ಗ್ರಹಿಕೆಯಾಚೆ...
ಜೀವನದಲ್ಲಿ
ಅನೇಕ ಸ೦ಗತಿಗಳು
ಪ್ರಶ್ನಿಸಲಾರದೇ
ಉಳಿಯುವುವು
ಅನೇಕ ಪ್ರಶ್ನೆಗಳು
ಉತ್ತರ ಕಾಣದೇ
ಕೊನೆಯಾಗುವುವು
ಕೆಲವು ಶಬ್ದಗಳು
ವ್ಯಕ್ತವಾಗದೇ ಕರಗುವುವು
ಕೆಲವು ಶಬ್ದಗಳು
ಕೇಳಿಸಿಕೊಳ್ಳದೆಯೇ
ಮಸುಕಾಗುವುವು
ಕೆಲವು ಕನಸುಗಳು
ಜೀವ೦ತವಾಗಿಯೇ
ಹೂಳಲ್ಪಡುತ್ತವೆ
....
ಅದನ್ನೇ ನಾವು
'ಜೀವನ' ವೆ೦ದು
ಕರೆಯುತ್ತೇವೆ....!
(ಸ್ಫೂರ್ತಿ)
Rating