ಅಕ್ಟೋಬರ್: ರೆಟ್ ಸಿಂಡ್ರೋಮ್ ಮಾಹಿತಿ-ಜಾಗೃತಿ ಮಾಸ

ಅಕ್ಟೋಬರ್: ರೆಟ್ ಸಿಂಡ್ರೋಮ್ ಮಾಹಿತಿ-ಜಾಗೃತಿ ಮಾಸ

ಬರಹ

ಅಕ್ಟೋಬರ್: ರೆಟ್ ಸಿಂಡ್ರೋಮ್ ಮಾಹಿತಿ-ಜಾಗೃತಿ ಮಾಸ ನಿಮ್ಮಲ್ಲಿ ಹೆಚ್ಚಿನವರು ರೆಟ್ ಸಿಂಡ್ರೋಮ್ ಕುರಿತು ತಿಳಿದಿರಲಿಕ್ಕಿಲ್ಲ.

೧) ರೆಟ್ ಸಿಂಡ್ರೋಮ್ (ಕೆಲವು ಅಪವಾದಗಳ ಹೊರತಾಗಿ), ಹುಡುಗಿಯರಲ್ಲಷ್ಟೇ ಕಂಡು ಬರುತ್ತದೆ.

೨) ರೆಟ್ ಸಿಂಡ್ರೋಮ್ ಕುರಿತು ಜಾಗೃತಿ ಮೂಡಿಸಲು ಅಕ್ಟೋಬರ್ ತಿಂಗಳನ್ನು ವಿಶ್ವ ರೆಟ್ ಸಿಂಡ್ರೋಮ್ ಮಾಹಿತಿ-ಜಾಗೃತಿ ಮಾಸ ಎಂದು ಆಚರಿಸಲಾಗುತ್ತದೆ.

೩) ರೆಟ್ ಸಿಂಡ್ರೋಮ್ ಇರುವ ಶಿಶುಗಳು (ಸಾಮಾನ್ಯವಾಗಿ) ಆರೋಗ್ಯವಂತರಾಗಿ ಹುಟ್ಟಿ, ಬೆಳೆಯುತ್ತಿರುತ್ತಾರಾದರೂ, ಒಂದು ಸಮಯದ ನಂತರ, ಅವರ ಬೆಳವಣಿಗೆ ನಿಧಾನವಾಗುತ್ತಾ ಹೋಗಿ, ಅವರು ತಮ್ಮ ಕೈಯನ್ನು ಯಾವುದೇ ಕೆಲಸಕ್ಕಾಗಿ ಬಳಸುವುದನ್ನು ನಿಲ್ಲಿಸಿ ಸುಮ್ಮನೆ ಕೈ ಕುಣಿಸುತ್ತಾ ಅಥವಾ ಪಡೆ ಪಡೆ ಬಾಯೇದೆಗೆ ಒಯ್ಯುತ್ತಾ ಇರುತ್ತಾರೆ.

೪) ಅವರ ಮಿದುಳು ಹಾಗು ತಲೆಯ ಬೆಳವಣಿಗೆ ಕುಂಠಿತವಾಗುತ್ತದೆ.

೫) ಹೆಚ್ಚಿನ ರೆಟ್ ಸಿಂಡ್ರೋಮ್ ಮಕ್ಕಳಿಗೆ ಮೂರ್ಛೆ ರೋಗವಿರುತ್ತದೆ.

೬) ರೆಟ್ ಸಿಂಡ್ರೋಮ್ ಅನ್ನು ಎಕ್ಸ್ ಲಿಂಕಡ್ ಡೊಮಿನಂಟ್ (ಹಾಗೆಂದರೇನು ಎಂದು ತಿಳಿಯಬಯಸುವಿರಾದರೆ, ಪ್ರತಿಕ್ರಿಯಿಸಿ; ಇನ್ನೊಮ್ಮೆ ಬರೆಯುತ್ತೇನೆ.) ಎಂದು ಪರಿಗಣಿಸಲಾಗುತ್ತದೆ.

೭) ರೆಟ್ ಸಿಂಡ್ರೋಮ್ ಗೆ ಸದ್ಯಕ್ಕೆ ಯಾವುದೇ 'ಕ್ಯೂರ್' - ಪೂರ್ಣ ಪ್ರಮಾಣದ ಪರಿಹಾರ - ಇಲ್ಲ.

೮) Indian Rett Syndrome Foundation (ಭಾರತೀಯ ರೆಟ್ ಸಿಂಡ್ರೋಮ್ ಫೌಂಡೇಶನ್) ನ ಮೂರನೇ ವಾರ್ಷಿಕ ಸಮಾವೇಶವು ಇಂದು ಅಖಿಲ ಭಾರತೀಯ ವೈದ್ಯಕೀಯ ಸಂಸ್ಥೆ ದೆಹಲಿಯಲ್ಲಿ ನಡೆಯಿತು.

 

(ಲೇಖನ ಪೂರ್ತಿಯಾಗಿಲ್ಲ; ಮುಂದುವರಿಸಲು ಪ್ರಯತ್ನಿಸುವೆ)