ಬದಲಾದ ಸಂಪದ - ನನ್ನನಿಸಿಕೆ
ಊರಿಂದ ಬಂದು ಕೆಲಸಗಳನ್ನೆಲ್ಲಾ ಮುಗಿಸಿ ನಿನ್ನೆ ಸಂಜೆ ಸಂಪದಕ್ಕೆ ಲಾಗಿನ್ ಮಾಡಿ ನೋಡಿದಾಗ ಯಾವ ಸ್ಕ್ರಿಪ್ಟ್ ಕೆಟ್ಟು ಫೈರ್ ಫಾಕ್ಸ್ ಈ ರೀತಿ ಒಂದು ಸಲ ತೋರಿಸುತ್ತಿದೆ ಅಂದು ಕೊಂಡೆ. ಆದರೆ ಮತ್ತೆ ಗೊತ್ತಾಯಿತು ಸಂಪದ ಬದಲಾಗಿದೆ ಎಂದು. ಒಂದು ರೀತಿ ಖುಷಿಯೇ, ಏಕೆಂದರೆ ಹೊಸತು ಯಾವುದಾದರೂ ನನಗೆ ಆನಂದವೇ..ಅದು ಒರ್ಕುಟ್ ಬೀಟಾ ವರ್ಶನ್ನಿನಿಂದ ಹಿಡಿದು ಹೆಚ್ಚೇನೂ ಬದಲಾಗದಿದ್ದರೂ ಫೈರ್ ಫಾಕ್ಸಿನ ಪ್ರತಿ ಆವೃತ್ತಿಯನ್ನು ಇನ್ಸ್ಟಾಲ್ ಮಾಡುವ ವರೆಗೂ. ಇದ್ದಂತೆ ಇದ್ದರೆ ಅದೇಕೋ ಮತ್ತೆ ಮತ್ತೆ ಸಪ್ಪೆಯೆನಿಸುವುದು ಸ್ವಭಾವ ಸಹಜವೇ ಸರಿ. ಹಾಗೆಯೇ ಕೆಲವು ಬರಹಗಳ ಮೇಲೆ ಕಣ್ಣಾಡಿಸಿದಾಗ ಮೊದಲಿನ ರೂಪವೇ ಎಲ್ಲರಿಗೂ ಇಷ್ಟ ಎಂಬ ಮಾತು ಕಂಡೆ. ನಿನ್ನೆಯಿಂದ ಓದುತ್ತಿರುವವನಿಗೆ ಎಲ್ಲರೂ ಹಾಗೆ ಹೇಳುವುದರಲ್ಲಿ ಅತಿಶಯವಿಲ್ಲ ಎಂದೆನಿಸುತ್ತಿದೆ. ಆದರೆ ಹೊಸ ರೂಪ ಇಷ್ಟವೂ ಆಗುತ್ತಿದೆ. ಈ ಬರಹ ಈ ನಿಟ್ಟಿನಲ್ಲಿ ನನ್ನ ಅನಿಸಿಕೆಗಳನ್ನು ಹಿಡಿದಿದುವ ಒಂದು ಯತ್ನ. ಇದರಿಂದ ಸಂಪದ ಇನ್ನೂ ಚೆನ್ನಾದಲ್ಲಿ ಸಂತೋಷವೇ..
೧) ಕೂಲ್ ಆಗಿ ಕಾಣುವ ಹೊಸ ಬಣ್ಣಗಳ ಬಗ್ಗೆ ಕೇವಲ ಒಂದೇ ಅಕ್ಷೇಪಣೆ. ಪ್ರೊಫೈಲಿನ ಹಿಂದೆ ಕಾಣುವ ಕೇಸರಿ ಬಣ್ಣದ್ದು. ಸುಂದರವಾಗಿ ಕಾಣುವ ಹೊತ್ತಿನಲ್ಲೇ ಕಣ್ಣಿಗೆ ರಾಚುವಂತೆ ಕಾಣುವುದರಿಂದ ಅದೇಕೋ ಸರಿಯಾಗಿ ಕಾಣದು. ಅದರ ಮೇಲೆ ಕಾಣುವ ವೈಯಕ್ತಿಕ ಬ್ಲಾಗುಗಳ ಅಥವಾ ವೈಯಕ್ತಿಕ ಈ ಮೈಲುಗಳ ಲಿಂಕುಗಳೂ ಕಣ್ಣಿಗೆ ತ್ರಾಸದಾಯಕ.
೨) ಇಷ್ಟವಾಗಿದ್ದು. ಒಮ್ಮೆ ಓದಿದ ಲಿಂಕುಗಳ ಬದಲಾಗುವ ಬಣ್ಣ. ಇದರಿಂದ ಒಮ್ಮೆ ಓದಿದ್ದನ್ನು ಪುನಃ ಓದಿದ್ದೇನೋ ಇಲ್ಲವೋ ಎಂಬ ನನ್ನ ಗುಮಾನಿ ತಪ್ಪುತ್ತದೆ.
