ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಶಿವಾ ಅಂತ ಹೋಗುತ್ತಿದ್ದೆ

ಜಾಕಿ ಚಿತ್ರದ ಶಿವಾ ಅಂತ ಹೋಗುತ್ತಿದ್ದೆ ಹಾಡಿಗೆ ಸಾಹಿತ್ಯ ಬದಲಾಯಿಸಿದ್ದೇನೆ..ಇದು ಕೇವಲ ಹಾಸ್ಯಕ್ಕಾಗಿ.


 


ಶಿವಾ ಅಂತ ಹೋಗುತ್ತಿದ್ದೆ ಸಿ.ಎಂ.ಆಗಿ


ಸಿಕ್ಕಾಪಟ್ಟೆ ಫೈಟು ಇತ್ತು ಸೀಟಿಗಾಗಿ...


ಅರ್ಧಂಬರ್ಧ ಸಪೋರ್ಟ್ ಇತ್ತು ಪಕ್ಷದಲಿ...


ನೀ ಹೋದೆ ಸೈಡಿನಲ್ಲಿ..


 


ಕಂಡು ಕಂಡು ಬಿದ್ದಂಗಾಯ್ತು ಹಳ್ಳದಲಿ..


ಕಂಬ್ಳಿ ಹುಳ ಬಿಟ್ಟಂಗಾಯ್ತು ಹಾಸ್ಗೆನಲಿ..


ಕಚಗುಳಿ ಇಟ್ಟಂಗಾಯ್ತು ಬೆನ್ನಿನಲಿ..


ನೀ ಬಂದಾಗ ಪಕ್ಷದಲಿ.. ಪಕ್ಷದಲಿ..ಪಕ್ಷದಲಿ..ಪಕ್ಷದಲಿ...


 


ಗೂಳಿಯನ್ನು ಬಿಡಂಗಿಲ್ಲ...ಶೋಭಾ ನನ್ನ ಬಿಡೋದಿಲ್ಲ..


ಗೂಳಿಯನ್ನು ಬಿಡಂಗಿಲ್ಲ...ಶೋಭಾ ನನ್ನ ಬಿಡೋದಿಲ್ಲ.


ಅಯ್ಯೋ ಪಾಪ ಹುಡುಗಿ ಜೀವ ಹೆದರುವುದು..


ಥೂ ನಂಗೆ ಯಾಕೆ ಹಿಂಗೆ ಎಲ್ಲ ಅನಿಸುವುದು...


ಯಾರ ಮಾತು ಕೇಳಲಿಲ್ಲ...ಯಾರ ಮಾತು ಕೇಳಲಿಲ್ಲ...

ಮತ್ತೆ ಬೊಗಳೆ

ಸಂಪದಿಗರೆಲ್ಲರಿಗೂ ನಮಸ್ಕಾರಗಳು.

ಮೂರುವರೆ ವರ್ಷಗಳ ನಂತರ ನಮ್ಮ ಬೊಗಳೂರು ಬ್ಯುರೋದ ಈ ಸಂಪದ ಶಾಖೆಯ ಬಾಗಿಲು ತೆಗೆದಾಗ, ಸಂಪದವು ಸಿರಿ ಸಂಪದವಾಗಿದ್ದು ಗಮನಕ್ಕೆ ಬಂತು. ನೆಟ್ಗನ್ನಡಿಗರೆಲ್ಲರೂ ನಮ್ಮಷ್ಟು ಅಲ್ಲದಿದ್ದರೂ ನಮಗಿಂತಲೂ ಸುಧಾರಣೆ ಕಂಡಿದ್ದಾರೆ. ಸುದ್ದಿ-ರದ್ದಿಗಳ ಹಿಂದೆಯೇ ನಾವು ಓಡಾಡುವವರಾದ್ದರಿಂದ, ನಾವು ಕೂಡ ನಿಮ್ಮೆಲ್ಲರನ್ನೂ ಹಿಂಬಾಲಿಸುತ್ತೇವೆ. ಆಗದೇ?

