ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನೂರೊಂದು ನೆನಪು

ನೂರೊಂದು ನೆನಪು ಎದೆಯಾಳದಿಂದ ಹಾಡಿಗೆ ಸಾಹಿತ್ಯ ಬದಲಿಸಿದ್ದೇನೆ...ಒಳ್ಳೆಯ ಹಾಡನ್ನು ಹಾಳು ಮಾಡುತ್ತಿದ್ದೇನೆಂದು ಬೈದುಕೊಳ್ಳಬೇಡಿ..ಇದು ಕೇವಲ ಹಾಸ್ಯಕ್ಕಾಗಿ..


ನೂರೊಂದು ತಿಂಡಿ...ತಿನಬೇಕು ಇಂದು.. 

ಹಸಿವಾಗಿ ಬಂದೆ...ತಿನ್ನೋಕೆ ಬಂದೆ...

 ನೂರೊಂದು ತಿಂಡಿ...ತಿನಬೇಕು ಇಂದು.. 


ಹಸಿವಾಗಿ ಬಂದೆ...ತಿನ್ನೋಕೆ ಬಂದೆ...

ಬಿಸಿಬೇಳೆಬಾತು ಜೊತೆಯಲ್ಲಿ ಬೂಂದಿ

ಇಡ್ಲಿ, ವಡೆ ಪೊಂಗಲ್ಲು ಬೇಕೆಂದು ಇಂದು..


ನೂರೊಂದು ತಿಂಡಿ...ತಿನಬೇಕು ಇಂದು.. 

ಹಸಿವಾಗಿ ಬಂದೆ...ತಿನ್ನೋಕೆ ಬಂದೆ

 ಘಮ್ಮೆನ್ನೋ ದೋಸೆ,,ಆಲೂಗಡ್ಡೆ ಪಲ್ಯ

ಮದ್ದೂರು ವಡೆಯೋ..ಮೈಸೂರು ಪಾಕೋ...

ಬಿಸಿ ಬಿಸಿ ಪೂರಿ...ವೆಜಿಟೇಬಲ್ ಸಾಗು..

ಫ್ರೈಡ್ ರೈಸು,ಘೀ ರೈಸು ಎಲ್ಲಾನೂ ಚೈನೀಸು...

ತಿಂಡಿ ಬಿಸಿ ಇರಲಿ...ಪ್ಲೇಟು ಕ್ಲೀನಿರಲಿ..

ಪಿಡಿಎಫ್ ನಲ್ಲಿ ಕನ್ನಡ ಬರೆಯುವುದು ಹೇಗೆ ಅಥವಾ ಬರಹ ಕಡತವನ್ನು ಪಿಡಿಎಫ್ ಕಡತವಾಗಿ ಹೇಗೆ ಮಾಡುವುದು?

ನಮಸ್ಕಾರ,


 


ಒಂದು ಕನ್ನಡದ ಇ- ವಾರ್ತಾಪತ್ರ ತರಬೇಕಿದೆ. ಪಿಡಿಎಫ್ ಕಡತವಾದರೆ ಒಳ್ಳೆಯದು. ಉತ್ತಮ ಹಿನ್ನೆಲೆಯಲ್ಲಿ ಕನ್ನಡದ ಪದಗಳು ಹಾಗು ಸಂಬಂಧಿಸಿದ ಚಿತ್ರಗಳನ್ನು ಹಾಕಬೇಕಿದೆ.


ಹೇಗೆ ಮಾಡುವುದು ಎಂದು ಬಲ್ಲವರು ದಯವಿಟ್ಟು ತಿಳಿಸಿ.


 


ಧನ್ಯವಾದ

ಕಡ್ಡಾಯ ಮತದಾನವೇ ಪರಿಹಾರವಲ್ಲ!



ಇಂದಿನ ಈ ಭ್ರಷ್ಟ ರಾಜಕೀಯ ವ್ಯವಸ್ಥೆಯಲ್ಲಿ ಏನಾದರೂ ಸುಧಾರಣೆ ಆಗಬೇಕಾದರೆ ಕಡ್ಡಾಯ ಮತದಾನದ ಕಾನೂನು ಜಾರಿಯಾಗಬೇಕು ಎಂಬ ಮಾತುಗಳು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಕೇಳಿಬರುತ್ತಿವೆ. ಆದರೆ, ಕಡ್ಡಾಯ ಮತದಾನದಿಂದ, ಈ  ಕುಲಗೆಟ್ಟ ರಾಜಕೀಯ ವ್ಯವಸ್ಥೆಯಲ್ಲಿ ಕಿಂಚಿತ್ತಾದರೂ ಬದಲಾವಣೆ ಆದೀತೆನ್ನುವುದು ಕನಸಿನ ಮಾತು. ವಿದ್ಯಾವಂತರು ಮತನೀಡದೇ ಉಳಿಯುವುದರಿಂದ, ಯೋಗ್ಯ ಅಭ್ಯರ್ಥಿಗಳು ಚುನಾವಣೆಯಲ್ಲಿ ಸೋತು, ಅಯೋಗ್ಯರು ಗೆದ್ದುಬಂದಿದ್ದಾರೆನ್ನುವುದು ಸತ್ಯಕ್ಕೆ ದೂರವಾದ ಮಾತು.

