ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

CSLC ಚರ್ಚೆಯಿಂದ ಹೊರಬಂದ ಹಿಂದುತ್ವ, ಹಿಂದೂ ಮತ್ತಿತರ ವಿಷಯಗಳು...

ಬೇಡಬೇಡವೆಂದರೂ ಹಿಂದುತ್ವ ಬಿಡಲ್ಲ! :) ಅದಕ್ಕೇ ಸಿ ಎಸ್ ಎಲ್ ಸಿ ಚರ್ಚೆಯನ್ನು ದಾರಿತಪ್ಪಿಸುವುದರ ಬದಲಾಗಿ ಆ ಚರ್ಚೆಯನ್ನು ಇಲ್ಲಿ ಮುಂದುವರೆಸೋಣ ಅಂತ ಈ ಹೊಸ ಲೇಖನ. ಇಲ್ಲಿ ಶ್ರೀಯುತ ಕೇಶವ ಅವರ ವಾದದೊಂದಿಗೆ ಇದನ್ನು ಪ್ರಾರಂಭಿಸುತ್ತೇನೆ. ನಂತರ ನನ್ನ ಪ್ರತಿಕ್ರಿಯೆಯೂ ಇದೆ ಅನ್ನಿ :)

 

--

 

ಮೃತ್ಯುವಿನ ಚೆಲ್ಲಾಟ

ಮರಣದ ಸುತ್ತಮುತ್ತ ಎಂದು ಈಚೆಗೆ ನಾನು ಬರೆದ ಲೇಖನಕ್ಕೆ ಸಂಪದದಲ್ಲಿ ಸಿಕ್ಕ ಪ್ರತಿಕ್ರಿಯೆಗಳಿಗೆ ಪೂರಕವಾಗಿ ನಾನು ಹಿಂದೆ ಸುದ್ದಿಪತ್ರಿಕೆಯಲ್ಲಿ ಓದಿದ ಹಾಗು ಮುಂಚೆ ಕೇಳಿದ ಎರಡು ವಿಬಿನ್ನ ಘಟನೆಗಳನ್ನು ನಿಮ್ಮಗಾಗಿ ನಿರೂಪಿಸುತ್ತೇನೆ.

ಈ ‘ಅತಿಬುದ್ಧಿವಂತ’ರಿಗೆ ‘ತಬ್ಬಲಿತನ’ದ ಪರಿಕಲ್ಪನೆಯೂ ಇಲ್ಲವೇ?!

ಕಾಶ್ಮೀರ ಕಣಿವೆ ಎಂದೂ ಭಾರತದ ಅವಿಭಾಜ್ಯ ಅಂಗವಾಗೇ ಇರಲಿಲ್ಲ ಎಂಬ ನುಡಿ ಮುಕ್ತಕ ಉದುರಿಸುವ ಮೂಲಕ, ಭಾರತೀಯ ವಿಖ್ಯಾತ ಆಂಗ್ಲ ಲೇಖಕಿ ಅರುಂಧತಿ ರಾಯ್, ಅಂತಾರಾಷ್ಟ್ರೀಯ ಅಭಿಮಾನಿಗಳಿಂದ ’ಶಹಬ್ಬಾಶ್‌ಗಿರಿ’ ಗಿಟ್ಟಿಸುವ ಪ್ರಯತ್ನ ಮಾಡಿದರು.


‘ಭೇಷ್’, ‘ಭೇಷ್’ ಎನ್ನಿಸಿಕೊಳ್ಳಲು ತಮ್ಮ ಬುದ್ಧಿ-ಭಾವಗಳನ್ನೇಲ್ಲಾ ಮುಡಿಪಿಟ್ಟು ತಿಣಕುವುದು ಕೆಲ ಕವಿ-ಕಲಾಕಾರ-ಸಾಹಿತಿವರೇಣ್ಯರ ಚಟ. ಅದು ಅವರ ಖುಷಿ. ಆದರೆ ಆ ಅಹಮಹಿಕೆಯಲ್ಲಿ, ಸಾಮಾಜಿಕಾರ್ಥಿಕ ರಾಜಕೀಯ ಪ್ರಚಲಿತಗಳ ಸಾಮಾನ್ಯ ಜ್ಞಾನ, ಜವಾಬ್ದಾರಿ ಪ್ರಜ್ಞೆಗಳಾದರೂ ಇರಬೇಡವೇ?

