ಏನೋ ಮಾಡಲು ಹೋಗಿ.....

ಏನೋ ಮಾಡಲು ಹೋಗಿ.....

ಬರಹ

ಮಿಂಚಂಚೆಯಲ್ಲಿ ಬಂದದ್ದು...ಕನ್ನಡಕ್ಕೆ ಅನುವಾದಿಸಿದ್ದೇನೆ...


ನಾನು ನನ್ನ ಗಿಡಗಳಿಗೆ ನೀರು ಹಾಕೋಣ ಎಂದು ಹೊರಟೆ.


ಗ್ಯಾರೇಜ್ ಹತ್ತಿರ ಇರುವ ನಲ್ಲಿ ತಿರುಗಿಸಲು ಹೊರಟಾಗ ಪಕ್ಕದಲ್ಲೆ ನಿಂತಿದ್ದ ಕಾರನ್ನು ನೋಡಿ ಅದನ್ನು ಮೊದಲು ತೊಳೆಯೋಣ ಎಂದುಕೊಂಡು ಗ್ಯಾರೇಜ್ ಹತ್ತಿರ ಹೊರಟೆ ಅಲ್ಲೇ ಪಕ್ಕದಲ್ಲೇ ಟೇಬಲ್ ಮೇಲೆ ಆಗಷ್ಟೇ ಪೋಸ್ಟ್ ಮ್ಯಾನ್ ಕೊಟ್ಟು ಹೋಗಿದ್ದ ಪತ್ರ ತೆಗೆದುಕೊಂಡು ಇದನ್ನು ಓದಿದ ನಂತರ ಕಾರನ್ನು ತೊಳೆಯೋಣ ಎಂದುಕೊಂಡೆ.ಪತ್ರ ತೆರೆದುನೋಡಿದಾಗ ನನ್ನ ಮೊಬೈಲ್ ಬಿಲ್ಲಾಗಿತ್ತು. ಸರಿ ಮೊದಲು ಇದಕ್ಕೊಂದು ಚೆಕ್ ಬರೆಯೋಣ ಎಂದುಕೊಂಡು ಅಲ್ಲೇ ಟೇಬಲ್ ಮೇಲಿದ್ದ ಚೆಕ್ ಬುಕ್ ಕೈಗೆತ್ತುಕೊಂಡು ನೋಡಿದರೆ ಅದರಲ್ಲಿ ಒಂದೇ ಒಂದು ಚೆಕ್ ಇರುವುದು ಗಮನಕ್ಕೆ ಬಂತು. ಹೊಸ ಚೆಕ್ ಬುಕ್ ಮನೆ ಒಳಗಡೆ ಓದುವ ಕೊಠಡಿಯಲ್ಲಿ ಟೇಬಲ್ ಮೇಲಿರುವುದು ನೆನಪಿಗೆ ಬಂದು ಒಳಗೆ ಹೋದೆ. ಅಲ್ಲಿ ಟೇಬಲ್ ಮೇಲೆ ಅರ್ಧ ಕುಡಿದುಬಿಟ್ಟಿದ್ದ ಕಾಫಿ ಕಪ್ ಕಂಡಿತು. ಸರಿ ಚೆಕ್ ಬುಕ್ ಹುಡುಕೋಣ ಎಂದುಕೊಂಡು...ಮೊದಲು ಈ ಕಾಫಿ ಕುಡಿದುಬಿಡೋಣ ಇಲ್ಲದಿದ್ದರೆ ಚೆಲ್ಲುವುದು ಎಂದು ಕಪ್ಪನ್ನು ಕೈಗೆತ್ತಿಕೊಂಡಾಗ ಅದು ತಣ್ಣಗಿರುವುದು ಗಮನಕ್ಕೆ ಬಂದು ಇನ್ನೊಂದು ಸಲ ಕಾಫಿ ಮಾಡೋಣ ಎಂದುಕೊಂಡು ಅಡಿಗೆಮನೆಗೆ ಬರುವಾಗ ಅಲ್ಲಿನ ಟೇಬಲ್ ಮೇಲಿಟ್ಟಿದ್ದ ಹೂಕುಂಡ ಕಣ್ಣಿಗೆ ಬಿತ್ತು...ಅದಕ್ಕೆ ನೀರು ಹಾಕಬೇಕೆಂದೆನಿಸಿ ನನ್ನ ಕಾಫಿ ಕಪ್ಪನ್ನು ಟಿ.ವಿ.ಯ ಪಕ್ಕದಲ್ಲಿ ಇಡುವಾಗ ನಾನು ಬೆಳಗ್ಗಿಂದ ಹುಡುಕುತ್ತಿದ್ದ ನನ್ನ ಕನ್ನಡಕ ಸಿಕ್ಕಿತು...ಸರಿ ಮೊದಲು ಇದನ್ನು ಅದರ ಜಾಗದಲ್ಲಿ ಇಟ್ಟುಬಿಡೋಣ ಎಂದುಕೊಂಡೆ..ಅದಕ್ಕು ಮೊದಲು ಹೂಕುಂಡಕ್ಕೆ ನೀರು ಹಾಕೋಣವೆಂದು ಕನ್ನಡಕವನ್ನು ಆಲ್ಲೇ ಇಟ್ಟೆ. ಒಂದು ತಂಬಿಗೆಯಲ್ಲಿ ನೀರನ್ನು ತುಂಬಿಕೊಳ್ಳುತ್ತಿದ್ದಾಗ ಅಲ್ಲೇ ಊಟದ ಟೇಬಲ್ ಮೇಲೆ ಟಿ.ವಿ. ರಿಮೋಟ್ ಕಣ್ಣಿಗೆ ಬಿತ್ತು..ಇವತ್ತು ರಾತ್ರಿ ಟಿ.ವಿ.ನೋಡಬೇಕಾದರೆ ರಿಮೋಟ್ ಗೆ ಹುಡುಕಬೇಕಾಗುತ್ತದೆ..ಆಗ ನೆನಪಿಗೂ ಬರುವುದಿಲ್ಲ ಅದು ಊಟದ ಟೇಬಲ್ ಮೇಲೆ ಇತ್ತೆಂದು..ಅದಕ್ಕೆ ಮೊದಲು ಇದನ್ನು ಟಿ.ವಿ.ಯ ಪಕ್ಕದಲ್ಲಿಟ್ಟು ನಂತರ ನೀರು ಹಾಕೋಣ ಎಂದುಕೊಂಡೆ.


ಹೂಕುಂಡಕ್ಕೆ ನೀರು ಹಾಕುವಾಗ ಸ್ವಲ್ಪ ನೀರು ಕೆಳಗೆ ಚೆಲ್ಲಿತು...ಸರಿ ಒಂದು ಬಟ್ಟೆ ತೆಗೆದುಕೊಂಡು ಅದನ್ನು ಒರೆಸುತ್ತಿದ್ದಾಗ ನಾನು ಏನು ಮಾಡಬೇಕೆಂದು ಮರೆತೇಹೋಗಿತ್ತು..