ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅರುಂಧತಿ ರಾಯ್ ವಿವಾದಾತ್ಮಕ ಭಾಷಣ

 

http://www.mid-day.com/news/2010/oct/301010-Arundhati-Roy-controversial-Kashmir-speech-LTG-Sedition.htm

ಅರುಂಧತಿ ರಾಯ್ ಅವರ ವಿವಾದಾತ್ಮಕ ಭಾಷಣದ ಪ್ರತಿ ಮೇಲಿನ ಕೊಂಡಿಯಲ್ಲಿದೆ . ಆದರೆ ಮಾಧ್ಯಮಗಳಲ್ಲು ಮೊದಲು ಬಂದ  ವರದಿಗೂ ಇಲ್ಲಿ ನೀಡಿರುವ ಭಾಷಣಕ್ಕೂ ಸಾಕಷ್ಟು ವ್ಯತ್ಯಾಸ ಕಂಡು ಬರುತ್ತಿದೆ.

೧.  ಮಾಧ್ಯಮದಲ್ಲಿ, ಅರುಂಧತಿ ಭಾರತ ಒಂದು ಭೂಖ ನಂಗಾ ದೇಶ ಎಂದಿದ್ದರು.ಆದರೆ ಕೊಂಡಿ ನೋಡಿದರೆ ಅವರು ಹೇಳಿರುವುದು ಶ್ರೀ ನಗರದಲ್ಲಿ ಈ ರೀತಿ 

ಲಿನಕ್ಸಾಯಣ - ಸ್ವತಂತ್ರ ತಂತ್ರಾಂಶ ಶಿಕ್ಷಣಕ್ಕೆ ಪ್ರೋತ್ಸಾಹ

ಸ್ವತಂತ್ರ ತಂತ್ರಾಂಶ ಮತ್ತು ಮಾನದಂಡಗಳನ್ನು ಕಲಿಸುವ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ FTA (Free Technology Academy) ಮತ್ತು FSF (Free Software Foundation) ಗಳು ಕೈಜೋಡಿಸಿವೆ. ಈ ವಿಷಯವನ್ನು FTAನ ಅಸೋಸಿಯೇಟ್ ಪಾರ್ಟ್ನರ್ ನೆಟ್ವರ್ಕ್ ನಲ್ಲಿ ತಿಳಿಸಲಾಗಿದೆ.

 

ಅಕ್ಟೋಬರ್: ರೆಟ್ ಸಿಂಡ್ರೋಮ್ ಮಾಹಿತಿ-ಜಾಗೃತಿ ಮಾಸ

ಅಕ್ಟೋಬರ್: ರೆಟ್ ಸಿಂಡ್ರೋಮ್ ಮಾಹಿತಿ-ಜಾಗೃತಿ ಮಾಸ ನಿಮ್ಮಲ್ಲಿ ಹೆಚ್ಚಿನವರು ರೆಟ್ ಸಿಂಡ್ರೋಮ್ ಕುರಿತು ತಿಳಿದಿರಲಿಕ್ಕಿಲ್ಲ.

೧) ರೆಟ್ ಸಿಂಡ್ರೋಮ್ (ಕೆಲವು ಅಪವಾದಗಳ ಹೊರತಾಗಿ), ಹುಡುಗಿಯರಲ್ಲಷ್ಟೇ ಕಂಡು ಬರುತ್ತದೆ.

೨) ರೆಟ್ ಸಿಂಡ್ರೋಮ್ ಕುರಿತು ಜಾಗೃತಿ ಮೂಡಿಸಲು ಅಕ್ಟೋಬರ್ ತಿಂಗಳನ್ನು ವಿಶ್ವ ರೆಟ್ ಸಿಂಡ್ರೋಮ್ ಮಾಹಿತಿ-ಜಾಗೃತಿ ಮಾಸ ಎಂದು ಆಚರಿಸಲಾಗುತ್ತದೆ.