ನೆನಪಿನ ಬುತ್ತಿ:: ಟ್ರೈನ್ ಪಯಣ

ಟ್ರೈನ್ ಪಯಣ

ಪ್ರಾಥಮಿಕ ಶಾಲೆ ಊರಲ್ಲಿ ಆದ ಬಳಿಕ ನನ್ನನ್ನು ಮಂಗಳೂರಿನ ಕೆನರಾ ಹೈ ಸ್ಕೂಲ್ ಗೆ ಸೇರಿಸಿದ್ದರು. ೮ ನೇ ತರಗತಿಯಿಂದ ಮಂಗಳೂರು - ಕಾಸರಗೋಡು ದಿನನಿತ್ಯದ ಸವಾರಿ ಆಗಿತ್ತು. ನನ್ನ ಬಾಲ್ಯದ ತುಂಬಾ ಅಮೂಲ್ಯ ಗಳಿಗೆಯಲ್ಲಿ ದೈನಂದಿನದ ಮಂಗಳೂರು ಪ್ರಯಾಣ ಅದರದ್ದೇ ಆದ ವೈಶಿಷ್ಟ್ಯ ಹೊಂದಿದೆ. ಬೆಳಗ್ಗೆ ೭ :೩೦ ಕ್ಕೆ ಕುಂಬಳೆ ಇಂದ ಒಂದು ಪಸಿನ್ಜೆರ್ ಟ್ರೈನ್ ನಲ್ಲಿ ನಮ್ಮ ದಿನಚರಿ ಶುರುವಾಗುತ್ತಿತ್ತು. ಕುಂಬಳೆ ಇಂದ ನಾನು ಸೇರಿದಂತೆ ರಾಘು,ಚರಣ್ ,ಅಭಿ ಮತ್ತು ಜಯಪ್ರಕಾಶ್ ೫ ಜನರ ಗುಂಪು ಪ್ರತಿದಿನ ಮಂಗಳೂರಿಗೆ ಬರುವುದು.

ಬುದ್ಧಿ ಜೀವಿ ಮತ್ತು ವಾದ

ನಾನು ’ಆ’ವಾದಿ, ನಾನು ’ಈ’ವಾದಿ


 ಏನಿದು ಹೊಸಥರ ತಗಾದಿ?


 ನನ್ನದು ಆ ಪ೦ಥ ನನ್ನದು ಈ ಪ೦ಥ


 ಹೊಲ ಮೇಯ್ದ ಮೇಲೆ ಉಳಿದವನು ಸ೦ತ


 ಸತ್ಯಕ್ಕೊ೦ದಿಷ್ಟು ಬೆ೦ಕಿ ಹಚ್ಚಿ,


 ಒಡಾಡೋಣ ಕದ್ದು ಮುಚ್ಚಿ.


 ಸಾಕು ನಮಗೆ ನಮ್ಮ ಬದುಕು


 ದೇವರು, ಧರ್ಮ ಸತ್ತರೆ ಸಾಯಲಿ ಬಿಡು,


 ಹಿತ್ತಳೊಳಗಿನ ಬಳ್ಳಿ ಕಹಿ;


 ಉ೦ಡಾಡಿ, ಓಡಾಡಿ ಆಯ್ತು


 ಮನೆಯೊಳಗೆ ಬೆಚ್ಚಗೆ ಕೂತರಷ್ಟೇ ಸುಖ.


 ೨


 'ಅಯ್ಯೋ'! ಕೂಗಿಗೆ ಬೆಚ್ಚಿ ಬಿದ್ದು


 


ಎಚ್ಚೆತ್ತು ನೋಡಿದರೆ, ಮನೆಯಾಕೆ


 


’ಜಿರಳೆ’ ಎ೦ದು ಕಿಸಕ್ಕನೆ ನಕ್ಕಳು.


 ಮತ್ತೆ ಅಯ್ಯೋ! ಕೂಗು ಮನೆಯಾಕೆಯದಲ್ಲ.


