ನಂಬುವುದೆಂದರೆ ವಂಚಿಸುವ ಅವರ ಸಾಮರ್ಥ್ಯವನ್ನು ಕಡೆಗಣಿಸಿದಂತೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೬

ನಂಬುವುದೆಂದರೆ ವಂಚಿಸುವ ಅವರ ಸಾಮರ್ಥ್ಯವನ್ನು ಕಡೆಗಣಿಸಿದಂತೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೬

(೨೮೬) ಬೇಸರಿಕೆಃ ಅತ್ಯಂತ ಕುತೂಹಲಕಾರಿಯಾದ ಸಿನೆಮವನ್ನು ಮತ್ತೆ ಮತ್ತೆ, ಅನವರತವಾಗಿ ವೀಕ್ಷಿಸುವುದು.


(೨೮೭) ಯೌವ್ವನವು ಮುದಿತನಕ್ಕೆ ದಾರಿಯಲ್ಲ, ಬದಲಿಗೆ ಅದರ ಆರಂಭಿಕ ಹಂತವಷ್ಟೇ! ಹೀಗಿದ್ದರೂ ಎಲ್ಲ ವಯಸ್ಕರೂ ತಮ್ಮ ಯೌವ್ವನಾವಸ್ಥೆಯ ’ಮಾಗಿದ’ ಮಾದರಿಗಳೇನಲ್ಲ!


(೨೮೮) ಕೋಟಿಗಟ್ಟಲೆ ಜನರಿದ್ದರೂ, ಎಲ್ಲರೂ ಮೊದಲೇ ಪರಿಹಾರ ಕಂಡಿರುವುದನ್ನೇ ನಿರಂತರವಾಗಿ ಹುಡುಕುತ್ತಿರುತ್ತಾರೆಃ ಯಾವುದೇ ತೆರನಾದ ನಿರ್ದಿಷ್ಟ ಉತ್ತರವೂ ಸಾಧ್ಯವಿಲ್ಲವೆಂಬುದೇ ಆ ಪರಿಹಾರ!


(೨೮೯) ಯಾರನ್ನಾದರೂ ನಂಬುವುದೆಂದರೆ ನಿಮ್ಮನ್ನು ಮೋಸಗೊಳಿಸಬಲ್ಲ ಅವರ ಸಾಮರ್ಥ್ಯವನ್ನು ಕಡೆಗಣಿಸಿದಂತೆ.


(೨೯೦) ಗುರಿ ತಲುಪುವುದೆಂದರೆ ಮೊದಲೇ ನಿರ್ಧಾರವಾದುದನ್ನು ’ತಲುಪುವುದು’. ಗಮನವನ್ನು ಸುತ್ತುವರಿದ ಭಾಗ್ಯವೆಂಬುದೇ ಅದನ್ನು ತಲುಪಲಿರುವ ವಾಹನ. ಕೇವಲ ಭಾಗ್ಯವು ನಿಮ್ಮನ್ನು ಗುರಿ ತಲುಪಿಸಿದರೂ ಅದು ನಿಮ್ಮ ಸಾಧನೆ ಎನಿಸದು, ಬರಿಯ ಗಮನವು ಭಾಗ್ಯವಂಚಿತವಾದ್ದರಿಂದಲೇ ನೀವು ತಲುಪಿದ್ದರೂ ಗುರಿ ನಿಮ್ಮಿಂದ ದೂರವಿದ್ದಂತೆನಿಸಿಬಿಡುವುದು.


 

Rating
No votes yet