಮಿ ನಮ್ಮ ಮನೆ ಸಗಣಿ ಖಾಲಿ ಆಯ್ತಾ.

ನಾ ನಡೆವ ದಾರಿಯಲಿ ಮುಳ್ಳಿರಲಿ, ವೇದನೆಯ ಸಿಹಿ ಅರಿಯ ಬೇಕಿದೆ

ನಾ ನಡೆವ ದಾರಿಯಲಿ ಮುಳ್ಳಿರಲಿ, ವೇದನೆಯ ಸಿಹಿ ಅರಿಯ ಬೇಕಿದೆ
ನನ್ನ ನಗುವಲಿ ಒಂದು ಸುಳ್ಳಿರಲಿ, ಸಂತಸದ ಕಹಿಯ ಸವೆಯ ಬೇಕಿದೆ.
ಕೊನೆ ಇರದ ಮಾತು ನಾನಾಡಬೇಕಿದೆ, ಮೌನದ ನಡುವಿನ ದನಿಯ ಕೇಳಲು
ಅಂಬೆಗಾಲಿನ ಆಟಕ್ಕೆ ಮನಸೋಲಬೇಕಿದೆ, ಯೌವನದ ಹುರುಪಿಗೆ ಹಾತೊರೆಯಲು...

ಕಣ್ಣಿನ ನೋಟದಲಿ ಬರಿಯ ಅಂದಕಾರವಿರಲಿ, ಒಂದೇ ಬಣ್ಣದಿ ಲೋಕವ ನೋಡಲು
ದಾಹ ದ ದಾಹ ಅರಿಯಬೇಕಿದೆ, ಮರುಭೂಮಿಲಿ ಒರತೆ ಹುಡುಕಲು
ತಂಪಿನ ಸಿಂಚನ ಆಗಬೇಕಿದೆ, ನೀರು ಬತ್ತಿರುವದೇಹದಿ ಕಡು ಬೆಸಿಗೆಯೋಳು
ಇಂಪಿನ ಪರಿವಾಗಲಿ,ಬರಿಯ ಪ್ರತಿದ್ವನಿ ಆಲಿಸಲು


ಮನದಲಿ ಸಿರಿತನವಿರಲಿ, ಮನೆಯೊಳು ಬಡತನವಿರಲು
ಸಡಗರದ ಆಚರಣೆ ಇರಲಿ, ಕಂಬನಿಯ ತೇರನೆಳೆಯಲು

ಕೆಮಿಸ್ಟ್ರಿ

ಲೀಕಾದ ಬ್ಯುರೆಟ್ಟುಗಳು ಕೆಳಗೆ ಬಿದ್ದು ಒಡೆದ ಪಿಪೆಟ್ಟುಗಳು
ಫ್ಲೇಮು ಹೆಚ್ಚಾಗಿ ಬೆಂಕಿ ಹತ್ತಿ ಉರಿದ ಆರ್ಗ್ಯಾನಿಕ್ ಆಸಿಡ್ಡುಗಳು

ಪಿಪೆಟ್ಟುಗಳಿಗೆ ಸ್ಪರ್ಧೆ ಕೊಟ್ಟು ಗೆದ್ದ ಒಡೆದ ಟೆಸ್ಟು ಟ್ಯೂಬುಗಳು
ನಾಸಿಯಾ ತರೋ ಯಾವ ಯಾವುದೋ ಲಿಕ್ವಿಡುಗಳು, ಗ್ಯಾಸುಗಳು

ಕಾನ್ಸಂಟ್ರೇಡೆಡ್ ಹೆಸರಿನ ಆಸಿಡ್ ಕೂಡ ಡೈಲ್ಯೂಟ್ ರೂಪ ಪಡೆದಿತ್ತು
ಸಿಟ್ಟಾದರೆ ಎಸೆದೇವು ಎಂಬ ಭಯಕ್ಕೆ ಮರೆಯಾಗಿದ್ದು ನಮಗೆ ಗೊತ್ತು

ಪ್ರಾಕ್ಟಿಕಲ್ ಬುಕ್ಕಿನ ಪೇಜು ಹರಿಯಲು ಕಾರಣವಾದ ಮರೆತು ಹೋದ ಯುನಿಟ್ಟು
ಒಂದರೆಗಳಿಗೆ ಲೇಟಾದರೆ ನಡೆಯುತ್ತಿತ್ತು ವಿಚಾರಣೆ, ಸಮಯ ಕಟ್ಟುನಿಟ್ಟು

