ನೆನಪಿನ ಬುತ್ತಿ:: ಟ್ರೈನ್ ಪಯಣ

ನೆನಪಿನ ಬುತ್ತಿ:: ಟ್ರೈನ್ ಪಯಣ

ಟ್ರೈನ್ ಪಯಣ

ಪ್ರಾಥಮಿಕ ಶಾಲೆ ಊರಲ್ಲಿ ಆದ ಬಳಿಕ ನನ್ನನ್ನು ಮಂಗಳೂರಿನ ಕೆನರಾ ಹೈ ಸ್ಕೂಲ್ ಗೆ ಸೇರಿಸಿದ್ದರು. ೮ ನೇ ತರಗತಿಯಿಂದ ಮಂಗಳೂರು - ಕಾಸರಗೋಡು ದಿನನಿತ್ಯದ ಸವಾರಿ ಆಗಿತ್ತು. ನನ್ನ ಬಾಲ್ಯದ ತುಂಬಾ ಅಮೂಲ್ಯ ಗಳಿಗೆಯಲ್ಲಿ ದೈನಂದಿನದ ಮಂಗಳೂರು ಪ್ರಯಾಣ ಅದರದ್ದೇ ಆದ ವೈಶಿಷ್ಟ್ಯ ಹೊಂದಿದೆ. ಬೆಳಗ್ಗೆ ೭ :೩೦ ಕ್ಕೆ ಕುಂಬಳೆ ಇಂದ ಒಂದು ಪಸಿನ್ಜೆರ್ ಟ್ರೈನ್ ನಲ್ಲಿ ನಮ್ಮ ದಿನಚರಿ ಶುರುವಾಗುತ್ತಿತ್ತು. ಕುಂಬಳೆ ಇಂದ ನಾನು ಸೇರಿದಂತೆ ರಾಘು,ಚರಣ್ ,ಅಭಿ ಮತ್ತು ಜಯಪ್ರಕಾಶ್ ೫ ಜನರ ಗುಂಪು ಪ್ರತಿದಿನ ಮಂಗಳೂರಿಗೆ ಬರುವುದು.

ಮೊದಲಿನಲ್ಲಿ ಟ್ರೈನ್ ನ ಒಳಗೆ ಕೂತು ಪ್ರಯಾಣಿಸುತ್ತಿದ್ದೆವು, ಕೆಲವೊಮ್ಮೆ ಟ್ರೈನ್ ನ  ಡೋರ್ ಪ್ರಯಾಣವೂ ಮಾಡಿದುಂಟು.ಸಂಜೆ ಹೆಚ್ಚಾಗಿ ಉಪ್ಪಳ ಸ್ಟೇಶನ್ ನಿಂದ ಕುಂಬಳೆ ವರೆಗೆ ಡೋರ್ ನಲ್ಲಿನಿಲ್ಲುವುದು ಅಭ್ಯಾಸವಾಗಿತ್ತು. ಟ್ರೈನ್ ಮುಂದೆ ಸಾಗಲು ಹಿಂದೆ ತೂರಿಬರುವ ಗಾಳಿಗೆ ಮುಖ ಒಡ್ಡಲು ಏನೋ ಖುಷಿ, ತುಂತುರು ಮಳೆ ಬೀಳುತಿರಲು ಆ ಅನುಭವ ಅನುಭವಿಸಿದವರಿಗೆ ಮಾತ್ರ ಗೊತ್ತು. ಮನೆಯಿಂದ ಹೊರಡಬೇಕಾದರೆ ದಿನಾಲು ಮನೆಯಲ್ಲಿ ಡೂರಲ್ಲಿ ನಿಲ್ಲಬೇಡ ಎಂದು ಹೇಳುತ್ತಾನೆ ಇದ್ದರು, ಆದರೆ ಹುದುಗಾಟಿಕೆಗೆ ಮನ ಹಾತೊರೆಯುತ್ತಿತ್ತು ವಿನಃ ಇವರ ಮಾತನ್ನು ತಲೆಗೆ ಹಾಕಲು ಮುಂದಾಗುತಿರಲಿಲ್ಲ.

