ಕೆಮಿಸ್ಟ್ರಿ
ಲೀಕಾದ ಬ್ಯುರೆಟ್ಟುಗಳು ಕೆಳಗೆ ಬಿದ್ದು ಒಡೆದ ಪಿಪೆಟ್ಟುಗಳು
ಫ್ಲೇಮು ಹೆಚ್ಚಾಗಿ ಬೆಂಕಿ ಹತ್ತಿ ಉರಿದ ಆರ್ಗ್ಯಾನಿಕ್ ಆಸಿಡ್ಡುಗಳು
ಪಿಪೆಟ್ಟುಗಳಿಗೆ ಸ್ಪರ್ಧೆ ಕೊಟ್ಟು ಗೆದ್ದ ಒಡೆದ ಟೆಸ್ಟು ಟ್ಯೂಬುಗಳು
ನಾಸಿಯಾ ತರೋ ಯಾವ ಯಾವುದೋ ಲಿಕ್ವಿಡುಗಳು, ಗ್ಯಾಸುಗಳು
ಕಾನ್ಸಂಟ್ರೇಡೆಡ್ ಹೆಸರಿನ ಆಸಿಡ್ ಕೂಡ ಡೈಲ್ಯೂಟ್ ರೂಪ ಪಡೆದಿತ್ತು
ಸಿಟ್ಟಾದರೆ ಎಸೆದೇವು ಎಂಬ ಭಯಕ್ಕೆ ಮರೆಯಾಗಿದ್ದು ನಮಗೆ ಗೊತ್ತು
ಪ್ರಾಕ್ಟಿಕಲ್ ಬುಕ್ಕಿನ ಪೇಜು ಹರಿಯಲು ಕಾರಣವಾದ ಮರೆತು ಹೋದ ಯುನಿಟ್ಟು
ಒಂದರೆಗಳಿಗೆ ಲೇಟಾದರೆ ನಡೆಯುತ್ತಿತ್ತು ವಿಚಾರಣೆ, ಸಮಯ ಕಟ್ಟುನಿಟ್ಟು
ಏನಾದರೂ ಸದ್ದಾದರೆ ’ನೋಡಿ ಇವರೇ’ ಎಂಬಿಂದ ಶುರುವಾಗುವ ಅಧಿಕಾರವಾಣಿ
ಕಳ್ಳರ ಮನೆಯಲ್ಲಿ ಕಳ್ಳತನ ಮಾಡಬಾರದೆಂಬ ಉಪದೇಶವಾಣಿ
ಫಾರ್ಮುಲಾ ಜೊತೆಗೆ ಉರು ಹೊಡೆದು ಕಲಿತಿದ್ದ ಡೆಫಿನಿಶನ್ನುಗಳು
ಆದರೂ ಮರೆತು ’ನೀವು ಉದ್ಧಾರ ಆಗಲ್ಲ ಬಿಡಿ’ ಎಂದು ಕೇಳಿದ್ದು ಬರೀ ನೆನಪುಗಳು
ಅರ್ಥವಾಗದ ಫಾರ್ಮುಲಾಗಳಷ್ಟೇ ಅರ್ಥವಾಗದ್ದು ಲ್ಯಾಬ್ ಎಂಬ ಸೆರೆಮನೆ
ಪ್ರಮಾಣ ಹೊಂದಿಸಲು ಹೆಣಗಾಡಿ ಪಿಪೆಟ್ಟು ಸ್ಟ್ರಾ ಆಗಿದ್ದು ಮರೆವೆನೆ
ಇದೆಲ್ಲದರ ನಡುವೆಯೂ ಓದಿನ ಬಿಸಿಯಲ್ಲಿ ಯಾರಿಗೂ ಅರ್ಥವಾಗದ ಮಿಸ್ಟರಿ
ನನ್ನ ನಿನ್ನ ನಡುವೆ ಇದ್ದ ಪ್ರೀತಿ, ಅದಕ್ಕೇ ಇಷ್ಟ ನೋಡು ಕೆಮಿಸ್ಟ್ರಿ
Comments
ಉ: ಕೆಮಿಸ್ಟ್ರಿ
ಉ: ಕೆಮಿಸ್ಟ್ರಿ
In reply to ಉ: ಕೆಮಿಸ್ಟ್ರಿ by spruhi
ಉ: ಕೆಮಿಸ್ಟ್ರಿ
In reply to ಉ: ಕೆಮಿಸ್ಟ್ರಿ by spruhi
ಉ: ಕೆಮಿಸ್ಟ್ರಿ
In reply to ಉ: ಕೆಮಿಸ್ಟ್ರಿ by gopinatha
ಉ: ಕೆಮಿಸ್ಟ್ರಿ
ಉ: ಕೆಮಿಸ್ಟ್ರಿ
In reply to ಉ: ಕೆಮಿಸ್ಟ್ರಿ by gopaljsr
ಉ: ಕೆಮಿಸ್ಟ್ರಿ
ಉ: ಕೆಮಿಸ್ಟ್ರಿ
In reply to ಉ: ಕೆಮಿಸ್ಟ್ರಿ by sgangoor
ಉ: ಕೆಮಿಸ್ಟ್ರಿ