ನಾ ನಡೆವ ದಾರಿಯಲಿ ಮುಳ್ಳಿರಲಿ, ವೇದನೆಯ ಸಿಹಿ ಅರಿಯ ಬೇಕಿದೆ
ಕವನ
ನಾ ನಡೆವ ದಾರಿಯಲಿ ಮುಳ್ಳಿರಲಿ, ವೇದನೆಯ ಸಿಹಿ ಅರಿಯ ಬೇಕಿದೆ
ನನ್ನ ನಗುವಲಿ ಒಂದು ಸುಳ್ಳಿರಲಿ, ಸಂತಸದ ಕಹಿಯ ಸವೆಯ ಬೇಕಿದೆ.
ಕೊನೆ ಇರದ ಮಾತು ನಾನಾಡಬೇಕಿದೆ, ಮೌನದ ನಡುವಿನ ದನಿಯ ಕೇಳಲು
ಅಂಬೆಗಾಲಿನ ಆಟಕ್ಕೆ ಮನಸೋಲಬೇಕಿದೆ, ಯೌವನದ ಹುರುಪಿಗೆ ಹಾತೊರೆಯಲು...
ಕಣ್ಣಿನ ನೋಟದಲಿ ಬರಿಯ ಅಂದಕಾರವಿರಲಿ, ಒಂದೇ ಬಣ್ಣದಿ ಲೋಕವ ನೋಡಲು
ದಾಹ ದ ದಾಹ ಅರಿಯಬೇಕಿದೆ, ಮರುಭೂಮಿಲಿ ಒರತೆ ಹುಡುಕಲು
ತಂಪಿನ ಸಿಂಚನ ಆಗಬೇಕಿದೆ, ನೀರು ಬತ್ತಿರುವದೇಹದಿ ಕಡು ಬೆಸಿಗೆಯೋಳು
ಇಂಪಿನ ಪರಿವಾಗಲಿ,ಬರಿಯ ಪ್ರತಿದ್ವನಿ ಆಲಿಸಲು
ಮನದಲಿ ಸಿರಿತನವಿರಲಿ, ಮನೆಯೊಳು ಬಡತನವಿರಲು
ಸಡಗರದ ಆಚರಣೆ ಇರಲಿ, ಕಂಬನಿಯ ತೇರನೆಳೆಯಲು
ಉಸಿರೇ ನಿಂತು ಶುರುವಾಗಲಿ , ಹೆಚ್ಚು ಬದುಕುವ ಬಯಕೆಗೆ
ಕಂಪಿಗೆ ಮನಸೋಲಲಿ,ಒಣ ಹೂವ ಮಾಲೆ ಕತ್ತಲಿರಲು
ಕಾಮತ್ ಕುಂಬ್ಳೆ
Comments
ಉ: ನಾ ನಡೆವ ದಾರಿಯಲಿ ಮುಳ್ಳಿರಲಿ, ವೇದನೆಯ ಸಿಹಿ ಅರಿಯ ಬೇಕಿದೆ
In reply to ಉ: ನಾ ನಡೆವ ದಾರಿಯಲಿ ಮುಳ್ಳಿರಲಿ, ವೇದನೆಯ ಸಿಹಿ ಅರಿಯ ಬೇಕಿದೆ by gopinatha
ಉ: ನಾ ನಡೆವ ದಾರಿಯಲಿ ಮುಳ್ಳಿರಲಿ, ವೇದನೆಯ ಸಿಹಿ ಅರಿಯ ಬೇಕಿದೆ