ಸೃಷ್ಟಿ ಲಕ್ಕಿ book ಕನ್ನಡ
- Read more about ಸೃಷ್ಟಿ ಲಕ್ಕಿ book ಕನ್ನಡ
- Log in or register to post comments
ಮೊನ್ನೆ ಅಕ್ಟೋಬರ್ 31ರಂದು ಮುಂಬೈಯಲ್ಲಿ ವಿಕಿಪಿಡಿಯ ಆಸಕ್ತರು, ಉತ್ಸಾಹಿಗಳು, ಕಾರ್ಯಕರ್ತರು ಕಲೆತಿದ್ದರು. ವಿಕಿಪಿಡಿಯದಸಂಸ್ಥಾಪಕ ಜಿಮ್ಮಿ ವೇಲ್ಸ್ ಬಂದಿದ್ದರು. ನಮ್ಮ ಸಂಪದದಸಂಸ್ಥಾಪಕರಾದ ಹರಿಪ್ರಸಾದ ನಾಡಿಗರು ಭಾರತೀಯ ಅಂಗಸಂಸ್ಥೆಯ ಪ್ರಮುಖರಲ್ಲಿ ಒಬ್ಬರೂ ಹೌದು. ಈ ಸಂಪದದ ಹಿರಿಯ ಸದಸ್ಯರೂ ಉತ್ಸಾಹಿಗಳೂ ಆದವೆಂಕಟೇಶರೂ ಪಾಲ್ಗೊಂಡಿದ್ದರು. ನಾನೂ ಇದ್ದೆನು.
ಮನಸಿನೊಳಗೊಬ್ಬ ಮನುಜನಿದ್ದಾನೆ ,
ಸುತ್ತ ಕತ್ತಲೆ, ಪೂರ್ತಿ ಬತ್ತಲೆ !
ನಾಚುತ್ತಿರಲಿಲ್ಲ ಈತ ,ನಾಚುವುದಾದರೂ ಏನಕ್ಕೆ
ತಪ್ಪೆಲ್ಲ ಮಾಡಿ ಹುಸಿ ನಗೆಯಲ್ಲಿ ಕೂತಿಲ್ಲವಲ್ಲ !
ಜಗವ ಮೋಸ ಮಾಡಿಲ್ಲ ಅವನು !
ಆದರೂ ಹೆದರುತ್ತಾನೆ ,
ಜಾಸ್ತಿ ತಲೆ ಹಾಕಿದಲ್ಲಿ ,ತಲೆ ತೆಗೆಯಲೂ ಹೇಸನು
ಇವನ ಒಡೆಯ !
ಬಾಲ್ಯದಲ್ಲಿ ಇಬ್ಬರೂ ಒಳ್ಳೆ ಗೆಳೆಯರು
ಕಾಲ ಕೆಟ್ಟಿತೋ, ಮನುಜ ಕೆಟ್ಟನೋ
ಬತ್ತಲೆ ಮನುಜನ ಸಂಗ ಅವನಿಗ್ಯಾಕೋ ಬೇಡವಾಯ್ತು
ಬತ್ತಲೆ ಎಂದಲ್ಲ , ಇವನ ಬತ್ತಲೆ ಮಾಡುತ್ತಾನಲ್ಲ ಎಂದು !
ತಪ್ಪು ಮಾಡುತ್ತಾನೆ ಅನ್ನುವ ಕಾರಣವಲ್ಲ ,
ಬತ್ತಲೆ ಮನುಜನ ಬೇಸರ.
ಮಾಡಿದ ತಪ್ಪೇ ಸರಿ ಅನ್ನುತ್ತಾನಲ್ಲ,
ಕೆಟ್ಟಿದ್ದೆ ಒಳ್ಳೆದಾಯ್ತು ಅನ್ನುತ್ತಾನಲ್ಲ !!
