ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬದಲಾಗುತ್ತಿರುವ ಮಲೆನಾಡಿನ ಅಡಿಕೆ ಕೊಯ್ಲಿನ ಚಿತ್ರಣ

      ಮಲೆನಾಡಿನ   ಬೆಳೆಗಳಲ್ಲಿ ಅಡಿಕೆ ಪ್ರಮುಖ ಸ್ಥಾನ ಪಡೆದುಕೊಂಡಿದೆ.  ಈಗಾಗಲೇ  ಬಹುಶ:  ಮಲೆನಾಡಿನ ಅಡಿಕೆ ಬೆಳೆಗಾರರು ಅಡಿಕೆ ಕೊಯ್ಲಿನ ತಯಾರಿಯಲ್ಲಿರ ಬಹುದು ಅಥವಾ ಹೆಚ್ಚಿನವರು ಪ್ರಾರಂಭಿಸಿರಲೂ ಬಹುದು. ನವರಾತ್ರಿ ಕಳೆದು ದೀಪವಾಳಿ ಕಳೆಯುವುದರ ಒಳಗೆ ಈ ಅಡಿಕೆ ಕೊಯ್ಲಿನ ಚಟುವಟಿಕೆಗಳು ಆರಂಭಗೊಳುತ್ತದೆ.

ನಿನ್ನ ನೆನಪೊಂದೇ ಶಾಶ್ವತ !

ನಿನ್ನೆಗಳ ಸವಿ ನೆನಪಿನೊಂದಿಗೆ
ನಾಳೆಯ ನಿರೀಕ್ಷೆಗಳೆಲ್ಲ
ಮೌನದಾಳಕ್ಕೆ ಜಾರತೊಡಗಿದಾಗ...
ಬರಡೆನಿಸುವ ಬದುಕಲ್ಲಿ
ಬರಿಯ ಕಂಬನಿ ಧಾರೆ!
ಸುತ್ತ ನಿರ್ಮಲತೆ ಹರಡಿದ್ದರೂ
ಮತ್ತೆ ಕುರೂಪತೆ ಕಾಡಿ,
ಮರುಕಳಿಸುವ ನೋವಿಗೆ
ಒಂದಾಗಿ ನಾಂದಿ ಹಾಡಿ,
ಕೃಶವಾಗಿಸುವುದು  ಕನಸ!

ಜೆಡಿಎಸ್ ಆಪರೇಷನ್ ಸಿಡಿ - ವಿಶೇಷ ಕಾರ್ಯಾಚರಣೆ

ಅಣ್ಣಾ ಬಿಜೆಪಿ ಸುರೇಶ್ ಗೌಡ ನಂಗೆ ಬಿಜೆಪಿಗೆ ಬಾ ಬಾ ಬಾ ಬಾ ಅಂತಾ ಕರಿತಾವ್ನೆ . ಏನ್ ಮಾಡ್ಲಿ ಅಂದ್ರು ಗುಬ್ಬಿ ಸಾಸಕ ಶ್ರೀನಿವಾಸು. ಉಗಿಯಲಾ ಮಕ್ಕೆ. ಅಲ್ಲಾ ಕಲಾ ನಾನು ನಿನಗೆ ಸೀಟು ಕೊಟ್ಟು ಗೆಲ್ಲಿಸಿದ್ದು. ಅದೆಂಗಲಾ ಅಲ್ಲಿ ಹೋಯ್ತೀಯಾ. ನೀನೇದ್ರೂ ಹೋದ್ರೆ ಮುಂದಿನ ದಪಾ ಚುನಾವಣೆಗೆ ಅಂಗಲವಿಕಲರ ಸರ್ಟಿಫಿಕೇಟ್ ನೀಡಬೇಕಾಯ್ತದೆ ಅಂದ್ರು ಕುಮಾರಣ್ಣ, ಸರಿ ಏನ್ ಮಾಡಲಿ ನೀವೇ ಹೇಳಿ. ನೋಡಲಾ ನಿಂಗೆ ವಿಶೇಷ ಕ್ಯಾಮೆರಾ ಕೊಡಿಸ್ತೀನಿ. ನಿಮ್ಮನೆಗೆ ಕರೆಸಿ ಹಿಡಿಯಲಾ. ಮುಂದಿದ್ದು ನಾನು ನೋಡ್ಕೊತ್ತೀನಿ. ಸರಿ ಅಣ್ಣ, ನೀನು ಇಷ್ಟು ಹೇಳಿದ್ ಮ್ಯಾಕೆ ಮಾಡೇ ಮಾತ್ತೀನಿ. ಆದರೆ ಕಾಸು ಇಸ್ಕಂಡು ಮಾಡಲೋ, ಇಲ್ಲಾ ಅಂಗೇ ಮಾಡಲೋ. ನಾನು 30ಕೋಟಿ ಕೊತ್ತೀನಿ ಸುಮ್ಕೆ ವಿಡಿಯೋ ಮಾಡಲಾ.

ಇದು ನಮ್ಮ ನಾಡಿನ ವ್ಯಥೆಯೋ ... ನಾವೇ ಬರೆದ ಕಥೆಯೋ...?!