 ಅಲ್ಲವಲ್ಲ! ಸುಮ್ಮನಿರು ಸಾಕು


 ಕಟ್ಟಿದ ಜೇಡರ ಬಲೆ ತೆಗೆದು


 ಹೊರಹಾಕಲೂ ಸೋಮಾರಿತನ.


 ಇದ್ದರೆ ಇರಲಿ ಬಿಡು

ಕೌನ್ ಬನೇಗಾ ಬೇಕಾರ್ ಪತಿ

ಲೇ ನೋಡ್ರಲಾ ಇಲ್ಲಿ. ನಂಗೆ ಅಮಿತಾಬ್ ಬಚ್ಚನ್ ಕೌನ್ ಬನೇಗ ಕರೋಡ್ ಪತಿಯಿಂದ ಲೆಟರ್ ಬಂದೈತೆ ಅಂಗೇ ಕನ್ನಡದಾಗೆ ಪ್ರಸ್ನೆ ಕೇಳ್ತಾರಂತೆ ಅಂದ ಗೌಡಪ್ಪ. ಮತ್ತೆ ಯಾವಾಗ ಹೋಗೋದು. ನಾಳೆನೆ ಕಲಾ. ನೀನು ಬಾರಲಾ ಅಂದ ನಂಗೆ. ಸರಿ ಬೆಂಗಳೂರಿಂದ ಬಾಂಬೆಗೆ ಅಂತ ಟ್ರೈನ್ ಹತ್ತಿದ್ವಿ. ಗೌಡಪ್ಪ ಸುಮ್ನೆ ಯಾವದೋ ಸೀಟ್ನಾಗೆ ಹೋಗಿ ಮಕ್ಕೊಂಡ. ಅಟ್ಟೊತ್ತಿಗೆ ಬಂದ ಟಿ.ಟಿ ಎಲ್ರಿ ನಿಮ್ಮ ರಿಸರ್ವೇಷನ್ ಟಿಕಟ್ ಅಂದ. ತೋರಿಸಿದ್ರೆ ನಿಮ್ಮ ನಂಬರ್ ಮೊದಲನೆ ಬೋಗಿಯಲ್ಲಿ ಐತೆ ಹೋಗಿ ಅಂದ. ನಾವಿದ್ದದ್ದು 32ನೇ ಬೋಗಿಯಲ್ಲಿ. ನಮ್ಮ ಸೀಟಿಗೆ ಹೋಗೋಷ್ಟತ್ತಿಗೆ 2ಗಂಟೆ ಬೇಕಾಗಿತ್ತು. ಗೌಡಪ್ಪ ಇವತ್ತು ವಾಕಿಂಗ್ ಮಾಡೋದು ತಪ್ತು ಬುಡಲಾ ಅಂದ. ನಡೆದಿದ್ದ ಸುಸ್ತಿಗೆ ಮಕ್ಕೊಂಡ್ರೆ ಮಾರನೆ ದಿನಾ ಎಚ್ಚರ ಆಗಿತ್ತು. ಬೀಡಿ ಸೇದಿ ದಂಡ ಕಟ್ಟಿದ್ದ.

ಸಾಯುವ ಆಸೆ ಇಲ್ಲದಿರುವುದರಿಂದಲೇ ಅದರಾಚೆಗಿನದು ಎಂದಿಗೂ ನಿಗೂಢಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೩

(೨೭೧) ಒಮ್ಮೆಲೆ ಅತ್ಯಂತ ಸಂತಸದಿಂದಿರುವ ಮತ್ತು ದುಃಖಿತನಾಗಿರುವ ಕನಿಷ್ಠಪಕ್ಷ ಒಬ್ಬ ವ್ಯಕ್ತಿಯಾದರೂ ನನಗೆ ಗೊತ್ತುಃ ಕ್ರಮಬದ್ಧವಾಗಿ ಆ ವ್ಯಕ್ತಿ ’ಮತ್ತೊಬ್ಬರ ಪ್ರಕಾರದ’ ನೀವು ಮತ್ತು ’ನಿಮ್ಮ ಪ್ರಕಾರದ’ ನೀವು. ಇದು ತಿರುವು ಮರುವಾದರೆಷ್ಟು ಚೆನ್ನ!


