ಭಾರತೀಯ ಭಾಷೆಗಳಲ್ಲಿ , ಕನ್ನಡದಲ್ಲಿ ವಿಕಿಪಿಡಿಯ ಮತ್ತು ಮುಂಬೈಮಿಲನ
ಮೊನ್ನೆ ಅಕ್ಟೋಬರ್ 31ರಂದು ಮುಂಬೈಯಲ್ಲಿ ವಿಕಿಪಿಡಿಯ ಆಸಕ್ತರು, ಉತ್ಸಾಹಿಗಳು, ಕಾರ್ಯಕರ್ತರು ಕಲೆತಿದ್ದರು. ವಿಕಿಪಿಡಿಯದಸಂಸ್ಥಾಪಕ ಜಿಮ್ಮಿ ವೇಲ್ಸ್ ಬಂದಿದ್ದರು. ನಮ್ಮ ಸಂಪದದಸಂಸ್ಥಾಪಕರಾದ ಹರಿಪ್ರಸಾದ ನಾಡಿಗರು ಭಾರತೀಯ ಅಂಗಸಂಸ್ಥೆಯ ಪ್ರಮುಖರಲ್ಲಿ ಒಬ್ಬರೂ ಹೌದು. ಈ ಸಂಪದದ ಹಿರಿಯ ಸದಸ್ಯರೂ ಉತ್ಸಾಹಿಗಳೂ ಆದವೆಂಕಟೇಶರೂ ಪಾಲ್ಗೊಂಡಿದ್ದರು. ನಾನೂ ಇದ್ದೆನು.
ಸಂಸ್ಥಾಪಕ ಜಿಮ್ಮಿ ವೇಲ್ಸ್ ವಿಕಿಪಿಡಿಯದಉದ್ದೇಶವನ್ನು 'ಸಮಸ್ತ ಮನುಕುಲದ ಜ್ಞಾನವನ್ನು ಪ್ರತಿಯೊಬ್ಬನಿಗೂ ಅವನ ಭಾಷೆಯಲ್ಲಿಯೇ ತಲುಪಿಸುವುದು ' ಎಂದು ತಿಳಿಸಿದರು. ಭಾರತೀಯ ಭಾಷೆಗಳಲ್ಲಿ ವಿಕಿಪಿಡಿಯದ ಬಳಕೆ ಬಹಳ ಕಡಿಮೆಯಿದ್ದು ಅದು ಹೆಚ್ಚಬೇಕು ಎಂದು ತಿಳಿಸಿದರು. ಭಾರತದ ಇಂಟರ್ನೆಟ್ ಬಳಕೆದಾರರಲ್ಲಿ ನೂರರಲ್ಲಿ ೮೭ ಜನಕ್ಕೆ ಭಾರತೀಯ ಭಾಷೆಗಳನ್ನು ಕಂಪ್ಯೂಟರಿನಲ್ಲಿ ಬಳಸುವ ಬಗ್ಗೆ ಅರಿವೇ ಇಲ್ಲ . ಈ ಬಗ್ಗೆ ಆಗಬೇಕಾದ ಕೆಲಸಗಳ ಬಗ್ಗೆ ಚರ್ಚಿಸಿದರು. ಭಾರತೀಯ ಭಾಷೆಗಳ ವಿಕಿಪೀಡಿಯಗಳಲ್ಲಿ ಮಾಹಿತಿ ಹೆಚ್ಚಬೇಕು. ಹಿಂದಿಯಲ್ಲಿ ಲೇಖನಗಳ ಸಂಖ್ಯೆ ೬೦,೦೦೦ ಇದೆ . ಕನ್ನಡದ ಸ್ಥಾನ ಆರನೇಯದೋ ಏಳನೇಯದೋ ಇದೆ. ಸುಮಾರು ೧೦,೦೦೦ ಕನ್ನಡ ಬರಹಗಳಿವೆ. ಸುಮಾರು ಎಪ್ಪತ್ತೇ ಜನ ದಿನಕ್ಕೊಂದು ಲೇಖನ ಸೇರಿಸಿದರೂ ಒಂದೇ ವರುಷದಲ್ಲಿ ಸೇರಿಸುತ್ತ ಹೋದರೂ ಒಂದೇ ವರುಷದಲ್ಲಿ ಇಪ್ಪತ್ತು ಸಾವಿರ ಹೊಸ ಲೇಖನ ಸೇರ್ಪಡೆ ಆಗುವದು. ಹನಿ ಹನಿಗೂಡಿದರೆ ಹಳ್ಳ . ಯಾವದೇ ವಿಷಯದ ಬಗ್ಗೆ ಪರಿಪೂರ್ಣ ವಿಸ್ತಾರವಾದ ಮಾಹಿತಿಯೇ ಇರಬೇಕೆಂದಿಲ್ಲ. ತಮ್ಮ ತಮ್ಮ ಹತ್ತಿರ ಇದ್ದಷ್ಟು ಮಾಹಿತಿ ಸೇರಿಸುತ್ತ ಹೋದರೆ ಉಳಿದವರೂ ಅದನ್ನು ವಿಸ್ತರಿಸುತ್ತ ಹೋಗಬಹುದು. ಅಲ್ಲವೇ , ನೀತಿ , ನಿಯಮ, ಕಾರ್ಯನೀತಿಗಳು ಎಲ್ಲ ಭಾಷೆಗಳಿಗೂ ಒಂದೇ ಇರಬೇಕೆಂದಿಲ್ಲ ಎಂದು ಸೂಚಿಸಿದರು.