ತಿಳಿದವನ ಪದಕೋಶದಲ್ಲಿ ಅಜ್ಞಾನಿಯ ಹೆಸರು, ಎರಡನೆಯವನ ಮೊಬೈಲಿನಲ್ಲಿ ಮೊದಲನೆಯವನ ಸಂಖ್ಯೆಯೋ ಇರುವುದಿಲ್ಲಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೨

(೨೬೬) ಮುಗ್ಧತೆಯನ್ನು ಕುರಿತ ಅಧ್ಯಯನವೂ ಸಹ ಜ್ಞಾನವೇ!


(೨೬೭) ಲೈನ್ ಮಾರೋಃ ತಿಳಿವಳಿಕೆಯುಳ್ಳವನ ಪದಕೋಶದಲ್ಲಿ ಅಜ್ಞಾನಿ ಇರುವುದಿಲ್ಲ. ಅಜ್ಞಾನಿಯ ವಿಳಾಸಪಟ್ಟಿಯಲ್ಲಿ ಪ್ರೌಢನ ಮೊಬೈಲ್ ನಂಬರ್ ಪತ್ತೆಯಾಗುವುದಿಲ್ಲ. ಆದ್ದರಿಂದ ನಿಮ್ಮ ಮೊಬೈಲ್ ಸಂಖ್ಯೆಯನ್ನು ಕೇಳುವುದರಲ್ಲಿ ತಪ್ಪೇನು?!


(೨೬೮) ಮಾಂಸದೊಳಗಿನ ಮಾಂಸವು ಕಾಮ. ಅದೇ ಮಾಂಸದೊಳಗೊಂದು ಲೋಹದ ಚೂರಿದ್ದರೆ ಅದು ಸಾವು ಸವರಿಹೋದ ದೇಹವೊಂದರ ಗುರುತು!


(೨೬೯) ಪಿತೃಪ್ರಾಧಾನ್ಯತೆಯು ಸ್ತ್ರೀವಾದದಿಂದ ಹುಟ್ಟಿಕೊಂಡದ್ದು. ಆ ಮುನ್ನ ಆ ಅಭ್ಯಾಸಕ್ಕೆ ಇನ್ನೂ ನಾಮಕರಣವಾಗಿರಲಿಲ್ಲವಷ್ಟೇ!

ಬಾಳಿನಿಂದ ಬೆಂಕಿಗೆ!

ಮದನನೆಂಬ ಬೆಸ್ತ ಭರದಿ ಹಾಕಿಹನು
ಹೆಣ್ಣೆಂಬ ಗಾಳವನು ಬಾಳಗಡಲಿನಲಿ;
ಅವಳ ತುಟಿಗಳ ಸೆಳೆತಕ್ಕೀಡಾದವರನು
ಹಾಕಿ ಹುರಿಯುವನು ಒಲವ ಬೆಂಕಿಯಲಿ!


ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ)

ವಿಸ್ತಾರಿತಂ ಮಕರಕೇತನಧೀವರೇಣ
ಸ್ತ್ರೀಸಂಜ್ಞಿತಂ ಬಡಿಶಮತ್ರ ಭವಾಂಬುರಾಶೌ
ಯೇನಾಚಿರಾತ್ತಧರಾಮಿಷಲೋಲ ಮರ್ತ್ಯ-
ಮತ್ಸ್ಯಾಸ್ವಿಕೃಷ್ಯ ಸ ಪಚತ್ಯನುರಾಗವಹ್ನೋ

 

-ಹಂಸಾನಂದಿ

 

ಕೊ: ಮೂಲದಲ್ಲಿರುವ ’ಮಕರಕೇತನ’ = ಮೊಸಳೆಬಾವುಟದವನು = ಮನ್ಮಥ ಅನ್ನುವುದನ್ನು ಸುಲಭವಾಗಿ ತಿಳಿಯಲೆಂದು ’ಮದನ’ನೆಂದೇ ಇರಿಸಿದ್ದೇನೆ.

ಒಡೆಯರು ಸಿಕ್ಕಿದರು!

ಒಡೆಯರು ಬಂಗಾರಪ್ಪ ಇರಬಹುದೇ?


-just ಈಗ ಅವರಿರುವ ಪಕ್ಷವನ್ನು ನಾನಲ್ಲ, ಪರಮೇಶ್ವರನಿಂದಲೂ ಸರಿಪಡಿಸಲು ಸಾಧ್ಯವಿಲ್ಲ. ಅದಲ್ಲದೇ ಅವರಿರುವುದು ಸೊರಬದಲ್ಲಿ, ನಾನು ಹೋಗುತ್ತಿರುವುದು ಸಾಗರ ಕಡೆಗೆ...ಸಾಗರದ MLA? ಛೇ..ಕಾಗೆಗೆ ಅಷ್ಟೂ ಬುದ್ಧಿಯಿಲ್ಲವಾ?