ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕವಿಯಾಗುತ್ತಿರುವೆ ನಿನ್ನ ನೆನೆ ನೆನೆದು

ಎಲ್ಲಿರುವೆ ಓ ನನ್ನ ಮನದರಸಿ ಬಂದೆ ನೀ ಕನಸಿನಲಿ..


ಹೃದಯದ ಕದವನ್ನು ತಟ್ಟದೆ ಒಳಗೆ ಬಂದು ಕುಳಿತೆ ನೀ...


ಕನಸಿನಲ್ಲಿ ಬಂದಾದ ಮೇಲೆ ನಿನದೆ ಕನವರಿಕೆ ದಿನವೂ...


ಕನಸೆಂದು ತಿಳಿದರೂ ನಿನ್ನನೆ ಬಯಸುತಿದೆ ಮನವು...


ಮಳೆಗಾಲದ ಮುಸ್ಸಂಜೆಯಲಿ ಕಡಲ ಕಿನಾರೆಯಲಿ..


ನಿನ್ನೊಡನೆ ಕೈ ಕೈ ಹಿಡಿದು ನಡೆಯುವ ಹಂಬಲ...


ಕಾಯಕ ಮುಗಿಸಿ ಹೊರಟಿರುವ ಕೆಂಪು ಸೂರ್ಯನ ನೋಡುವ ಆಸೆ...


ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಮರಳಿನಲ್ಲಿ ಆಡುವ ಆಸೆ...


ಏನೆಂದು ಹೇಳಲಿ ನಾ ನನ್ನ ಚಂಚಲ ಮನಸಿಗೆ..


ಕವಿಯಾಗುತ್ತಿರುವೆ ನಿನ್ನ ನೆನೆ ನೆನೆದು ಇತ್ತೀಚಿಗೆ...


ಪ್ರತೀ ಬಾರಿ ಕನಸಲ್ಲೇ ಬರುವೆ ಏಕೆ??

500/- ಬಹುಮಾನ. ಪುಸ್ತಕ ಓದುಗರಿಗಾಗಿ ಕಾಂಪಿಟೇಶನ್.

ಯಳವತ್ತಿ ಪ್ರಶ್ನೆಗಳು-01

ರೂ. 500/- ಬಹುಮಾನ..

ಈ ಕೆಳಗೆ ಕಾಣಿಸಿದ ಸಾಲುಗಳು ಯಾವ ಕಾದಂಬರಿಯದ್ದು ಅಂತಾ ಹೇಳಬೇಕು, ಯಾವ ಕಾದಂಬರಿ ಎಂದು ಹೇಳಿದರೆ ರೂ. 100/- ಕಾದಂಬರಿಯ ಕತೃ ಹೇಳಿದರೆ 100/- ಯಾವ ಸಂದರ್ಭದಲ್ಲಿ ಅಂತಾ ಹೇಳಿದರೆ 100/- ಕಾದಂಬರಿಯ ಬಗ್ಗೆ ನಿಮ್ಮ ಅಭಿಪ್ರಾಯಕ್ಕೆ 100/-, ಅಲ್ಲದೇ ನಾನು ಕೇಳಿದ ಪ್ರಶ್ನೆಯಲ್ಲಿ ಒಂದು ತಪ್ಪಿದೆ ಅದನ್ನು ಗುರುತಿಸಿ ಹೇಳಿದರೆ 100/-  ಆದರೆ, ಇವನ್ನೆಲ್ಲಾ ಒಬ್ಬರೇ ಒಟ್ಟಿಗೇ ಹೇಳಬೇಕು.. ಮೊದಲು ಉತ್ತರ ಹೇಳಿದವರಿಗೆ ಮಾತ್ರ ಬಹುಮಾನ.. ಒಂದು ಪಾಯಿಂಟ್ ಮಿಸ್ ಆದರೂ ಬಹುಮಾನ ಇಲ್ಲ.. ಇವತ್ತಿನಿಂದ ಒಂದು ತಿಂಗಳವರೆಗೆ ಸಮಯ ಅಂದರೆ,

ಕ್ಲೂ:- ಇದು ನನ್ನ ಫೇವರಿಟ್ ಕಾದಂಬರಿ..ಸುಮಾರು 20 ಸಲ ಓದಿರಬಹುದು...

ಸೈನ್ಸ್ ಅಂದ್ರೆ ಏನು !!??

ಸಂಪದರಿಗೆ ನಮಸ್ಕಾರ..


ತುಂಬಾ ದಿನ ಆದ ಮೇಲೆ ಬರಿತಿದೀನಿ ...


