ಯೋಚಿಸಲೊ೦ದಿಷ್ಟು... ೧೫
- Read more about ಯೋಚಿಸಲೊ೦ದಿಷ್ಟು... ೧೫
- Log in or register to post comments
ಬರೆಯಲಾರೆ ಕನ್ನಡ,
ನುಡಿಯಲಾರೆ ಕನ್ನಡ,
ಎನೋ ಹೇಗೋ ಬರೆದರೂ
ಅರ್ಥವಾಗದು ಕನ್ನಡ,
ಅದಕ್ಕಾಗೆ ಈ ಸಂಪದ,
ಬರಿಯಿರಿ ಇಲ್ಲಿ ನಿಮ್ಮ ಪದ,
ಇಲ್ಲಿ ಎಲ್ಲರಿಗೊ ಆಸ್ಪದ
ಇದೇ ಕನ್ನಡಿಗರ ಜನಪದ
ನಾವು ಬರೆದೆವು ನಮ್ಮ ಪದ,
ನೀಡಿಹರು ನಮಗೆ ಪ್ರಬುದ್ದತೆಯ ಪ್ರತಿ ಪದ,
ಅದೇ ನಮಗೆ ಸು ಸಂಪದ,
ಅದರಿಂದ ನಮಗೆ ದೊರಕಿತು ಕನ್ನಡದ ಸುಗಂದ
ಆದೇವು ಎಲ್ಲರೂ ಕನ್ನಡಿಗರು,
ಆಗಬಾರದು ನಾವ್ ಪರಭಾಷಿಗರು,
ನಾವೆಲ್ಲರೊ ಈಗ ಸಂಪದಿಗರು
ಈಗೆಲ್ಲಾ ನಾವು ಒಂದೇ ಕುಟುಂಬದವರು.
ಮಿಂಚಂಚೆಯಲ್ಲಿ ಬಂದದ್ದು...ಕನ್ನಡಕ್ಕೆ ಅನುವಾದಿಸಿದ್ದೇನೆ...
ನಾನು ನನ್ನ ಗಿಡಗಳಿಗೆ ನೀರು ಹಾಕೋಣ ಎಂದು ಹೊರಟೆ.
ಓ ಮುಂಜಾವಿನ ಉದಯರವಿಯೇ..
ನಿನ್ನ ಆಗಮನಕ್ಕೆ ಕಾಯುತಿದೆ ಭೂರಮೆಯು..
ನಿನ್ನ ಕಿರಣಗಳು ಬಿದ್ದೊಡನೆ ಶುರುವಾಗುವುದು
ಹಕ್ಕಿ ಪಕ್ಷಿಗಳ ಚಿಲಿಪಿಲಿ ಕಲರವ..
ಹೂಮೊಗ್ಗುಗಳು ತನ್ನ ಮೈಮೇಲಿನ ಮಂಜಿನ
ಹನಿಗಳ ಹೊದಿಕೆಯನ್ನು ಕೊಡವಿ ಅರಳುವುದು..
ಬೆಳ್ಳಕ್ಕಿಗಳು ಸಂಭ್ರಮದಿಂದ ಹಾರುವುದು..
ಚಿಗುರೆಲೆಗಳಿಗೆ ಚಿಗುರೊಡೆವ ಸಂಭ್ರಮ..
ಎಲ್ಲದಕ್ಕೂ ನೀನೆ ಮೂಲಕಾರಣವಾದರೂ..
ತಡಮಾಡುವೆ ಏಕೆ,,ಮೂಡಬಾರದೆ ನೀ
ಮೂಡಣದ ಬಾಗಿಲಿನಿಂದ ಕತ್ತಲೆಂಬ ತೆರೆಯ ಸರಿದು
ಓ ಮುಂಜಾವಿನ ಉದಯರವಿಯೇ..
ಕನ್ನಡದ ಬಗ್ಗೆ ಕೆಲವು ವಿಶೇಷತೆಗಳು...ಮಿಂಚಂಚೆಯಲ್ಲಿ ಬಂದದ್ದು...ಮುಂಚೆಯೇ ಓದಿರಬಹುದು ಓದಿಲ್ಲದಿದ್ದರೆ ಒಮ್ಮೆ ಓದಿ..
೧. ಭಾರತದಲ್ಲೇ ಹಳೆಯ ಮೂರನೆ ಭಾಷೆ ಕನ್ನಡ ( ಸಂಸ್ಕ್ರುತ ಹಾಗು ತಮಿಳಿನ ನಂತರ)
೨. ಕನ್ನಡ ೨೦೦೦ ವರ್ಷಗಳಷ್ಟು ಹಳೆಯದು.
೩. ಕನ್ನಡ ಭಾಷೆ ೯೯.೯೯ ಪ್ರತಿಶತ ಸರಿಯಾದ ಭಾಷೆ
೪. ಕನ್ನಡಕ್ಕೆ ಮಾತ್ರ ೭ ಜ್ನಾನಪೀಠ ಪ್ರಶಸ್ತಿ ಬಂದಿದೆ. (ಹಿಂದಿ - ೬, ತೆಲುಗು - ೨, ಮಲಯಾಳ - ೩, ತಮಿಳು - ೨)
೫. ಶ್ರೀ ವಿನೋಬಾ ಭಾವೆಯವರು ಕನ್ನಡವನ್ನು ಲಿಪಿಗಳ ರಾಣಿ ಎಂದು ಕರೆದಿದ್ದಾರೆ.