ಒಂದು ಸಂಜೆ ಹೀಗೆ ತುಂತುರು ಮಳೆ ಬೀಳುತ್ತಿತ್ತು, ಉಪ್ಪಳ ಸ್ಟೇಷನ್ ದಾಟಿದಂತೆ ನಾನೂ, ಅಭಿ ಡೋರ್ ನಲ್ಲಿ ಬಂದು ನಿಂತು ಕೊಂಡಿದ್ದೆವು, ಹಾಗೆ ಮಳೆಯ ಹನಿ ಸವೆಯುತ್ತಾ ಕುಂಬಳೆ ಬಂದದ್ದೆ ಗೊತ್ತಾಗಲಿಲ್ಲ. ಎಂಜಿನ್ ಡ್ರೈವರ್ ಬ್ರೇಕ್ ಹಾಕಿದ, ಟ್ರೈನ್ ಟ್ರಾಕ್ ಬದಲಾಯಿಸುತ್ತಾ ಪ್ಲಾಟ್ಫಾರ್ಮ್ ನಲ್ಲಿ ಮೇಲಾನೆ ಚಲಿಸಲಾರಂಬಿಸಿತು, ನಮ್ಮ ಹಿಂದೆ ಕುಂಬಳೆಯಲ್ಲಿ ಇಳಿಯಬೇಕಾದವರೆಲ್ಲ ಸೇರಲಾರಂಬಿಸಿದರು, ಇನ್ನು ಟ್ರೈನ್ ನಿಂತಿರಲಿಲ್ಲ ನಮ್ಮ ಬೋಗಿ ಆಗಲೇ ಕುಂಬಳೆ ಮೇನ್ ಗೇಟ್  ದಾಟಿ ಮುಂದೆ ಹೋಗುತ್ತಲೇ ಇತ್ತು. ನಮಗಿನ್ನು ಟ್ರೈನ್ ಹೊಸದು ರನ್ನಿಂಗ್ ನಲ್ಲಿ ಇಳಿದು ಗೊತ್ತಿರಲಿಲ್ಲ, ಹಿಂದೆ ಇದ್ದವನಿಗೆ ಅದ್ಯಾಕೋ ಅವಸರವಾಯಿತು ತಿಳಿಯಲಿಲ್ಲ, ನನ್ನನ್ನು ಇಳಿಯುವಂತೆ ಹೇಳಿದ, ನಾನೂ ಒಲ್ಲೆನೆಂದಾಗ ಅವನು ಬದಿಯಿಂದ ಇಳಿಯಲು ನೋಡಿದ, ಈ ಹೊತ್ತಿಗೆ ನನ್ನ ಕಾಲು ಟ್ರೈನ್ ನ ಮೆಟ್ಟಲಿನಿಂದ ತಪ್ಪಿತು,ಒಂದು ಕೈಯಲ್ಲಿ ಟಿಫನ್ ಬ್ಯಾಗ್, ಇನ್ನೊಂದು ಕೈ ಇಂದ ನನ್ನನ್ನು ನಾನೂ ಸಂಬಾಳಿಸುವುದು ಕಷ್ಟ ವಾಯಿತು, ಮಳೆಯಿಂದ ಕೈಯ ಹಿಡಿತವು ಜಾರಿತ್ತು , ಟ್ರೈನ್ ಹಂಗೆ ಚಲಿಸುತ್ತಿರಲು ನಾನೂ ಬೋರಲಾಗಿ ಕೆಳಗೆ ಬಿದ್ದೆ.ಬದಿಯಲ್ಲಿ  ಟಿಫನ್ ಬ್ಯಾಗ್ ,ಬೆನ್ನಮೇಲಿದ್ದ ಬ್ಯಾಗ್ ನ ಭಾರಕ್ಕೆ ಬೆನ್ನಮೇಲೆ ಇನ್ನೂ
ಬಹಳವಾದ ಹೊಡೆತ ಬಿದ್ದಂತಾಗಿತ್ತು. ಕಾಲಿಗೆ ಮತ್ತು ಕೈ ಗೆ ಸಣ್ಣ ಪುಟ್ಟ ಗಾಯಗಳಾಗಿತ್ತು.

ಅಂದಿನಿಂದ ಟ್ರೈನ್ ಸಂಪೂರ್ಣವಾಗಿ ನಿಂತ ಬಳಿಕವೇ ಸೀಟ್ ನಿಂದ ಏಳಲಾರಂಬಿಸಿದೆ, ಈಗ ಟ್ರೈನ್ ಪ್ರಯಾಣ ಬೋರ್ ಎನಿಸಲಾರಂಬಿಸಿತು. ಮನೆಯಲ್ಲಿ tv  ನೋಡಲು ಸಮಯಸಿಗಬೇಕೆಂದು ಮನೆಗೆಲಸ, ಅಸಾಯಿಂಮೆಂಟ್ ಎಲ್ಲ ಟ್ರೈನ್ ನಲ್ಲಿ ಮಾಡಲಾರಂಬಿಸಿದೆವು.ಕೆಲವೊಮ್ಮೆ ಟ್ರೈನ್ ತುಂಬಿರುವಾಗ ಸೀಟ್ ಸಿಕ್ಕುತಿರಲಿಲ್ಲ ಅಂತಃ ಸಮಯದಲ್ಲಿ ನಿಂತುಕೊಂಡೆ ಕೋಪಿ ಬರೆದು ಮಾರನೆ ದಿನ ಮೇಷ್ಟ್ರ ಕೈಯಲ್ಲಿ ೧ ರ ಬದಲಾಗಿ ೫ ಪೇಜ್ ಹೆಚ್ಚುವರಿ ಬರೆದದ್ದು ಉಂಟು.