http://avadhi.wordpress.com/2010/11/01/%E0%B2%B9%E0%B2%BE%E0%B2%97%E0%B2%BE%E0%B2%A6%E0%B2%B0%E0%B3%86-%E0%B2%A7%E0%B2%B0%E0%B3%8D%E0%B2%AE-%E0%B2%8E%E0%B2%82%E0%B2%A6%E0%B2%B0%E0%B3%87%E0%B2%A8%E0%B3%81/
ಈ ಬರಹ ಇಷ್ಟವಾಯ್ತು. ನಿಜಕ್ಕೂ ಹಲವರಿಗೆ ದ್ವಿಜ ದೀಕ್ಷೆಯ ಬದಲು ತ್ರಿಜ ದೀಕ್ಷೆಯ ಅವಶ್ಯಕತೆ ಇದೆ. ಒಂದು ಸಮಾಜದ ಮತ್ತ ಅದರ ವ್ಯಕ್ತಿಗಳನ್ನು , ಅವರ ಚಿಂತನೆಗಳನ್ನು ಗಮನಿಸಿದ ಯಾರಿಗೆ ಆಗಲಿ ಈ ಬರಹದಲಿ ತೂಕ ಅಂತ ಅನ್ನಿಸದೆ ಇರಲ್ಲ.
ಕೆಲವರನ್ನು ಕಂಡಾಗ ... ಅವರಿಗೆ ಯಾವಾಗ ಈ ಕರುಣಾ ದೀಕ್ಷೆ ಸಿಗುತ್ತೋ ಯಾವಾಗ ಅವರು ಮೇಲೆತ್ತಲ್ಪಡುತ್ತಾರೋ ಅನ್ನಿಸದೆ ಇರಲ್ಲ.
"ಮುಗ್ದತೆಯಿಂದ ಮೌಡ್ಯತೆ"ಯ ಕಡೆ ಪಯಣ ...ಅದು ಅಧಪತನದ ಕಡೆಗೆ ಪಯಣ...
ಇದಕ್ಕೆ ಹೋಲಿಸಿದರೆ "ಮುಗ್ದತೆಯಿಂದ ಮೌಡ್ಯತೆ" ಕಡೆ ಪಯಣ ಸ್ವಾಗತಾರ್ಹ.
ಇಂದು ಜನಕ್ಕೆ ಬೇಕಿರುವುದು ದೀಕ್ಷೆಯಲ್ಲ..ದಕ್ಷತೆ. .... ಕಾಯಕದಲ್ಲಿನ, ಜೀವನ ನಿರ್ವಹಣೆಯಲಿನ ದಕ್ಷತೆ! ಮೌಡ್ಯತೆಯ ದೀಕ್ಷೆಯಲ್ಲ.
ಶುಭಾಶಯ,
ಯಾರಿಗೆ ಏನು ಹೇಳೋಣ?
ಇವತ್ತಾದರೂ ಕನ್ನಡ ಬಳಸಿ ಎಂದೇ
ಕನ್ನಡ ಬಳಸಿ ಮೆರೆಸಿದವರನ್ನು
ಕನ್ನಡ ಬಳಸಿ ಅದ ಉಳಿಸಿದವರನ್ನು
1) ಯಳವತ್ತಿ ಟ್ವೀಟ್:-
ಅವರಿಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸಿಕೊಂಡಿದ್ದರೂ, ಯಾವುದಕ್ಕೂ ಒಮ್ಮತಕ್ಕೆ ಬಂದವರಲ್ಲ. ಮದುವೆಯಾದ ಮೇಲೆ ಒಂದು ವಿಷಯದಲ್ಲಿ ಮಾತ್ರ ಒಮ್ಮತಕ್ಕೆ ಬಂದಿದ್ದರು.. "ರಾತ್ರಿಗಳು ತುಂಬಾ ಚಿಕ್ಕದಾಗಿರುತ್ತೆಂದು"
2) ಯಳವತ್ತಿ ಟ್ವೀಟ್:-
ಯಾವಾಗಲೊಮ್ಮೆ ನಾವು ಬೇಗ ಏಳುವುದರ ನಷ್ಟವೆಂದರೆ, ನಾವು ಯಾವತ್ತು ಬೇಗ ಎದ್ದಿರ್ತೀವಿ, ಅವತ್ತೇ ಪೇಪರ್ ನವನು ಮತ್ತು ಹಾಲಿನವನು ಲೇಟಾಗಿ ಬಂದಿದಾರೆ ಅನ್ಸುತ್ತೆ..
