ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ದೇಶದ್ರೋಹಿ ಯಾರು...

ಇಂದಿನ ವಿಜಯ ಕರ್ನಾಟಕದಲ್ಲಿ ಬುಕರ್ ಪ್ರಶಸ್ತಿ ವಿಜೇತೆ ಅರುಂಧತಿ ರಾಯ್ ಅವರ ಒಂದು ಹೇಳಿಕೆ ಬಂದಿತ್ತು.ಅದನ್ನು ಅರ್ಧ ಓದುವ ಹೊತ್ತಿಗೆ ಬೇಸರಗೊಂಡು ಪೂರ್ತಿ ಓದಲಿಲ್ಲ. ಆಕೆ ಕೊಟ್ಟಿರುವ ಹೇಳಿಕೆ ಆದರೂ ಏನು "ಕಾಶ್ಮೀರ ಭಾರತಕ್ಕೆ ಸೇರಿಲ್ಲ ಬಿಟ್ಟು ಬಿಡಿ" ಎಂದು ಅದು ಅಲ್ಲದೆ ತಮ್ಮ ಹೇಳಿಕೆಯನ್ನು ಆಕೆ ಸಮರ್ಥಿಸಿಕೊಂಡಿದ್ದಾರೆ ಕೂಡ. ಕೇಂದ್ರ ಸರ್ಕಾರ ದೇಶದ್ರೋಹದ ಆರೋಪದ ಮೇಲೆ ಆಕೆಯನ್ನು ಬಂಧಿಸಲು ಆಲೋಚಿಸುತ್ತಿದ್ದಾರೆ ಅಲ್ಲಿತನಕ ಓದಿ ನಿಲ್ಲಿಸಿದೆ.


ನಿಜವಾದ ದೇಶದ್ರೋಹಿಗಳು ಯಾರು? ಹೊರಗಿನಿಂದ ಬರುವವರೆ? ಅಥವಾ ನಮ್ಮಲ್ಲಿಯೇ ಇದ್ದುಕೊಂಡು ಇಂಥಹ ಹೇಳಿಕೆಗಳನ್ನು ಕೊಡುವವರೆ??

ಕನ್ನಡ ಅನುವಾದಕರಿಗೆ ಮೂರು ದಿನಗಳ ತರಬೇತಿ ಕಾರ್ಯಕ್ರಮ

ರಾಷ್ಟ್ರೀಯ ಅನುವಾದ ಮಿಶನ್

ಹುಣಸೂರು ರಸ್ತೆ, ಮಾನಸಗಂಗೋತ್ರಿ, ಮೈಸೂರು.



ಕನ್ನಡ ಅನುವಾದಕರಿಗೆ ಮೂರು ದಿನಗಳ ತರಬೇತಿ ಕಾರ್ಯಕ್ರಮ

 

ದಿನಾಂಕ : 28 ರಿಂದ 30 ಅಕ್ಟೋಬರ್, 2010

ಅರ್ಥವಾಗದ ನಮ್ಮ-ನಿಮ್ಮ ನಡುವಿನ ನಡವಳಿಕೆಗಳು

ಅರ್ಥವಾಗದ ನಮ್ಮ-ನಿಮ್ಮ ನಡುವಿನ ನಡವಳಿಕೆಗಳು

ನಮ್ಮ ದಿನನಿತ್ಯದ ಅದೆಷ್ಟೋ ನಡವಳಿಕೆಗಳು ವಿಚಿತ್ರವಾಗಿರುತ್ತವೆ. ಆದರೆ ಅವುಗಳು ಬೇರೆ ದ್ರಷ್ಟಿಕೊನದಲ್ಲಿ ಆಲೋಚಿದರೆ ಮಾತ್ರ ಅವು ವಿಚಿತ್ರವೆನಿಸುತ್ತದೆ.ಎಲ್ಲರೂ ಒಂದಲ್ಲಾ ಒಂದು ವಿಚಿತ್ರ ನಡುವಳಿಕೆಯನ್ನು ಅನುಸರಿಸುತಿರುತ್ತಾರೆ.

ಕನ್ನಡ ಅನುವಾದಕರಿಗೆ ಮೂರು ದಿನಗಳ ತರಬೇತಿ ಕಾರ್ಯಕ್ರಮ

ರಾಷ್ಟ್ರೀಯ ಅನುವಾದ ಮಿಶನ್

ಹುಣಸೂರು ರಸ್ತೆ, ಮಾನಸಗಂಗೋತ್ರಿ, ಮೈಸೂರು.


ಕನ್ನಡದ ಅನುವಾದಕರಿಗೆ ಮೂರು ದಿನಗಳ ತರಬೇತಿ ಕಾರ್ಯಕ್ರಮ

 

ದಿನಾಂಕ : 28 ರಿಂದ 30 ಅಕ್ಟೋಬರ್, 2010

ಸಿಹಿ ಮೊಗ್ಗೆ ಅರಳಿದಾಗ ....