೬. ಅಂತರ್ರಾಷ್ಟ್ರೀಯ ಭಾಷೆಯಾದ ಆಂಗ್ಲ ಭಾಷೆಗು ಕೂಡ ಸ್ವಂತ ಲಿಪಿಯಿಲ್ಲ..ರೋಮನ್ ಆಧಾರಿತವಾಗಿದೆ.
೭. ನಮ್ಮ ರಾಷ್ಟ್ರೀಯ ಭಾಷೆಯಾದ ಹಿಂದಿ ಕೂಡ
ದೇವನಾಗರಿ ಲಿಪಿಯ ಆಧಾರಿತವಾದದು.
ಜೀವನದಲ್ಲಿ
ಅನೇಕ ಸ೦ಗತಿಗಳು
ಪ್ರಶ್ನಿಸಲಾರದೇ
ಉಳಿಯುವುವು
ಅನೇಕ ಪ್ರಶ್ನೆಗಳು
ಉತ್ತರ ಕಾಣದೇ
ಕೊನೆಯಾಗುವುವು
ಕೆಲವು ಶಬ್ದಗಳು
ವ್ಯಕ್ತವಾಗದೇ ಕರಗುವುವು
ಕೆಲವು ಶಬ್ದಗಳು
ಕೇಳಿಸಿಕೊಳ್ಳದೆಯೇ
ಮಸುಕಾಗುವುವು
ಕೆಲವು ಕನಸುಗಳು
ಜೀವ೦ತವಾಗಿಯೇ
ಹೂಳಲ್ಪಡುತ್ತವೆ
....
ಅದನ್ನೇ ನಾವು
'ಜೀವನ' ವೆ೦ದು
ಕರೆಯುತ್ತೇವೆ....!
(ಸ್ಫೂರ್ತಿ)
ನಾಸಾದ ಮ೦ಗಳ ಗ್ರಹಕ್ಕೆ೦ದು ಸಿದ್ದಪಡಿಸಲಾಗುತ್ತಿರುವ ಕ್ಯುರಿಯಾಸಿಟಿ ರೋವರ್ರಿನ ಬೆಳವಣಿಗೆಯನ್ನು ಈಗ ಅ೦ತರ್ಜಾಲದಲ್ಲಿ ಲೈವ್ ಕಾಣಬಹುದು. ಈ ಕೆಳಕ೦ಡ ಕೊ೦ಡಿಯಲ್ಲಿ ನಾಸಾದ ವಿಜ್ನಾನಿಗಳು ರೋವರ್ ಸಿದ್ದಪಡಿಸುವುದನ್ನು ಕಾಣಿರಿ. ಇಲ್ಲಿ ಕೆಲಸ ನಡೆಯದ ವೇಳೆ ಕ್ಯುರಿಯಾಸಿಟಿಯ ಬಗ್ಗ್ರೆ ಹೆಚ್ಚಿನ ಮಾಹಿತಿ ಒದಗಿಸುವ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುತ್ತದೆ.
(೨೭೬) ಕುರೂಪಿಗಳ ಛಾಯಾಚಿತ್ರಣ ಬಹಳ ಸುಲಭ. ಆಕಸ್ಮಿಕವಾಗಿ ಯಾವುದೋ ಒಂದು ಕೋನದಿಂದ ಅವರು ’ಪರವಾಗಿಲ್ಲ’ ಎಂಬಂತೆ ಕಂಡುಬರುತ್ತಾರೆ. ಆದರೆ ಸುಂದರ ಮನುಷ್ಯರಲ್ಲಿನ ’ಮನುಷ್ಯ’ರನ್ನು ಸೆರೆಹಿಡಿದುಬಿಡಬಹುದೇ ವಿನಃ ಅವರ ’ಸೌಂದರ್ಯ’ವನ್ನು ಸೆರೆಹಿಡಿದುಬಿಡಲು ಹೇಗೆ ಸಾಧ್ಯ?!
(೨೭೭) ಕೆಲವರು ತುಂಬಾ ’ಚಿತ್ರ’ವತ್ತಾಗಿರುತ್ತಾರೆ. ಅಂದರೆ ಕೇವಲ ಛಾಯಾಚಿತ್ರಗಳಲ್ಲಿ ಮಾತ್ರ ಚಂದ ಕಾಣುತ್ತಾರೆ!
(೨೭೮) ಸ್ವರ್ಗದಿಂದ ಧರೆಗಿಳಿವ ಪವಿತ್ರಜಲವು ಕೊಳಕುಜನರ ಸ್ಪರ್ಶಿಸಿ ಅಪವಿತ್ರವಾಗುವುದನ್ನು ತಪ್ಪಿಸುವ ಸಾಧನವೇ ಛತ್ರಿ!
(೨೭೯) ಮದ್ಯದಲ್ಲಿ ಹರಿವ ನದಿಗಿಂತಲೂ ಭಿನ್ನಾಭಿಪ್ರಾಯಗಳಿಂದ ಬೇರ್ಪಡಿಸಲ್ಪಟ್ಟ ಎರಡು ಬೆಟ್ಟಗಳನ್ನು ಒಂದುಗೂಡಿಸುವ ಭಾವವೇ ಸೇತುವೆ!