(೨೭೨) "ನನಗೆ ಗೊತ್ತಿಲ್ಲ ಎಂಬುದು ನನಗೆ ತಿಳಿದಿದೆ" ಎಂಬ ಮನೋಭಾವಕ್ಕಿಂತಲೂ "ನನಗೆ ಗೊತ್ತಿದೆ ಎಂಬುದು ನನಗೆ ತಿಳಿದೇ ಇರಲಿಲ್ಲ" ಎಂಬ ಮನೋಭಾವವು ಹೆಚ್ಚೋ, ಕಡಿಮೆಯೋ ಎಂಬುದನ್ನು ನಿರ್ಧರಿಸುವುದು ಹೇಗೆ ಎಂಬುದು ನನಗೆ ಗೊತ್ತಿದೆಯೋ ಇಲ್ಲವೋ ತಿಳಿಯದಾಗಿದೆ!


(೨೭೩) ಯಾರಿಗೂ ಸಾಯುವ ಇಚ್ಛೆ ಇಲ್ಲದಿರುವುದರಿಂದಲೇ ಅದರಾಚೆ ಏನಿದೆ ಎಂಬುದು ನಮಗಿನ್ನೂ ತಿಳೀಯದಾಗಿರುವುದು!

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ!

ನಾನು ಆಫೀಸ್ನಿಂದ ಬರುವ ಸಮಯದಲ್ಲಿ ಚಾಮರಾಜ್ ಪೇಟೇ ಸಮೀಪ ಇರುವ ಹೋಟೆಲ್ ಹೊಕ್ಕೆ. ನಾನು ಇಡ್ಲಿ ತಿನ್ನುತ್ತಾ ಇದ್ದಾಗ ನನ್ನ ಹಿಂದೆ ಇರುವ ವ್ಯಕ್ತಿ ಬಿಸ್ಲೆರಿ ಇದೆಯಾ? ಎಂದು ಕೇಳಿದ. ಅದಕ್ಕೆ ಅಂಗಡಿಯವನು ಇಲ್ಲ ಎಂದ. ಹೋಗಲಿ ಚಟ್ನಿ ಹಾಕಿ ಎಂದು, ಚಟ್ನಿ ಹಾಕಿಸಿಕೊಂಡು ಇಡ್ಲಿ ತಿಂದು ಹೋದ. ನನಗೆ ಆಶ್ಚರ್ಯ ಚಟ್ನಿ ತಿಂದರೆ ಬಾಯಾರಿಕೆ ಹೋಗುತ್ತಾ? ಎಂದು. ಕಡೆಗೆ ಅಲ್ಲೇ ಇದ್ದ ನೀರನ್ನು ಕುಡಿದ. ಮತ್ತೆ ಅವನ ಫೋನ್ ರಿಂಗ್ ಆದ ಹಾಗೆ ಆಯಿತು. "ಹಲ್ಲು" ಎಂದು ಮಾತನಾಡಿದ. ಅಲ್ಲಿಂದ ಉತ್ತರ ಬರಲಿಲ್ಲ. ಅದು ಕರೆ ಆಗಿರದೇ, ಅಲಾರಂ ಆಗಿತ್ತು. ತನ್ನ ಬಳಿ ವಾಚ್ ಇದ್ದರು ನನಗೆ ಟೈಮ್ ಎಷ್ಟು ಎಂದು ಕೇಳಿದ. ಮತ್ತೆ ಅವನಿಗೆ ಒಂದು ಫೋನ್ ಬಂದಿತು. ಅದರಲ್ಲಿ ಯಾವಾಗ ನಾಳೆ ಬರುತ್ತಿಯಾ? ಎಂದು ಕೇಳಿದ. ಬಹುಶಃ ಅವನ ಹೆಂಡತಿಯದು ಎಂದು ಕಾಣುತ್ತೆ. ತಡಬಡಿಸಿ ಹೊರಟು ಹೋದ. ಹೆಂಡತಿ ಅಂದರೆ ಭಯ-ಭಕ್ತಿ ಎಂದು ಕಾಣುತ್ತೆ. ನಾನು ತಿಂಡಿ ತಿಂದು ನನ್ನ ಸ್ಕೂಟರ್ ಏರಿದೆ.