ಚೂ- ಆಮ್ ಅನ್ನ ಹಾಗೂ ಆಲೂ ಪನ್ನೀರ್ ಟಿಕ್ಕಿ
ಚೂ- ಆಮ್ ಅನ್ನ
- Read more about ಚೂ- ಆಮ್ ಅನ್ನ ಹಾಗೂ ಆಲೂ ಪನ್ನೀರ್ ಟಿಕ್ಕಿ
- 4 comments
- Log in or register to post comments
ಚೂ- ಆಮ್ ಅನ್ನ
ನಾವೇನ್ ಮಾಡಬೇಕ್ರೀ ಯಜಮಾನ್ರೇ
ಈಗ ನಾವೇನ್ ಮಾಡಬೇಕ್ರೀ?
ನಮ್ಮೂರ್ನಾಗೊ೦ದೂ ಕಕ್ಕಸ್ಸಿಲ್ಲ,
ಕುಡಿಯೋ ನೀರಿನ್ ನಲ್ಲಿ ಇಲ್ಲ!
ಹೊಟ್ಟೆಗ್ ಹಿಟ್ಟಿಲ್ಲ,ಕೈಯಲ್ಲಿ ಕೆಲಸಾ ಇಲ್ಲ
ಬೋರ್ವೆಲ್ ಹಾಕ್ಸೋಕ ದುಡ್ಡು ಮೊದಲೇ ಇಲ್ಲ!
ಊರಿನ್ ತು೦ಬೆಲ್ಲಾ ಹೊಲಗೇರಿ ಇದ್ರೂ
ಒ೦ದೂ ಸ್ನಾನದ ಮನೇನೇ ಇಲ್ಲ!
ನಾವೇನ್ ಮಾಡ ಬೇಕ್ರೀ ಯಜಮಾನ್ರೇ ಈಗ?
ಅಲ್ರೀ ,ನಾವು ಆರ್ಸಿ ಕಳುಸ್ದೋರೆಲ್ಲಾ
ಹಿ೦ಗೇ ದಗಲ್ಬಾಜಿಗಳಾಗ್ತಾ ಇದ್ರೆ
ನಾವೇನ್ ಮಾಡಬೇಕ್ರೀ ಯಜಮಾನ್ರೆ ಈಗ?
ಸಾಧು ಸ೦ತ ಅ೦ಥ ಆರ್ಸಿ ಕಳುಸ್ದೊ,
ಅವನಿವತ್ತು ಗೊತ್ತೇ ಇಲ್ದವನ ಥರಾ ಇದಾನಲ್ಲ
ನಾವೇನ್ ಮಾಡಬೇಕ್ರೀ ಯಜಮಾನ್ರೆ ಈಗ?
ಊರ್ನಾಗಿರೋದೊ೦ದೇ ಅರಳಿಕಟ್ಟೆ
ಬರ್ ಬರ್ತಾ ಆಗೋಗೈತೆ ಇಸ್ಪೀಟು ಅಡ್ಡೆ.
ಕೇಮೆ ಇಲ್ದೋರೆಲ್ಲಾ ಬರೋದೆಯಾ,ಎಳಿಯದೇಯಾ
ಹೇಳ್ಕೊ೦ಡ್ ಹೇಳ್ಕೊ೦ಡ್ ಸಾಕಾಗೈತ್ರಪ್ಪಾ
ನಾವೇನ್ ಮಾಡಬೇಕ್ರೀ ಯಜಮಾನ್ರೆ ಈಗ?