ಸುಮಾರು ಮುನ್ನೂರು ಜನ ಈ ಸಂವಾದದಲ್ಲಿ ಪಾಲ್ಗೊಂಡಿದ್ದರು . ಬಹುಪಾಲು ಯುವಕ ಯುವತಿಯರು ಉತ್ಸಾಹದಿಂದ ಗಂಭೀರವಾಗಿ ಚರ್ಚೆಯಲ್ಲಿ ಭಾಗವಹಿಸಿದರು. ನಮ್ಮ ನಾಡಿಗರು ಸಭಾಸದರ ಜತೆ ಸಂವಾದಕ್ಕಾಗಿ ವೇದಿಕೆಯ ಮೇಲೆ ಇನ್ನೂ ಮೂವರ ಜತೆ ಇದ್ದರು. ಕನ್ನಡ ವಿಕಿಪೀಡಿಯ ಬಗೆಗೆ ತಿಳಿಸಿ 'ಕನ್ನಡ ವಿಕಿಪೀಡಿಯದ ತಂದೆ' ಎನಿಸಿಕೊಂಡರು . ನಾನೂ ವಿಕಿಪೀಡಿಯಾ ದಲ್ಲಿ ಬರಹಗಳನ್ನು ಸೇರಿಸುವ ಬಗ್ಗೆ ವೆಂಕಟೇಶರಿಂದ ಅಮೂಲ್ಯ ಮಾರ್ಗದರ್ಶನ ಪಡೆದೆ.
Comments
ನಮಗಾದ ಆನಂದವನ್ನು ನಾನು ಪದಗಳಲ್ಲಿ
ನಮಗಾದ ಆನಂದವನ್ನು ನಾನು ಪದಗಳಲ್ಲಿ ವರ್ಣಿಸಲಾರೆ. ಇಂಟರ್ನೆಟ್ ನಲ್ಲಿ ಮಿಶ್ರಿಕೋಟಿ ಎಂದು ಓದಿ ಬಹುಶಃ ಅವರೊಬ್ಬ ಅತಿ ಹಿರಿಯ ವ್ಯಕ್ತಿ ಎಂಬ ಭಾವನೆ ನನ್ನಲ್ಲಿ ಮೂಡಿತ್ತು. ಏಕೆಂದರೆ, ಅವರ ವಿಚಾರಧಾರೆಗಳು ಮತ್ತು ಸಮಚಿತ್ತದಿಂದ ಉತ್ತರಿಸುವ ಅವರ ವಿಧಾನ ನನಗೆ ಮುದಕೊಟ್ಟಿತ್ತು. ಮೇಲಾಗಿ ನಾನು ಸಂಪದಕ್ಕೆ ಪಾದಾರ್ಪಣೆಮಾಡಿದಾಗ ನನಗೆ ಕನ್ನಡ ಟೈಪಿಂಗ್ ತೀರ ಹೊಸದು. ಆ ಸಮಯದಲ್ಲಿ ನನಗೆ, ನನ್ನ ತಪ್ಪುಗಳನ್ನು ತಿದ್ದಿ, ಸ್ಪೂರ್ತಿ ತುಂಬಿ ಸಹಕರಿಸಿದವರು ಶ್ರೀಕಾಂತರು. ಅವರ ಸಹಾಯವನ್ನು ನಾನು ಮರೆಯಲಾರೆ.
ಅವರನ್ನು ಕಂಡಾಗ ನನಗೆ ಆದ ಆಶ್ಚರ್ಯ ಅಷ್ಟಿಷ್ಟಲ್ಲ. ನನಗಿಂತ ಕಿರಿಯ ಮತ್ತು ಜ್ಞಾನದಲ್ಲಿ ಹಿರಿಯ ! ಇನ್ನೂ ಆ ಮೊದಲ ಭೇಟಿ ನಾನು ಮರೆತಿಲ್ಲ !