ಮಸಾಲಾ ಬೆಂಡೆಕಾಯಿ
ಬೇಕಾಗುವ ಸಾಮಗ್ರಿಗಳು
1 ಚಮಚ ಎಣ್ಣೆ
1 ಚಮಚ ತುಪ್ಪ (ಇಷ್ಟಪಡುವವರು ಹಾಕಿಕೊಳ್ಳಬಹುದು)
ಸಣ್ಣಗೆ ಹೆಚ್ಚಿದ ಈರುಳ್ಳಿ
ಉಪ್ಪು
ಅರಿಶಿನ ಪುಡಿ
ಗರಂ ಮಸಾಲಾ ಪುಡಿ
ಖಾರದ ಪುಡಿ
ಜೀರಿಗೆ ಪುಡಿ
ದನಿಯಾ ಪುಡಿ
ಬೆಂಡೆಕಾಯಿ
ಮಾಡುವ ವಿಧಾನ
ಒಂದು ಬಾಣಲೆಗೆ ಎಣ್ಣೆ, ತುಪ್ಪ, ಈರುಳ್ಳಿ ಹಾಕಿ ಬೇಯಿಸಿಕೊಂಡು ಇದಕ್ಕೆ ಉಪ್ಪು, ಅರಿಶಿನ ಪುಡಿ, ಗರಂ ಮಸಾಲಾ, ಖಾರದ ಪುಡಿ, ಜೀರಿಗೆ ಪುಡಿ, ದನಿಯಾ ಪುಡಿ ಹಾಕಿ ಚೆನ್ನಾಗಿ ಬೇಯಿಸಬೇಕು.
ಬೆಂಡೆಕಾಯಿಗಳನ್ನು ಮಧ್ಯೆ ಹೆಚ್ಚಿ ಮೇಲಿನ ಮಸಾಲಾ ಮಿಶ್ರಣ ತುಂಬಿ ಸ್ವಲ್ಪ ಎಣ್ಣೆ ಹಾಕಿ ಬೇಯಿಸಬೇಕು.
Rating