ರಾಜಭವನದ ಮು೦ದೆ ಕಿತ್ತೋಗಿದ್ ರೋಡ್ನಾಗೆ ಫುಲ್ ಟ್ರಾಫಿಕ್ನಾಗೆ ಕಾರ್ ಓಡುಸ್ಕೊ೦ಡು ತಮ್ಮ ಚಡ್ಡಿ ದೋಸ್ತ್ ಇನಾಯತ್ ಜೊತೆ ಬರ್ತಿದ್ದ ಮ೦ಜಣ್ಣನ ಮೊಬೈಲು ಒ೦ದೇ ಸಮನೆ ಹೊಡ್ಕೊಳ್ಳೋಕ್ಕೆ ಶುರುವಾತು! ಎಷ್ಟು ಕಿತಾ ಕಟ್ ಮಾಡುದ್ರೂ ಒಡ್ಕೋತಿದ್ದುದುನ್ ನೋಡಿ ಥತ್ ಇಸ್ಕಿ ಅ೦ತ ಕೊನೇಗೆ ರಿಸೀವ್ ಮಾಡುದ್ರೆ ಆ ಕಡೆಯಿ೦ದ ಒ೦ದು ಗೊಗ್ಗರು ಧ್ವನಿ " ನಮಸ್ಕಾರಾ ಸಾ, ನಾನು ಗೌಡಪ್ಪ ಸಾ,, ಒಸಿ ಅರ್ಜೆ೦ಟಾಗಿ ನಿಮ್ಮುನ್ ನೋಡ್ಬೇಕೂ ಸಾ" ಅ೦ದಾಗ ಮ೦ಜಣ್ಣ ಸರಿ ಗೌಡ್ರೆ, ಈವಾಗ ಎಲ್ಲಿದೀರ’ ಅ೦ದ್ರು, ’ಇಲ್ಲೇ ಸಿ.ಎ೦. ಮನೆ ಹತ್ರ ಇದೀವಿ ಸಾ, ಇ೦ಗೇ ಬನ್ನಿ ಸಾ...’ ಅ೦ದ ಗೌಡಪ್ಪ.
ನಮ್ಮ ಜೀವನ ರೀತಿ ತನ್ನ ಪರಿಸರದ ಮಿತಿಯೊಳಗೆ ಅರಳಬೇಕು. ಸಹಜ ಗತಿಯಲ್ಲಿ ಅದು ವಿಕಾಸ ಹೊಂದಬೇಕು. ಅದು ದೇಸಿ ಜೀವನ ವಿಧಾನ. ಆದರೆ ನಮ್ಮ ಆಧುನಿಕ ಜೀವನ ವಿಧಾನ ಪರಿಸರದ ಮಿತಿಯನ್ನು ಮೀರಿ ಬೆಳೆಯುತ್ತಿದೆ. ಅಸಹಜ ಗತಿಯಲ್ಲಿ ಬದಲಾವಣೆ ಹೊಂದುತ್ತಿದೆ.
ಹೆಗ್ಗೋಡಿನ ಪ್ರಸನ್ನ ಅವರು ಹೇಳುವಂತೆ, "ಹಿಮಾಲಯದ ಸೇಬು ಹಣ್ಣು, ಬಳ್ಳಾರಿಯ ಉರಿ ಬಿಸಿಲಿನಲ್ಲಿ ಮಾರಾಟಕ್ಕೆ ಸಿಗುವುದು; ಚೀನಿಯರ ನೂಡಲ್ಸ್ ಹಾಗೂ ಗೋಭಿ ಮಂಚೂರಿ ಭಾರತೀಯರಿಗೆ ಪ್ರಿಯವಾದ ತಿನಿಸಾಗಿರುವುದು, ಅಮೇರಿಕೆಯ ಮ್ಯಾಕ್ ಡೊನಾಲ್ಡ್ ಕಂಪೆನಿ ತನ್ನ ‘ಹ್ಯಾಂಬರ್ಗರ್’ ಮತ್ತು ‘ಪಿಜ್ಜಾ’ ಮೊದಲಾದವನ್ನು ಜಗತ್ತಿನಾದ್ಯಂತ ಉಣ ಬಡಿಸುವುದು, ಮೈಕೆಲ್ ಜಾಕ್ಸನ್ ತನ್ನ ಡಾನ್ಸ್ ನ ಆಂಗಿಕ ಅಭಿನಯದ ಭಾಗವಾಗಿ ‘ಕಾಕ್ ಪುಲ್ಲಿಂಗ್’ ಮಾಡಿದರೆ ಪ್ರಪಂಚಾದ್ಯಂತ ಇರುವ ಕೋಟ್ಯಂತರ ಯುವಕರು ವಿವೇಚನೆಯ ವಿವೇಕ ಮರೆತು ಅವರನ್ನು ಅನುಕರಿಸಿ ನರ್ತಿಸುವುದು ಪರಿಸರದ ಮಿತಿಯನ್ನು ಮೀರುವ ಉದಾಹರಣೆಗಳು."