ಶಾಲೆಯಲ್ಲಿ ಗೇಮ್ಸ್ ಪಿರೇಡ್ ಇದ್ದ ದಿನ ಸುಸ್ತಾಗಿಬರುತಿದ್ದ ನಮಗೆ ಟ್ರೈನ್ ಹತ್ತುತಿದ್ದಂತೆ ನಿದ್ದೆಯೂ ಹತ್ತುತಿತ್ತು. ನಮ್ಮೊಂದಿಗೆ ಬಂದವರು ನಮ್ಮ ಸ್ಟೇಶನ್ ಬಂದಾಗ ಎಬ್ಬಿಸಿದರೆ ಮಾತ್ರ ನಾವು ಮನೆ ತಲುಪಬಹುದಿತ್ತು ಇಲ್ಲವಾದರೆ ಟ್ರೈನ್ ನೊಂದಿಗೆ ಕಣ್ಣುರು ತಲುಪುವುದು ನಿಶ್ಚಿತ , ಆದಕಾರಣ ಒಂಟಿ ಪ್ರಯಾಣ ಮಾಡವ ಸಮಯದಲ್ಲಿ ಅದೆಷ್ಟು ನಿದ್ದೆ ಬಂದರು ಕಣ್ಣು ಮುಚ್ಚುತಿರಲಿಲ್ಲ , ಪ್ರತಿ ೫ ನಿಮಿಷಕ್ಕೆ ಮುಖ ತೊಳೆದು ಬಂದು ಕಿಟಿಕಿಯಿಂದ ಹೊರ ಸೌಂದರ್ಯ ವೀಕ್ಷಿಸುತ್ತಿದ್ದೆ, ಮತ್ತೆ ಡೋರ್ ಪ್ರಯಾಣಕ್ಕೆ ಮನ ಮಿಡಿಯುತಿರಲಿಲ್ಲ.

ಒಮ್ಮೆ ನಮ್ಮೊಂದಿಗೆ ಬರುತಿದ್ದ ನಮ್ಮ ಜೂನಿಯರ್ ಅಜಯ್ ಮೊದಲ ಟ್ರೈನ್ ಮಿಸ್ ಮಾಡಿಕೊಂಡ, ಬಳಿಕದ ಟ್ರೈನ್ ಹಿಡಕೊಂಡ. ಅದು ಮಲಬಾರ್ ಎಕ್ಸ್ ಪ್ರೆಸ್, ಹತ್ತಿದ ಹುಡುಗನಿಗೆ ಯಾವಾಗ ನಿದ್ದೆ ಹತ್ತಿತೋ ಗೊತ್ತಿಲ್ಲ.... ಒಂಟಿ ಬೇರೆ.... , ಕಾಂಜನ್ಗಾಡ್ ತಲುಪಿದಾಗ ಎಚ್ಚರ ಆಯಿತಂತೆ, ಮತ್ತೆ ಕುಂಬ್ಳೆ ತಲುಪುವಾಗ ೧೨ ದಾಟಿತ್ತು.

ಟ್ರೈನ್ ನಲ್ಲಿ ನಮ್ಮಂತೆ ಹಲಯಾರು ವಿದ್ಯಾರ್ಥಿ, ವ್ಯಾಪಾರಿಗಳು ದೈನಂದಿನ ಸಂಚರಿಸುತ್ತಿದ್ದರು, ಅವರನ್ನು ಅನುಸರಿಸಿದ ನಾವೂ ಟ್ರೈನ್ ನಲ್ಲಿ ಟೈಮ್ ಪಾಸು ಮಾಡಲು ಇಸ್ಪೀಟ್ ಆಡುವಂತಹ ಕೆಟ್ಟ ಚಾಳಿಯೂ ಆರಂಬಿಸಿದೆವು, ಅಲ್ಲೇ ಇಸ್ಪೀಟ್ ನ ಬಹುತೇಕ ಆಟ ಆಡಲು ಕಲಿತದ್ದು.ಇಸ್ಪೀಟ್ ಅಲ್ಲದೆ ಲುಡೋ, WWF ಕಾರ್ಡ್ಸ್, ಕ್ರಿಕೆಟ್ ಕಾರ್ಡ್ಸ್ , ಚೆಸ್ ಆಡುತಿರಬೇಕಾದರೆ ಕಿವಿಗೆ ಚಾಯ್ ಚಾಯ್ ಎಂಬ ಧ್ವನಿ ಮುದ ನೀಡುತ್ತಿತ್ತು.ಬೇಡಲು ಬರುತಿದ್ದ ಅದೆಷ್ಟೋ ಮಕ್ಕಳು, ಅಂಗವಿಕಲರು ನಮ್ಮ ಟಿಫನ್ ಡಬ್ಬದಲ್ಲಿನ ಪಾಲನ್ನು ಪಡೆದದ್ದು ಉಂಟು.

೧೦ ನೇ ತರಗತಿ  ತಲುಪುತಿದ್ದಂತೆ ಟ್ಯುಶನ್, ಸ್ಪೆಷಲ್ ಕ್ಲಾಸ್ ಎಲ್ಲ ಆರಂಭವಾಯಿತು, ನಮ್ಮ ಸಂಭ್ರಮದ ಟ್ರೈನ್ ಪಯಣವು ನಿಂತು ಹೋಯಿತು.

ಕಾಮತ್ ಕುಂಬ್ಳೆ

 

 

 

ಹಿಂದಿನ ತುತ್ತು : http://sampada.net/blog/kamathkumble/25/10/2010/28675

Rating
No votes yet

Comments