3) ಯಳವತ್ತಿ ಟ್ವೀಟ್:-
ನಾನು ಇವಳನ್ನು ಪ್ರೀತಿಸುತ್ತಿದ್ದರೂ, ಬೇರೇ ಹುಡುಗಿಯನ್ನು ನೋಡಿ ಒಪ್ಪಿಕೊಂಡಿದ್ದರಲ್ಲಿ ನನ್ನದೇನೂ ತಪ್ಪಿಲ್ಲ.. ಎಲ್ಲ ಹುಡುಗಿಯರೂ ಅವಳಂತೆಯೇ ಕಾಣುತ್ತಾರೆ..
ಕುಂವೀ ಆತ್ಮಕಥನ - ಗಾಂಧಿ ಕ್ಲಾಸು
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡ ಏಕೀಕರಣದ ಹೋರಾಟದಲ್ಲಿ ತುಂಬ ಮಹನನೀಯರ ಕೊಡಿಗೆಯಿದೆ. ಅವರ ಹೊರಾಟಗಳು ನಿರರ್ಥಕವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಎಲ್ಲ ಭಾಷೆಗಳು ಅದನ್ನು ಮಾತನಾಡುವ ಜನರಿಂದ ಅದರ ಬೆಳವಣಿಗೆಯ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳುತ್ತವೆ. ಹೇಗೆ ತಾಯಿ ವೃದ್ದಾಪ್ಯದಲ್ಲಿ ಮಗನ ಪ್ರೀತಿ ಮತ್ತು ಅಶ್ರಯ ಬಯಸುತ್ತಾಳೋ ಹಾಗೇ. ನಮ್ಮ ಭಾಷೆ ವೃದ್ದಾಪ್ಯಕ್ಕೆ ಸರಿದಿದೆ ಎಂದು ನಾನನ್ನುತ್ತಿಲ್ಲ. ಕನ್ನಡಮ್ಮ ಚಿರಯೌವ್ವನೆ. ಆ ಅವಲಂಬನೆಯನ್ನು ನಿರೂಪಿಸಲು ಆ ರೀತಿ ಹೇಳಿದೆ. ಅದು ಸಹಜ ಕೂಡ.
ಇಂದು ನಮ್ಮ ಕನ್ನಡ ನಾಡು ೫೪ನೇ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದೆ. ಈ ನಮ್ಮ ನಾಡ ಉತ್ಸವ ಈ ಒಂದು ದಿನಕ್ಕಷ್ಟೇ ಸೀಮಿತವಾಗಿಬಿಡುತ್ತದೆ ಎಂಬ ಅಪಸ್ವರವನ್ನು ತೊಡೆದುಹಾಕಲೆಂದೇನೊ, ಕರ್ನಾಟಕ ಸರ್ಕಾರ ರಾಜ್ಯೋತ್ಸವ ಸಮಿತಿಯು ನ.೧ ರಿಂದ ಮುಂದಿನ ವರ್ಷ ನ.೧ರವರೆಗೆ "ಕನ್ನಡ ಉಳಿಸಿ ವರ್ಷಾಚರಣೆ" ಹಮ್ಮಿಕೊಂಡಿದೆ. ಬೆಂಗಳೂರಿನ ಮೈಸೂರು ವೃತ್ತದಲ್ಲಿ ನೃಪತುಂಗ ಮಂಟಪ ನಿರ್ಮಿಸಿ ಆಚರಣೆಗೆ ಚಾಲನೆ ನೀಡಿ, ನವೆಂಬರ‍್ ಪೂರ್ತಿ ಬೆಂಗಳೂರಿನ ನಾನಾ ಪ್ರದೇಶಗಳಲ್ಲಿ ಹಾಗೂ ರಾಜ್ಯದಾದ್ಯಂತ ವರ್ಷವಿಡೀ ರಾಜ್ಯೋತ್ಸವ ಆಚರಿಸಲು ನಿರ್ಧರಿಸಲಾಗಿದೆ. ನಿಜಕ್ಕೂ ಇದೊಂದು ವಿಶೇಷ, ನಮ್ಮ ನಾಡಿನ ಕನ್ನಡ ಜನತೆಯನ್ನೆಚ್ಚರಿಸುವ ಅವರೆಲ್ಲ ಕನ್ನಡದ ಬಗ್ಗೆ ಮತ್ತೆ ಹೆಮ್ಮೆ ಪಡವಂತೆ ಪುನರ‍್ ಪ್ರಯತ್ನಿಸುವುದು ಕನ್ನಡಾಭಿಮಾನಿಗಳ ಮಹತ್ವದ ಕೆಲಸವೇ ಸರಿ.