೩) ರೆಟ್ ಸಿಂಡ್ರೋಮ್ ಇರುವ ಶಿಶುಗಳು (ಸಾಮಾನ್ಯವಾಗಿ) ಆರೋಗ್ಯವಂತರಾಗಿ ಹುಟ್ಟಿ, ಬೆಳೆಯುತ್ತಿರುತ್ತಾರಾದರೂ, ಒಂದು ಸಮಯದ ನಂತರ, ಅವರ ಬೆಳವಣಿಗೆ ನಿಧಾನವಾಗುತ್ತಾ ಹೋಗಿ, ಅವರು ತಮ್ಮ ಕೈಯನ್ನು ಯಾವುದೇ ಕೆಲಸಕ್ಕಾಗಿ ಬಳಸುವುದನ್ನು ನಿಲ್ಲಿಸಿ ಸುಮ್ಮನೆ ಕೈ ಕುಣಿಸುತ್ತಾ ಅಥವಾ ಪಡೆ ಪಡೆ ಬಾಯೇದೆಗೆ ಒಯ್ಯುತ್ತಾ ಇರುತ್ತಾರೆ.

ಅರಬ್ಬರ ನಾಡಿನಲ್ಲಿ - ೯: ದುಬೈನಲ್ಲಿ ದೀಪಾವಳಿ!

"ದೀಪಾವಳಿ, ದೀಪಾವಳಿ, ಗೋವಿ೦ದ ಲೀಲಾವಳಿ"  ಹಾಡನ್ನು ಎಲ್ಲರೂ ಗುನುಗುನಿಸುತ್ತಾ ದೀಪಾವಳಿ ಹಬ್ಬದ ಭರ್ಜರಿ ಸ೦ಭ್ರಮದಲ್ಲಿ ಪಾಲ್ಗೊ೦ಡು, ಎಣ್ಣೆನೀರಿನ ಅಭ್ಯ೦ಜನ, ಹೊಸ ಬಟ್ಟೆ, ಸಿಹಿ ತಿ೦ಡಿಗಳೊಡನೆ ಪಟಾಕಿಗಳ ಸಿಡಿತದ ಢಾ೦, ಢೂ೦ ಸದ್ದಿನೊ೦ದಿಗೆ, ಬ೦ಧು ಬಾ೦ಧವರೊಡನೆ, ಆತ್ಮೀಯ ಸ್ನೇಹಿತರೊಡನೆ ಸ೦ಭ್ರಮಿಸುವ ಸಮಯ.  ಆದರೆ ದೂರದ ಸಾಗರದಾಚೆಯ "ಅವಕಾಶ ವ೦ಚಿತರ ಸ್ವರ್ಗ" ದುಬೈನಲ್ಲಿ,  ದೀಪಾವಳಿ ಬೇರೆಯದೇ ಅರ್ಥ ಪಡೆದುಕೊಳ್ಳುತ್ತದೆ.  ದೀಪಾವಳಿಗೆ ಒ೦ದು ವಾರ ಮು೦ಚಿತವಾಗಿಯೇ ದುಬೈನ ಬೀದಿಗಳು ಝಗಮಗಿಸುವ ವಿದ್ಯುದ್ದೀಪಗಳಿ೦ದ ಕ೦ಗೊಳಿಸುತ್ತಾ ದಸರಾ ಸಮಯದ ನಮ್ಮ ಮೈಸೂರನ್ನು ನೆನಪಿಸುತ್ತವೆ.  ದುಬೈನ ವಿಶ್ವ ಪ್ರಸಿದ್ಧ ಶಾಪಿ೦ಗ್ ಮಾಲುಗಳಲ್ಲಿ ಚಿತ್ರ ವಿಚಿತ್ರ ರೀತಿಯ "ಸ್ಪೆಷಲ್ ಆಫರ್"ಗಳು, ಬಹುಮಾನಗಳು, ರಿಯಾಯಿತಿಗಳು ಘೋಷಿಸಲ್ಪಟ್ಟು ಇಡೀ ದುಬೈ ನಗರ

ದೇವನೂರರ ಸಂವೇದನೆಗೆ ನನ್ನಿಗಳು!

ಗಲ್ಲಿ-ಗಲ್ಲಿಯ ಕನ್ನಡ ರಾಜ್ಯೋತ್ಸವಾಚರಣೆ ಚಪ್ಪರಗಳು, ಕನ್ನಡದ ಹೆಸರು ಮಾತ್ರಾ ಹೆಳಿಕೊಂಡು ಮೆರೆದು ಮೆಟ್ಟಂಗಾಲಿಡುವ ಪುಡಾರಿಗಳ ವೇದಿಕೆಯಾಗುತ್ತಿರುವ ಈ ದಿನಗಳಲ್ಲಿ, ನೈಜ ಸಾಹಿತಿ ದೇವನೂರು ಮಹದೇವರ ಸಂವೇದನೆಗೆ, ಪ್ರಜ್ಞಾವಂತರು ’ನಮೋ’ ಎನ್ನಬೇಕು!


ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಮರ‍್ಯಾದೆಯನ್ನು, ಶಾಲಾ ಶಿಕ್ಷಣ ಮಾಧ್ಯಮ ಕನ್ನಡವಾಗುವವವರೆಗೆ ಈಸಿಕೊಳ್ಳುವುದಿಲ್ಲ ಎಂದು ಅವರು ಪೋಟಿ ಹಾಕಿರುವುದು ಸಂತಸ ತಂದಿದೆ. ಅರ್ಜಿ ಗುಜರಾಯಿಸಿ, ಅಯೋಗ್ಯರ ಪಾದಾದಿಗಳನ್ನು ನೆಕ್ಕಿ ಪ್ರಶಸ್ತಿಯಾಗಿ ಸೈಟು, ನಗದು ಮತ್ತೊಂದಕ್ಕಾಗಿ ಜೊಲ್ಲು ಸುರಿಸುವ “ರಾಜ್ಯ ಶ್ರೇಷ್ಠ”ರಿಗೆ ಈ ನಿಲವು ಅನುಭಾವವೇದ್ಯವಾಗುವುದು ಕಷ್ಟ!

ದೂರದ ಕರೆ


ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನನ್ನ ಪ್ರಥಮ ಕವನವನ್ನು ಸಂಪದ ಓದುಗರಿಗೆ ಅರ್ಪಿಸುತ್ತಿದ್ದೇನೆ. ನಿಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡಿ ಪ್ರೋತ್ಸಾಹಿಸುತ್ತೀರೆಂಬ ನಂಬಿಕೆಯಿಂದ,

ಸಣ್ಣ ರತ್ನ

ಕುಡುದ್ಬುಟ್ ಆಡ್ದ್ರೆ ತೋಲ್ತಾದಣ್ಣ
ನಾಲ್ಗೆ - ಬಾಳ ಗೋಳು


 


/************************/ 


ಹಿಂಗೆ ನಮ್ಮ ಎಂಡ್ಕುಡ್ಕ ರತ್ನನ್ ಮಗ ಸಣ್ಣ ರತ್ನ ಹಾಡ್ ಯೋಳ್ಕಂಡ್ ತೂರಾಡ್ಕೊಂಡು ಬರ್ತಿದ್ನಾ, ಅವನ್ಗೆ ಕಾಣಿಸ್ತು ರಾಜಕಾರ್ಣಿದ್ ಗೋಡೆ ಮ್ಯಾಲ್ ಅಂಟ್ಸಿದ್ ಚಿತ್ರ


/************************/
ಹಾಡಿಂಗ್ ಮುಂದ್ವರೀತು


ಕುಡುದ್ಬುಟ್ ಆಡದ್ರೆ ತೋಲ್ತಾದಣ್ಣ
ನಾಲ್ಗೆ - ಬಾಳ ಗೋಳು
ಎಲ್ಲ ಒಂದೇ ತಪ ಕಾಣ್ತಾದಣ್ಣ
ಕೇಡಿ- ಕಂತ್ರಿ ಮುಖ್ಗೋಳು



ಹೆಸ್ರಿನರ್ಚ್ನೆ ಮಾಡ್ಬಿಡ್ತೀನಿ


ಯೆಡ್ಡಿಸ್ವಾಮಿ ಕುಮಾರಪ್ಪ
ಈಸ್ವರಣ್ಣ ರೇವಪ್ಪ
ಜನಾರ್ದ್ನ  ಗೌಡ
ಬಚ್ಚೆ ರೆಡ್ಡಿ



ಕುಡ್ಕಾಯಿವ್ನು ಹೆಸ್ರಗಳ್ನೆಲ್ಲಾ ತೆಪ್ಪಾಗ್
ಯೋಳ್ತವನ್ ಅಮ್ತೀರಾ
ಅವ್ರ್ಗೆ ಇವ್ರ್ಗೆ ಇವ್ರ್ಗೆ ಅವ್ರ್ಗೆ
ವ್ಯತ್ಯಾಸ್ ಏನೈತೆ ನೀವ್ಯೋಳ್ತೀರಾ