ಏನಾದರೂ ಸದ್ದಾದರೆ ’ನೋಡಿ ಇವರೇ’ ಎಂಬಿಂದ ಶುರುವಾಗುವ ಅಧಿಕಾರವಾಣಿ

ಹಚ್ಚೇವು ಕನ್ನಡದ ದೀಪ

ಸಂಪದಕ್ಕೇನಾಯಿತು? ಎಂದು ಎಲ್ಲರೂ ಕೇಳುವವರೆ. ಕಳೆದ ವಾರ 'ಸಂಪದ'ಕ್ಕೆ ರಾಲರ್ ಕೋಸ್ಟರ್ ರೈಡು. ಸರ್ವರಿನಲ್ಲಿ ಹೊಸ ಬ್ಯಾಕಪ್ ಸವಲತ್ತು ಮತ್ತೊಂದು ಇನ್ನೊಂದು ಎನ್ನುತ್ತ ಸಂಪದ ವಾರದ ನಡುವೆ ಒಂದು ದಿನ ಕೆಲ ಗಂಟೆಗಳ ಕಾಲ ಲಭ್ಯವಿರಲಿಲ್ಲ. ಶನಿವಾರ ಸರ್ವರ್ ಈಗಿರುವ ಕೆನಡಾದ ಡೇಟ ಸೆಂಟರಿನಲ್ಲಿ ಕರೆಂಟು ಸಪ್ಲೈ ಎಡವಟ್ಟಾಗಿ ಸುಮಾರು ಹೊತ್ತು ಲಭ್ಯವಾಗದೇ ಹೋಯಿತು.

 

ಸಂಪದ ಪ್ರಾರಂಭವಾಗಿ ಈಗಾಗಲೇ ಐದು ವರ್ಷಗಳೇ ಆಗಿಹೋದುವು! ಎಷ್ಟು ಬೇಗ ಕಳೆದು ಹೋಗುತ್ತದೆ ಸಮಯ! ಸಂಪದ ಪ್ರಾರಂಭಿಸಿದ ಹಂತದಲ್ಲಿ ನನ್ನ ಜೊತೆ ನೀಡಿದ ನನ್ನ ಸ್ನೇಹಿತರೊಬ್ಬರೊಂದಿಗೆ ಕೆಲವು ವಾರಗಳ ಹಿಂದೆ ಮಾತನಾಡುತ್ತಿದ್ದೆ - "ಅಲ್ರೀ, ಐದು ವರ್ಷ ಹೇಗೆ ನಡೆಸಿಕೊಂಡು ಬಂದೆವು ಅನ್ನೋದೇ ಆಶ್ಚರ್ಯದ ವಿಷಯ ಅಲ್ವ?" ಎಂದರು. ನಿಜ, ಕನ್ನಡ ಓದು ಬರಹದ ಹವ್ಯಾಸದಿಂದ ಏನೋ ಮಾಡಲು ಹೋಗಿ ಆ ಸಮಯ ಕೇವಲ ಆಕಸ್ಮಿಕವಾಗಿ ಸೃಷ್ಟಿಯಾದ ಈ ಸಮುದಾಯ ತಾಣ ಈಗ ಬಹು ವಿಸ್ತಾರದ ಕನ್ನಡಿಗರ ಸಮುದಾಯವಾಗಿ ಬೆಳೆದಿದೆ. ಬೆಳೆಯುತ್ತ ಬೆಳೆಯುತ್ತ ಕ್ರಮೇಣ ಇದನ್ನು ಪ್ರಾರಂಭಿಸಿ, ನಡೆಸಿಕೊಂಡು ಬಂದ ನನಗೆ ಅಡಿಗಡಿಗೆ ಹೊಸತಾದ ಗಂಭೀರ ಸವಾಲುಗಳನ್ನು ಒಡ್ಡುತ್ತ ಬಂದಿದೆ.

 

ಎರಡು ತಿಂಗಳ ಹಿಂದೆ ನನ್ನ ಮುಂದಿದ್ದದ್ದು ಇಂತಹುದೇ ಒಂದು ಸವಾಲು. ಸಮುದಾಯ ವಿಪರೀತ ವೇಗದಲ್ಲಿ ಬೆಳೆಯುತ್ತಲಿತ್ತು, ಆದರೆ ಇಲ್ಲಿರುವ ತಂತ್ರಾಂಶ ಈ ಬೆಳವಣಿಗೆಯನ್ನು ಹೊತ್ತೊಯ್ಯುವಷ್ಟು ಸಮರ್ಥವಾಗಿರಲಿಲ್ಲ. ಸಾಲದ್ದಕ್ಕೆ ಸಮುದಾಯದಲ್ಲಿ ಪ್ರಕಟವಾಗುತ್ತಿರುವ ಪುಟಗಳ ಮಾಡರೇಶನ್ ಮತ್ತೊಂದು ಸವಾಲು ತಂದೊಡ್ಡಿತು. ಆಗ ಮುಂಚಿನಂತೆ ಇದನ್ನೆಲ್ಲ ಸ್ವತಃ  ತಲೆಗೆ ಹಾಕಿಕೊಂಡು ಕೆಲಸ ಮಾಡುವ ಪರಿಸ್ಥಿತಿಯಲ್ಲಿ ನಾನಿರಲಿಲ್ಲ. ಕೆಲಸದ ಭಾರ ಹೆಚ್ಚಿತ್ತು. ಈ ಕೆಲಸ ನಾನೇ ಮಾಡುತ್ತೇನೆಂದು ಕುಳಿತೆನೆಂದರೆ ಇನ್ನು ಆಗುವುದಿಲ್ಲ ಎಂದು ಆಫೀಸಿನಲ್ಲಿ ನನ್ನೊಡಗೂಡಿ ಕೆಲಸ ಮಾಡುತ್ತಿರುವ ಇಬ್ಬರು ಸಹತಂತ್ರಜ್ಞರಿಗೆ ಇದರ ಕೆಲಸ ಒಪ್ಪಿಸಿದೆ. ಅಚ್ಚರಿಯ ವಿಷಯವೆಂದರೆ ಇಬ್ಬರೂ ಕನ್ನಡಿಗರಲ್ಲ! ಇಬ್ಬರೂ ತಮ್ಮ ಬಿಡುವಿನ ಸಮಯದಲ್ಲಿ ಶ್ರಮ ಪಟ್ಟು ಸಂಪದಕ್ಕೆ ಹೊಸ ರೂಪ ತರುವ ನನ್ನ ಕನಸನ್ನು ತಾವೂ ಗ್ರಹಿಸುವ ಶತಪ್ರಯತ್ನ ಮಾಡುತ್ತ ಇಲ್ಲಿನ ಒಂದಷ್ಟು ಕೆಲಸ ಪೂರ್ಣಗೊಳಿಸಿದ್ದಾರೆ.