ಪ್ರತಿ ವರ್ಷದಂತೆ ಈ ವರ್ಷವು " ರಂಗಶಂಕರ" ನಾಟಕೋತ್ಸವವನ್ನು ಏರ್ಪಡಿಸಿತ್ತು. ಆದರ ಕೊನೆಯ ಪ್ರದರ್ಶನ ಇದೆ ತಿಂಗಳ ೧ ರಂದು ನಡೆಯಿತು. ಈ ಬಾರಿ ರಂಗಶಂಕರ ಆರಿಸಿಕೊಂಡ ವಿಷಯ " ಜಾನಪದ" . ಈ ಉತ್ಸವದಲ್ಲಿ ನಡೆದ ಎಲ್ಲಾ ಪ್ರದರ್ಶನಗಳು ಜಾನಪದ ಮೂಲದವು.
ನವೆಂಬರ್ ೧ ರಂದು ನಡೆದ ಯಕ್ಷಗಾನ ಹಲವು ಪ್ರಶ್ನೆ ಮತ್ತು ಚರ್ಚೆಗಳಿಗೆ ದಾರಿಮಾಡಿಕೊಟ್ಟಿತ್ತು
" ಯಕ್ಷಗಾನ ಜಾನಪದವೋ ಶಾಸ್ತ್ರಿಯವೋ " ಎಂಬ ಜಿಜ್ಞಾಸೆ "
ಊರಿಂದ ಬಂದು ಕೆಲಸಗಳನ್ನೆಲ್ಲಾ ಮುಗಿಸಿ ನಿನ್ನೆ ಸಂಜೆ ಸಂಪದಕ್ಕೆ ಲಾಗಿನ್ ಮಾಡಿ ನೋಡಿದಾಗ ಯಾವ ಸ್ಕ್ರಿಪ್ಟ್ ಕೆಟ್ಟು ಫೈರ್ ಫಾಕ್ಸ್ ಈ ರೀತಿ ಒಂದು ಸಲ ತೋರಿಸುತ್ತಿದೆ ಅಂದು ಕೊಂಡೆ. ಆದರೆ ಮತ್ತೆ ಗೊತ್ತಾಯಿತು ಸಂಪದ ಬದಲಾಗಿದೆ ಎಂದು. ಒಂದು ರೀತಿ ಖುಷಿಯೇ, ಏಕೆಂದರೆ ಹೊಸತು ಯಾವುದಾದರೂ ನನಗೆ ಆನಂದವೇ..ಅದು ಒರ್ಕುಟ್ ಬೀಟಾ ವರ್ಶನ್ನಿನಿಂದ ಹಿಡಿದು ಹೆಚ್ಚೇನೂ ಬದಲಾಗದಿದ್ದರೂ ಫೈರ್ ಫಾಕ್ಸಿನ ಪ್ರತಿ ಆವೃತ್ತಿಯನ್ನು ಇನ್ಸ್ಟಾಲ್ ಮಾಡುವ ವರೆಗೂ. ಇದ್ದಂತೆ ಇದ್ದರೆ ಅದೇಕೋ ಮತ್ತೆ ಮತ್ತೆ ಸಪ್ಪೆಯೆನಿಸುವುದು ಸ್ವಭಾವ ಸಹಜವೇ ಸರಿ. ಹಾಗೆಯೇ ಕೆಲವು ಬರಹಗಳ ಮೇಲೆ ಕಣ್ಣಾಡಿಸಿದಾಗ ಮೊದಲಿನ ರೂಪವೇ ಎಲ್ಲರಿಗೂ ಇಷ್ಟ ಎಂಬ ಮಾತು ಕಂಡೆ. ನಿನ್ನೆಯಿಂದ ಓದುತ್ತಿರುವವನಿಗೆ ಎಲ್ಲರೂ ಹಾಗೆ ಹೇಳುವುದರಲ್ಲಿ ಅತಿಶಯವಿಲ್ಲ ಎಂದೆನಿಸುತ್ತಿದೆ.
