ರಾಜ್ಯೋತ್ಸವದ ಶುಭಾಶಯಗಳು

ರಾಜ್ಯೋತ್ಸವದ ಶುಭಾಶಯಗಳು

ಬರಹ


ಬರೆಯಲಾರೆ ಕನ್ನಡ,
ನುಡಿಯಲಾರೆ ಕನ್ನಡ,
ಎನೋ ಹೇಗೋ ಬರೆದರೂ
ಅರ್ಥವಾಗದು ಕನ್ನಡ,


 


ಅದಕ್ಕಾಗೆ  ಈ ಸಂಪದ,
ಬರಿಯಿರಿ ಇಲ್ಲಿ ನಿಮ್ಮ ಪದ,
ಇಲ್ಲಿ ಎಲ್ಲರಿಗೊ ಆಸ್ಪದ
ಇದೇ ಕನ್ನಡಿಗರ ಜನಪದ


 


ನಾವು ಬರೆದೆವು ನಮ್ಮ ಪದ,
ನೀಡಿಹರು ನಮಗೆ ಪ್ರಬುದ್ದತೆಯ ಪ್ರತಿ ಪದ,
ಅದೇ ನಮಗೆ ಸು ಸಂಪದ,
ಅದರಿಂದ ನಮಗೆ ದೊರಕಿತು ಕನ್ನಡದ ಸುಗಂದ


 


ಆದೇವು ಎಲ್ಲರೂ ಕನ್ನಡಿಗರು,
ಆಗಬಾರದು ನಾವ್ ಪರಭಾಷಿಗರು,
ನಾವೆಲ್ಲರೊ ಈಗ ಸಂಪದಿಗರು
ಈಗೆಲ್ಲಾ ನಾವು ಒಂದೇ ಕುಟುಂಬದವರು.


 


ಎಲ್ಲರಿಗೊ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.