 

ಇನ್ನೂ ಕೆಲಸ ಮುಂದುವರೆದಿದೆ. ಬರುವ ದಿನಗಳಲ್ಲಿ ಸಂಪದದಲ್ಲಿ ಹಂತ-ಹಂತಗಳಲ್ಲಿ ಕೆಲವು ಬದಲಾವಣೆಗಳಾಗಲಿವೆ. ಈ ಸಮಯ 'ಕೆಲಸ ಮಾಡುತ್ತಿಲ್ಲದ' ಫೀಚರುಗಳ ಕುರಿತು ಇಲ್ಲೇ ಚರ್ಚೆ ಮಾಡುವುದಕ್ಕಿಂತ mail@sampada.netಗೆ ಒಂದು ಇ-ಮೇಯ್ಲ್ ಕಳುಹಿಸುವುದು ಉತ್ತಮ. ಆದರೆ ಈಗಲೂ ನಿತ್ಯ ಬರುತ್ತಿರುವ ಹತ್ತಾರು ಇ-ಪತ್ರಗಳನ್ನು ನೋಡಿ ಉತ್ತರಿಸಲು ಯಾರೂ ಇಲ್ಲದ ಕಾರಣ ಉತ್ತರ ತಲುಪದಿದ್ದಲ್ಲಿ ಅರ್ಥ ಮಾಡಿಕೊಳ್ಳುವಿರಿ ಎಂದು ತಿಳಿದುಕೊಳ್ಳುತ್ತೇನೆ. ಬದಲಾವಣೆಗಳನ್ನು ಸಾವಧಾನದಿಂದ, ಪ್ರೀತಿಯಿಂದ ಹಾಗೂ ಒಂದಷ್ಟು ಲಿಬರಲ್ ಆಗಿ ಸ್ವೀಕರಿಸುವಿರೆಂಬ ವಿಶ್ವಾಸ ನನಗಿದೆ.


ಖುದಾಹಾಫೆಸ್ ಹೇಳುವ ಮುನ್ನ:

  • ಸಂಪದದ ಅಧಿಕೃತ ಪುಟ ಈಗ ಫೇಸ್ ಬುಕ್ಕಿನಲ್ಲಿ ಲಭ್ಯವಿದೆ. ನೀವೂ ಫೇಸ್ ಬುಕ್ಕಿನಲ್ಲಿದ್ದಲ್ಲಿ ಈ ಪುಟಕ್ಕೆ ತೆರಳಿ 'like' ಬಟನ್ ಕ್ಲಿಕ್ ಮಾಡುವ ಮೂಲಕ ಸಂಪದ ಕುರಿತ ಅಪ್ಡೇಟುಗಳನ್ನು ನಿಮ್ಮ ಫೇಸ್ ಬುಕ್ ಅಕೌಂಟಿನಲ್ಲಿ ಓದಬಹುದು.
  • ಸಂಪದದ ಹೊಸ ರೂಪ ತರುವ ಪ್ರಯತ್ನದಲ್ಲಿ ನೀವೂ ಭಾಗಿಯಾಗಬಹುದು! ಆಸಕ್ತ ಸ್ವಯಂ ಸೇವಕರ ನೆರವಿನ ಅಗತ್ಯವಿದೆ. ಆಸಕ್ತರು mail@sampada.net ಗೆ ಇ-ಪತ್ರ ಕಳುಹಿಸಿ.

ಈ ದೀಪಾವಳಿ ಒಬ್ಬ ಜ್ಞಾನವೃದ್ಧರೊಡನೆ ಭೇಟಿ

ನಾನು ಈ ದೀಪಾವಳಿಯಲ್ಲಿ  ಒಂದು  ಅಳಿಯತನಕ್ಕೆ  ಆಹ್ವಾನಿತನಾಗಿ   ಹೋಗಿದ್ದೆ !!  

ತುಂಬ ಚೆನ್ನಾಗಿತ್ತು  , ಎಂಜಾಯ್ ಮಾಡಿದೆ.