 

ನಾವು ಎಷ್ಟರಮಟ್ಟಿಗೆ ಪರಿಸರ ಸ್ನೇಹಿಗಳಾಗಿದ್ದೀವಿ

ಪರಿಸರದ ಮೇಲಿನ ನಮ್ಮ ದೌರ್ಜನ್ಯ (ಅಥವಾ ಅತ್ಯಾಚಾರ) ನಿರಂತರವಾಗಿ ದಿನ ಪ್ರತಿಕ್ಷಣವೂ ಸಾಗಿದೆ. ಒಂದೇ ಎರಡೇ? ವಾಯು ಮಾಲಿನ್ಯ, ಶಬ್ದ, ಅರಣ್ಯ ನಾಶ ಇತ್ಯಾದಿ. ಎಲ್ಲವುದಕ್ಕೂ ನಾವು ದೂರುವುದು ಇನ್ನೊಬ್ಬರನ್ನು ಇಲ್ಲ ಸರಕಾರವನ್ನು. ಆದರೆ ನಾವು ಈ ನಿಟ್ಟಿನಲ್ಲಿ ಏನನ್ನು ಮಾಡಿರುವೆವು? ಒಮ್ಮೆ ಯೋಚಿಸಿ ನೋಡಿ. ಸಣ್ಣ ಸಣ್ಣ ವಿಷಯಗಳಿಗೂ ನಾವು ತಲೆ ಕೆಡಿಸಿಕೊಳ್ಳುದಿಲ್ಲ. ಎಲ್ಲಿ ಹೋದರು ಕೈಬೀಸಿ ಕೊಂಡು ಹೋಗಿ ಎಲ್ಲವನ್ನೂ ತೆಗೆದುಕೊಂಡು ಪ್ಲಾಸ್ಟಿಕ್ ಚೀಲಗಳ ಗುಡ್ಡೆ ಸುರಿಯುತ್ತಿರುವ ನಾವು, ಇದನ್ನು ತಡೆಯಲ ಏನು ಮಾಡ ಬಹುದು ಇಲ್ಲಿ ಬರೆಯಿರಿ. ನಿಮ್ಮ ಸಮಯಕ್ಕೆ ಧನ್ಯವಾದ

ಚುರ್ಮುರಿ - ೧೦

೨೮) ನಮ್ಮ ದೇಶದಲ್ಲಿ ಮಹಾತ್ಮರಾಗುವುದರಿಂದ ಆಗುವ ಲಾಭಕ್ಕಿಂತ ನಷ್ಟಗಳೇ ಹೆಚ್ಚು.

 

೨೯) ಅವರಿಬ್ಬರೂ ಸಹೋದ್ಯೋಗಿಗಳು, ಒಬ್ಬ ಬ್ರಾಹ್ಮಣ, ಇನ್ನೊಬ್ಬ ದಲಿತ. ಬ್ರಾಹ್ಮಣ ಮೊದಲ ದರ್ಜೆಯ ಕ್ಲರ್ಕ್ ಆಗಿದ್ದ, ಆಮೇಲೆ ಸೇರಿದ ದಲಿತ ಎರಡನೇ ದರ್ಜೆಯ ಕ್ಲರ್ಕ್ ಆಗಿ ಬ್ರಾಹ್ಮಣನ ಕೈಕೆಳಗೆ ಕೆಲಸ ಮಾಡುತ್ತಿದ್ದ. ಸ್ವಲ್ಪ ವರ್ಷಗಳ ನಂತರ ದಲಿತ ಸುಪರಿಟೆನ್ಡೆಂಟ್ ಆದ. ಬ್ರಾಹ್ಮಣ ಇನ್ನೂ ಅದೇ ಹುದ್ದೆಯಲ್ಲಿದ್ದಾನೆ ಆದರೆ ದಲಿತನ ಕೈಕೆಳಗೆ.

 

೩೦) ಮಲ್ಲಿಕಾ ಶೆರಾವತಳನ್ನು ದೇವಸ್ಥಾನಕ್ಕೆ ಸೀರೆ ಯಾಕೆ ಹಾಕಿಕೊಂಡು ಹೋದಳೆಂದು ಯಾರೋ ಕೇಳಿದ್ದಾರೆ. ಆ ಪುಣ್ಯಾತ್ಗಿತ್ತಿ ಅಲ್ಲಾದರೂ ಬಟ್ಟೆಯಲ್ಲಿರಲು ಬಿಡಿ.

 