(೨೮೧) ಸಾವು ಎಂಬ ’ಪ್ರೋಗ್ರಾಮಿನ’ ’ಸ್ಕ್ರೀನ್ ಸೇವರನ್ನು’ ನೋವು ಎನ್ನುತ್ತೇವೆ. ಭ್ರಮೆಯೆಂಬ ’ವೈರಸ್’ ಕಾಟದಿಂದಾಗಿ ನೋವನ್ನು ತಾತ್ಕಾಲಿಕವಾಗಿ ’ಹ್ಯಾಂಗ್’ ಮಾಡುವುದನ್ನು ಇಂದ್ರೀಯ ಸುಖ ಎನ್ನುತ್ತೇವೆ!
(೨೮೨) ನೈಜತೆಯ ಸಂಯಮಪೂರ್ಣ ಉತ್ಪ್ರೇಕ್ಷೆಯೇ ಫ್ಯಾಂಟಸಿ.
(೨೮೩) ಇಲ್ಲಿಯವರೆಗೂ ತೆಗೆಯಲಾಗಿರುವ ಛಾಯಾಚಿತ್ರಗಳ ಸಂಖ್ಯೆ ೧೨೩೪೫೬೭೮೯೦. ಇದನ್ನು ಅಲ್ಲಗಳೆಯುವುದಾದರೂ ಹೇಗೆ?!
(೨೮೪) ವೈರುಧ್ಯಮಯ ನಿಲುವು ತಾಳುವ ಮುನ್ನ ಚಿಂತಿಸಿಃ ಚಿಂತನೆಗೆ ವೈರುಧ್ಯಮಯ ನಿಲುವುಗಳು ಬಹಳ ಉಪಯೋಗಕಾರಿ!
(೨೮೫) ನಿಮ್ಮ ದೇಹತೂಕವನ್ನು ಕಡಿಮೆಗೊಳಿಸುವ ಅತ್ಯಂತ ಸುಲಭ ತಂತ್ರವೆಂದರೆ ನಿಮ್ಮ ಜೇಬಿನಿಂದ ಹಣ ಕಳೆದುಕೊಳ್ಳುವುದು!
ಪ್ರತಿ ವರ್ಷದಂತೆ ಈ ವರ್ಷವು " ರಂಗಶಂಕರ" ನಾಟಕೋತ್ಸವವನ್ನು ಏರ್ಪಡಿಸಿತ್ತು. ಆದರ ಕೊನೆಯ ಪ್ರದರ್ಶನ ಇದೆ ತಿಂಗಳ ೧ ರಂದು ನಡೆಯಿತು. ಈ ಬಾರಿ ರಂಗಶಂಕರ ಆರಿಸಿಕೊಂಡ ವಿಷಯ " ಜಾನಪದ" . ಈ ಉತ್ಸವದಲ್ಲಿ ನಡೆದ ಎಲ್ಲಾ ಪ್ರದರ್ಶನಗಳು ಜಾನಪದ ಮೂಲದವು.
ನವೆಂಬರ್ ೧ ರಂದು ನಡೆದ ಯಕ್ಷಗಾನ ಹಲವು ಪ್ರಶ್ನೆ ಮತ್ತು ಚರ್ಚೆಗಳಿಗೆ ದಾರಿಮಾಡಿಕೊಟ್ಟಿತ್ತು
" ಯಕ್ಷಗಾನ ಜಾನಪದವೋ ಶಾಸ್ತ್ರಿಯವೋ " ಎಂಬ ಜಿಜ್ಞಾಸೆ "
ಇದರ ಸಲುವಾಗಿಯೇ ಯಕ್ಷಗಾನ ಪ್ರದರ್ಶನದ ನಂತರ, ರಂಗಶಂಕರ ಒಂದು ಸೆಮಿನಾರ್ ಏರ್ಪಡಿಸಿತ್ತು .