ಬಳ್ಳಾರಿ ಸುಮಧುರ ನೆನಪಿನೊಂದಿಗೆ(http://sampada.net/blog/gopaljsr/21/02/2010/24120) ಶಿವಮೊಗ್ಗ ಬಂದು ತಲುಪಿದ್ದೆ. ನಾನು ಬಳ್ಳಾರಿಯ ಬಸ್ ಹತ್ತುವ ಭರದಲ್ಲಿ ನನ್ನ ರಗ್ ಅಲ್ಲೇ ಬಿಟ್ಟು ಬಂದಿದ್ದೆ. ಏಕೆಂದರೆ ಅದನ್ನು ನಾನು ಉಪಯೋಗಿಸಿ ತುಂಬಾ ದಿನಗಳು ಆಗಿತ್ತು. ಅದನ್ನು ತೆಗೆದು ಕೊಂಡು ಬಂದಿದ್ದರು ಎನೂ ಪ್ರಯೋಜನ ಆಗುತ್ತಿರಲಿಲ್ಲ. ಏಕೆಂದರೆ ಅಷ್ಟು ಸುಮಧುರ ಪರಿಮಳ ಸೂಸುತಿತ್ತು. ಆಗ ತಾನೇ ಬೀಳುತ್ತಿದ್ದ ಮಂಜಿನ ಹನಿಗಳು ಮತ್ತು ಚಿಲಿಪಿಲಿ ಕಲರವ ನನಗೆ ಎಬ್ಬಿಸಿತ್ತು. ಎಚ್ಚರವಾದಾಗ ಶಿವಮೊಗ್ಗ ತಲುಪ್ಪಿದ್ದೆ. ಆ ಮಾಗಿಯ ಚಳಿಗೆ ನಾನು ನಡುಗುತ್ತಾ ಒಂದು ಕಪ್ ಕಾಫಿ ಹಿರಿ ಡೈರಿ ಬಸ್ ಹತ್ತಿದೆ.

ಹರ್ಷ ಅಗಲೆ ನನ್ನನ್ನು ಕಾಯುತ್ತಿದ್ದರು. ಡೈರಿಯವರೇ ನಮಗೆ ಒಂದು ಕ್ವಾರ್ಟರ್ಸ್(ಎಣ್ಣೆ ಅಲ್ಲ) ಕೊಟ್ಟಿದ್ದರು. ತುಂಬಾ ಚೆನ್ನಾಗಿ ಇತ್ತು ನಮ್ಮ ಕ್ವಾರ್ಟರ್ಸ್. ನಾನು ತುಂಬಾ ದಣಿವಾಗಿದ್ದರಿಂದ ಸ್ವಲ್ಪ ವಿಶ್ರಾಂತಿ ತೆಗೆದು ಕೊಂಡೆ. ಆಗ ಮಂಜುನಾಥ್ ಎದ್ದು ರೆಡೀ ಆಗಿ ಆಫೀಸ್ ಹೊರಡಲು ಅನುವಾದರೂ. ನಾನು ಮತ್ತೆ ಹರ್ಷ ಇನ್ನೂ ಮಲಗಿದ್ದೆವು.

ವಿಚಕ್ಷಣಾ ಆಯೋಗದ ವಿಲಕ್ಷಣ ಕನ್ನಡ!


  ’ವಿಚಕ್ಷಣಾ ಜಾಗೃತಿ ಸಪ್ತಾಹ’ದ ಅಂಗವಾಗಿ ’ಕೇಂದ್ರೀಯ ವಿಚಕ್ಷಣಾ ಆಯೋಗ’ವು ಡಿಎವಿಪಿ ಇಲಾಖೆಯ ಮೂಲಕ ಇದೇ ದಿನಾಂಕ ೨೫ರಂದು ಕನ್ನಡ ದಿನಪತ್ರಿಕೆಗಳಲ್ಲಿ ಪ್ರಕಟಿಸಿರುವ ಅರ್ಧ ಪುಟದ ಜಾಹಿರಾತಿನಲ್ಲಿ ಕನ್ನಡದ ಕಗ್ಗೊಲೆ ಮಾಡಲಾಗಿದೆ! ಅಲ್ಲಿ ಮುದ್ರಿತವಾಗಿರುವ ಕೆಲವು ಕನ್ನಡ ಪದಗಳು ಇಂತಿವೆ:
  ’ಬ್ರಷ್ಟಾಚಾರ, ಬೃಷ್ಟಾಚಾರ, ಆಂದೊಲನ, ಅಂದೊಲನ, ವಿಳಸ, ಗೊತ್ತುವಿಳಿ, ಜಾಗೃತೆ, ಜಾಗೃತಾ ಸಪ್ತಾಹ, ಜಾಗೃತ ಸಪ್ತಾಯ, ಆಭಿವೃದ್ಧಿ, ಸ್ಪೂರ್ತಿ, ನಿರಕ್ಷಿಸುತ್ತದೆ, ಅವದಿ, ಹೊರಾಟ, ಆಗತ್ಯವಾಗಿದೆ, ಪ್ರಚೊದಿಸುವದರ, ಹೊರಾಡುವಂತೆ, ತಿಳುವಳಿಕೆ, ಫೊಸ್ಟರ್‌ಗಳು, ಉಪಯೊಗಿಸುವ, ಆಡಳಿತೆ, ಸಾರ್ಮಥ್ಯ, ಆವಕಾಶ, ಅಗತ್ಯತೆ, ಆಯೊಗ, ಸುತ್ರಗಳನ್ನು.......’. ಹೀಗೆ ಸೂತ್ರವಿಲ್ಲದ ಗಾಳಿಪಟವಾಗಿ ವಿಚಕ್ಷಣಾ ಆಯೋಗದ ಕನ್ನಡ ವಿಜೃಂಭಿಸಿದೆ!