೩) ಮುಖ ಪುಟದ ಲುಕ್ ಬಹಳ ಇಷ್ಟವಾಯಿತು.
೪) ಎಲ್ಲರ ಅಭಿಪ್ರಾಯದಂತೆ ನನ್ನದೂ ಸಹಮತ. ಪ್ರತಿಕ್ರಿಯೆಗಳು ಪಕ್ಕದಲ್ಲಿದ್ದರೆ ಚೆನ್ನ, ಮತ್ತೆ ಮತ್ತೆ ಮುಖ ಪುಟಕ್ಕೆ ಹೋಗಿ ಬರುವ ಕಷ್ಟ ತಪ್ಪುತ್ತದೆ. ಹಾಗೆಯೇ ಅದರಲ್ಲಿ ಅಟೋ ರಿಫ್ರೆಶ್ ಹಾಕಿದರೆ ಪುನಃ ಪುನಃ ರಿಫ್ರೆಶ್ ಮಾಡೋದು ತಪ್ಪತ್ತೆ.
೫) ತಲೆಬರಹದ ಕೆಳಗೇ ಬರಹವಿದ್ದರೆ ನೋಡಲು ಚೆನ್ನ. ಈ ನಿಟ್ಟಿನಲ್ಲಿ ಪ್ರೊಫೈಲ್ ಮೇಲೆ ಬಂದು ತಲೆಬರಹ ಕೆಳಗಿದ್ದರೂ ನಡೆದೀತು.
೬) ಪ್ರೊಫೈಲ್ ಮಾಹಿತಿ ಪ್ರತಿ ಲೇಖನಕ್ಕೂ ಅಗತ್ಯವಿದೆಯೇ ? ಕೇವಲ ಹೆಸರು ಮತ್ತು ಭಾವ ಚಿತ್ರ ಸಾಕೆಂದು ನನ್ನ ಅಭಿಪ್ರಾಯ. ಪರಿಚಯ ಬೇಕಿದ್ದಲ್ಲಿ ಪೂರ್ಣ ಪ್ರೊಫೈಲಿಗೆ ಕ್ಲಿಕ್ಕಿಸಲಿ.
೭) ಬಹುತೇಕರಂದಂತೆ ’ಬದಲಾಯಿಸಿ’ ಆಯ್ಕೆಯಿದ್ದರೆ ಬರಹಗಳ ಗುಣಮಟ್ಟ ಚೆನ್ನಾಗಿರತ್ತೆ ಎಂದು ನನ್ನ ಅಭಿಪ್ರಾಯ
ಇದು ಕೇವಲ ನನ್ನ ಅನಿಸಿಕೆ ಮಾತ್ರ. ಏಕೆಂದರೆ ಬಿಟ್ಟಿ ಸಲಹೆ ನೀಡಲು ತುಂಬಾ ಜನರಿರುತ್ತಾರೆ, ಆದರೆ ಮಾಡುವವನಿಗೆ ಮಾತ್ರ ಅದರ ಕಷ್ಟ ಗೊತ್ತೆಂಬುದು ಎಂದು ನಾನೂ ಡೆವೆಲಪರ್ ಆದ್ದರಿಂದ ಗೊತ್ತು!!! :)
Comments
ಉ: ಬದಲಾದ ಸಂಪದ - ನನ್ನನಿಸಿಕೆ
In reply to ಉ: ಬದಲಾದ ಸಂಪದ - ನನ್ನನಿಸಿಕೆ by vani shetty
ಉ: ಬದಲಾದ ಸಂಪದ - ನನ್ನನಿಸಿಕೆ
ಉ: ಬದಲಾದ ಸಂಪದ - ನನ್ನನಿಸಿಕೆ
In reply to ಉ: ಬದಲಾದ ಸಂಪದ - ನನ್ನನಿಸಿಕೆ by ksraghavendranavada
ಉ: ಬದಲಾದ ಸಂಪದ - ನನ್ನನಿಸಿಕೆ
ಉ: ಬದಲಾದ ಸಂಪದ - ನನ್ನನಿಸಿಕೆ
In reply to ಉ: ಬದಲಾದ ಸಂಪದ - ನನ್ನನಿಸಿಕೆ by asuhegde
ಉ: ಬದಲಾದ ಸಂಪದ - ನನ್ನನಿಸಿಕೆ
In reply to ಉ: ಬದಲಾದ ಸಂಪದ - ನನ್ನನಿಸಿಕೆ by asuhegde
ಉ: ಬದಲಾದ ಸಂಪದ - ನನ್ನನಿಸಿಕೆ
In reply to ಉ: ಬದಲಾದ ಸಂಪದ - ನನ್ನನಿಸಿಕೆ by santhosh_87
ಉ: ಬದಲಾದ ಸಂಪದ - ನನ್ನನಿಸಿಕೆ