ಇದು ನಮ್ಮ ನಾಡಿನ ವ್ಯಥೆಯೋ
ಇಲ್ಲಾ ನಾವೇ ಬರೆದ ಕಥೆಯೋ
ಪರಿಹಾರ ಹೇಗೋ ಅರಿಯೆ
ನಾನೇನೂ ಮಾಡಲಾರೆ

ರಾಜಕೀಯ ಅನ್ನೋದೀಗ ಪ್ರತೀ ಮನೇಲಿದೆ
ಅಪ್ಪ ಮಗ ಅಣ್ಣ ತಮ್ಮ ಅನ್ನೋದು ಎಲ್ಲಿದೆ
ಸಂಬಂಧಕ್ಕಿಂತ ಹಣ ಹೆಚ್ಚಾಗಿ ಆಟವಾಡಿದೆ
ಎಲ್ಲರನ್ನೂ ತಮ್ಮವರಿಂದ ದೂರ ಮಾಡಿದೆ
ಬರೀ ಹಣಕ್ಕಷ್ಟೇ ಬೆಲೆ ಇಲ್ಲಿ ನೋಡಿ
ಗುಣ ಎಲ್ಲುಂಟು ಎಂದು ಕೇಳಬೇಡಿ

ಇದು ನಮ್ಮ ನಾಡಿನ ವ್ಯಥೆಯೋ
ಇಲ್ಲಾ ನಾವೇ ಬರೆದ ಕಥೆಯೋ


ರಾಜ್ಯಾವಾಳೋ ನಾಯಕರೂ ಭ್ರಷ್ಟರಾದರೆ
ತಮ್ಮ ತಮ್ಮ ಗಂಟುಗಳ ತುಂಬಿಕೊಂಡರೆ
ಪ್ರಜಾಜನರ ಕಷ್ಟವನ್ನು ಕೇಳದಾದರೆ
ಅಸಹಾಯಕ ಜನರೆಲ್ಲಾ ಮರುಗುತ್ತಿದ್ದರೆ
ಮುಗಿಯುತ್ತೆ ಕೊರಗುತ್ತಾ ಆಯುಷ್ಯ
ಈ ದೇಶಕ್ಕೆ ಎಲ್ಲಿದೆಯೋ ಭವಿಷ್ಯ

ಬೀಚಿ ಹೇಳಿದ್ದು...

ಮಕ್ಕಳವು ತಲೆ ನೋವು, ಮಕ್ಕಳಿಂದೇನು ಸುಖ
ಅಕ್ಕ ಬೇಸತ್ತೊಮ್ಮೆ ಕುಳಿತಲ್ಲೇ ಗೊಣಗಿದಳು.
ಸುಖ ಕೊಡಲು ಮಕ್ಕಳೇನು ಸುಖದ ವೃಕ್ಷಗಳೇ,
ಸುಖದ ಫಲಗಳವು ಭಾವ ನಕ್ಕನೋ ತಿ೦ಮ

ಶಿವಾ ಅಂತ ಹೋಗುತ್ತಿದ್ದೆ

ಜಾಕಿ ಚಿತ್ರದ ಶಿವಾ ಅಂತ ಹೋಗುತ್ತಿದ್ದೆ ಹಾಡಿಗೆ ಸಾಹಿತ್ಯ ಬದಲಾಯಿಸಿದ್ದೇನೆ..ಇದು ಕೇವಲ ಹಾಸ್ಯಕ್ಕಾಗಿ.


 


ಶಿವಾ ಅಂತ ಹೋಗುತ್ತಿದ್ದೆ ಸಿ.ಎಂ.ಆಗಿ


ಸಿಕ್ಕಾಪಟ್ಟೆ ಫೈಟು ಇತ್ತು ಸೀಟಿಗಾಗಿ...


ಅರ್ಧಂಬರ್ಧ ಸಪೋರ್ಟ್ ಇತ್ತು ಪಕ್ಷದಲಿ...


ನೀ ಹೋದೆ ಸೈಡಿನಲ್ಲಿ..


 


ಕಂಡು ಕಂಡು ಬಿದ್ದಂಗಾಯ್ತು ಹಳ್ಳದಲಿ..


ಕಂಬ್ಳಿ ಹುಳ ಬಿಟ್ಟಂಗಾಯ್ತು ಹಾಸ್ಗೆನಲಿ..


ಕಚಗುಳಿ ಇಟ್ಟಂಗಾಯ್ತು ಬೆನ್ನಿನಲಿ..


ನೀ ಬಂದಾಗ ಪಕ್ಷದಲಿ.. ಪಕ್ಷದಲಿ..ಪಕ್ಷದಲಿ..ಪಕ್ಷದಲಿ...


 


ಗೂಳಿಯನ್ನು ಬಿಡಂಗಿಲ್ಲ...ಶೋಭಾ ನನ್ನ ಬಿಡೋದಿಲ್ಲ..


ಗೂಳಿಯನ್ನು ಬಿಡಂಗಿಲ್ಲ...ಶೋಭಾ ನನ್ನ ಬಿಡೋದಿಲ್ಲ.


ಅಯ್ಯೋ ಪಾಪ ಹುಡುಗಿ ಜೀವ ಹೆದರುವುದು..


ಥೂ ನಂಗೆ ಯಾಕೆ ಹಿಂಗೆ ಎಲ್ಲ ಅನಿಸುವುದು...


ಯಾರ ಮಾತು ಕೇಳಲಿಲ್ಲ...ಯಾರ ಮಾತು ಕೇಳಲಿಲ್ಲ...