 ಸ್ವಲ್ಪ ದಿನದ ಹಿಂದೆ ScienceUtsav ಅಂತ  ಮಕ್ಕಳಿಗಾಗಿ  ನಾವು ಶುರು ಮಾಡ್ತ ಇದ್ದ programme ಬಗ್ಗೆ ಬರ್ದಿದ್ದೆ .. ಈಗ ಶುರು ಆಗೊ ಘಳಿಗೆ ಬಂದಿದೆ.. ಅದಕ್ಕೆ ನಿಮ್ಮ ಸಹಕಾರ ಕೋರೊಕೆ ಮತ್ತ್ ಬರಿತಾ ಇದೀನಿ ..ಅದಕ್ಕು ಮುಂಚೆ ಒಂದು ಮುನ್ನುಡಿ .. ಸ್ವಲ್ಪ ಹಳೆ story ಇದೆ, ಏನೊ ಓದ್ ಬಿಡಿ ..   

ಸರ್ವೇ ಸಂಪದಿಗಾಃ ಸುಖಿನೋ ಭವಂತು : ಓದಿ, ನಕ್ಕು, ಬಿಡಿ.


ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ, ಅವನೇ ಬುದ್ಧ.
ಸಂಪದಿಗರೆಲ್ಲ ಸಂಡೇ ಮೂಡಿನಲ್ಲಿರಲು ಇವನೊಬ್ಬ ಕೊರೆದ, ಇವನೇ (ಶಾಸ್ತ್ರೀ ಎಂಬ) ಪೆದ್ದ.
*೦*
ಯಾರು ಯಾರು ನೀ ಯಾರು? ಎಲ್ಲಿಂದ ಬಂದೆ ಯಾವೂರು?
ಯಾರು ಯಾರು ನಾವ್ ಯಾರು? ನಾವೆಲ್ಲ ಇಲ್ಲಿ ಸಂಪದರು.
*೦*
ಸರ್ವೇ ಸಂಪದಿಗಾಃ ಸುಖಿನೋಭವಂತು.
ಇದು survey: ಸಂಪದಿಗರು ಹೇಗಿದ್ದಾರೆ, ಎಂತು?
*೦-
ನಾವಾಡುವ ನುಡಿಯೇ ಕನ್ನಡ ನುಡಿ....
ನಾವಿರುವಾ ತಾಣವೆ ಗಂಧದ ಗುಡಿ.

ನಾವಾಡುವ ನುಡಿಯೇ ಸಂಪದ ನುಡಿ....
ನಾವ್ ಬರೆಯೋ ತಂತ್ರವೆ ಬರಹ, ಶ್ರೀಲಿಪಿ, ನುಡಿ....
ಡಿಫರೆಂಟ್ ಡಿಫರೆಂಟ್ ಬಿಡಿ.
*೦*

ಓ ದೇವರೇ..

ಓ ದೇವರೇ..
ನಿನಗೆ..
ಧನ್ಯ ನಾ..
ನಿನ್ನ ಧ್ಯಾನದಿ
ಕಳೆದುಕೊಡೆ
ನನ್ನೆ ನಾ..

ಗೀತೆಯ ಓದಿದೆ
ರಮಾಯಣ ನೋಡಿದೆ
ನಿನ್ನದೇ ಎಲ್ಲ
ಎಂದು ಅರಿತೆ..

ಆ ಸೂರ್ಯ ಚಂದ್ರ
ನಕ್ಷತ್ರ ಪುಂಜ
ಈ ಭೂಮಿ ಆಗಸ
ಎಲ್ಲೆಲ್ಲು ನಿನ್ನದೆ ರಸ..

ಶಬ್ದ ಬೆಳಕು ಸ್ಪರ್ಶ
ಸುವಾಸನೆ ರುಚಿಯಲೂ
ತಂಪು ಕಂಪು ಗಾನ
ಬಣ್ಣ ಪರಮಾಣ್ಣದಲೂ
ಬೆರೆತಿರುವೆ ನೀ..

ಓ ದೇವರೇ..
ನಿನಗೆ
ಧನ್ಯ ನಾ..

ಯಾವುದು ತಪ್ಪು?

ಜೀವನದಲ್ಲಿ
ನಿರ್ಧರಿಸುವುದು
ಇದು ಕಷ್ಟ
ಯಾವುದು ತಪ್ಪೆ೦ದು?
ಒ೦ದು ಮುಗುಳ್ನಗೆಯ
ಮೂಡಿಸುವ
ಒ೦ದು ಸುಳ್ಳೋ
ಅಥವಾ
ಒ೦ದು ಕಣ್ಣೀರ
ಮಿಡಿಸುವ
ಒ೦ದು ಸತ್ಯವೋ!

 

(ಹನಿಮುತ್ತು)