ದಾವಣಗೆರೆಯಲ್ಲೊಂದು ಜಲಿಯನ್‌ವಾಲಾ ಬಾಗ್ ದುರಂತ


  ಸ್ವಾತಂತ್ರ್ಯ ಚಳವಳಿಯು ತಾರಕಾವಸ್ಥೆ ತಲುಪಿದ್ದ ಕಾಲ. ಸೇಂದಿ ವಿರೋಧಿ ಹೋರಾಟಗಾರರು ನನ್ನೂರಾದ ದಾವಣಗೆರೆಯ ಹೊಳೆಹೊನ್ನೂರು ತೋಟದಲ್ಲಿ ಈಚಲಮರದಿಂದ ಭಟ್ಟಿ ಇಳಿಸುವುದರ ವಿರುದ್ಧ ಪಿಕೆಟಿಂಗ್ ಹಮ್ಮಿಕೊಂಡಿದ್ದರು. ನೂರಾರು ಮಂದಿ ಚಳವಳಿಗಾರರು ಅಂದು ಪಿಕೆಟಿಂಗ್‌ನಲ್ಲಿ ಭಾಗವಹಿಸಿದ್ದರು. ಗುತ್ತೂರು ಕ್ಯಾಂಪ್ ಮತ್ತು ಹನಗವಾಡಿ ಕ್ಯಾಂಪ್ ಎಂದು ದಾವಣಗೆರೆ ಸನಿಹದಲ್ಲೇ ಎರಡು ಕಡೆ ಆಗ ಬ್ರಿಟಿಷ್ ಸೇನೆಯ ಶಿಬಿರಗಳಿದ್ದವು. ನನ್ನ ತಂದೆಯವರು ಒಪ್ಪಂದದ ಮೇರೆಗೆ ಈ ಶಿಬಿರಗಳ ಛಾಯಾಚಿತ್ರಕಾರರಾಗಿದ್ದರು.

ಕನ್ನಡ ರಾಜ್ಯೋತ್ಸವ ವಿಶೇಷ...

ಕನ್ನಡ ರಾಜ್ಯೋತ್ಸವವನ್ನು  ನಮ್ಮ ಟಿ.ವಿ.ಹಾಗೂ ಎಫ್.ಎಂ.ನಿರೂಪಕರು ನಡೆಸಿಕೊಟ್ಟರೆ ಹೇಗಿರಬಹುದು ಎಂದು ಸಣ್ಣ ಉದಾಹರಣೆ...

ಸಿದ್ದೇಸ ಟಿವಿ - ಜಾತಕ ಫಲ

ಮಾನ್ಯ ವೀಕ್ಷಕರೆ, ಎಂದಿನಂತೆ ಇವತ್ತೂ ಕೂಡ ನಮ್ಮೊಂದಿಗೆ ಅರುಣ್ ಜೈನ್್ರವರು ಜಾತಕದ ಫಲ ಹೇಳುತ್ತಿದ್ದಾರೆ. ಇದನ್ನು ಕೇಳಿ ನಿಮಗೆ ಒಳ್ಳೆಯದಾದರೆ ನನ್ನ ಅಕೌಂಟ್ ನಂಬರ್ ನೀಡುತ್ತೇನೆ, ಅಲ್ಲಿಗೆ ನಿಮ್ಮ ಹಣ ಸಂದಾಯ ಮಾಡಿ. ಏನಾದರೂ ಉಲ್ಟಾ ಹೊಡೆದರೆ ಜೈನ್್ರವರ ಮನೆಯ ವಿಳಾಸ ಹಾಗೇ ಅವರ ಸ್ಥಿರ ಮತ್ತು ಚರ ದೂರವಾಣಿಯ ನಂಬರ್ ನೀಡುತ್ತೇನೆ. ಹುಡುಕಿಕೊಂಡು ಹೋಗಿ ಹೊಡೆದು ಬನ್ನಿ.ನೀವೂ ಪ್ರಶ್ನೆಗಳನ್ನು ಕೇಳಿ. ಆ ನಂತರ ನಿಮಗೆ ಸಿದ್ದೇಸ ಟಿವಿಯಿಂದ ಕರೆನ್ಸಿ ಹಾಕಿಸುತ್ತೇವೆ. ಜೈನ್ ಸಂಭಾವನೆಯಲ್ಲಿ ಕಟ್ ಮಾಡಿ.

ಸಿದ್ದೇಸ ಟಿವಿ : ನಮಸ್ಕಾರ ಅರುಣ್ ಜೈನ್್ರವರೆ, ಇವತ್ತಿನ ಫಲಾಫಲಗಳ ಬಗ್ಗೆ ನಮ್ಮ ವೀಕ್ಸಕರಿಗೆ ತಿಳಿಸಿ

RSS ಮತ್ತು BJP

ಇಂದಿನ ವಿಜಯಕರ್ನಾಟಕದಲ್ಲಿ RSS ಮತ್ತು BJP ಬಗ್ಗೆ ಒಂದು ಒಳ್ಳೆಯ ಲೇನ ಬಂದಿದೆ. ಅಲ್ಲಿ ಸಂಘ ಮತ್ತು BJP ಬಗ್ಗೆ ಇರುವ ಕೆಲ ಅನುಮಾನಗಳಿಗೆ ಮಾನ್ಯ ಮುಕುಂದ ಅವರು ಉತ್ತರಿಸಿದ್ದಾರೆ.

ಲೇಖನ ಇಲ್ಲಿದೆ

 

-ವಿನಾಯಕ