ಪ್ರಿಯಾಂಕಾ ಯಾವ ಲೆಹೆಂಗಾ ತೊಟ್ಟರೆ ನಮಗೇನು?

ಪ್ರಿಯಾಂಕಾ ಯಾವ ಲೆಹೆಂಗಾ ತೊಟ್ಟರೆ ನಮಗೇನು?

ಬರಹ

 

  ವಿವೇಕ್ ಒಬೆರಾಯ್ ಮತ್ತು ಪ್ರಿಯಾಂಕಾ ಆಳ್ವ ವಿವಾಹದ ಸುದ್ದಿಗೆ ಮಾಧ್ಯಮಗಳು, ಅದರಲ್ಲೂ ದೃಶ್ಯಮಾಧ್ಯಮ, ಅತಿಯಾದ ಪ್ರಾಮುಖ್ಯ ನೀಡಿದವು. ವಿವಾಹದ ವಿವರಗಳನ್ನು ಮೂರ್ನಾಲ್ಕು ದಿನ ಅವು ಬಣ್ಣಿಸಿದ್ದೇ ಬಣ್ಣಿಸಿದ್ದು! ದಿನದಿನದ ಕಾರ್ಯಕ್ರಮಗಳು ಏನೇನು, ವಧು ಯಾವ ದಿನ ಯಾವ ಲೆಹೆಂಗಾ ತೊಡುತ್ತಾಳೆ, ಅದನ್ನು ಹೊಲಿದ ದರ್ಜಿ ಯಾರು, ಅವನೂ ಮದುವೆಗೆ ಬರುತ್ತಾನಾ, ಇಂತಹ ವಿವರಗಳೂ ಧುಮ್ಮಿಕ್ಕಿದವು!
  ಈ ವಿವಾಹದ ಕಾರ್ಯಕ್ರಮಗಳನ್ನು ತೆಗೆದುಕೊಂಡು ನಾವೇನು ಮಾಡಬೇಕು? ವಧು ಯಾವ ದಿನ ಯಾವ ಲೆಹೆಂಗಾ ತೊಟ್ಟರೆ ನಮಗೇನು?
  ಇಂತಹ ವಿವರಗಳನ್ನು ಬಯಸುವ ಮಂದಿಯಿದ್ದಾರೆಂದು ಮಾಧ್ಯಮಗಳು ತಮ್ಮನ್ನು ಸಮರ್ಥಿಸಿಕೊಳ್ಳಬಹುದು. ಆದರೆ ಆ ಮಂದಿಯನ್ನು ಉತ್ತಮ ವಿಷಯಗಳತ್ತ ಸೆಳೆಯುವ ಜವಾಬ್ದಾರಿ ಮಾಧ್ಯಮಗಳಿಗಿರುತ್ತದೆ. ವಿವೇಕವಿವಾಹದ ಸಂದರ್ಭದಲ್ಲೇ ಆರು ಜನ ವಿಜ್ಞಾನಿಗಳಿಗೆ ’ಇನ್ಫೊಸಿಸ್ ಪ್ರಶಸ್ತಿ’ ಘೋಷಿಸಲ್ಪಟ್ಟಿತು. ಆ ವಿಜ್ಞಾನಿಗಳ ಸಾಧನೆಯ ವಿವರಗಳನ್ನು ಮಾಧ್ಯಮಗಳು ನೀಡಬಹುದಿತ್ತು. ಅವರನ್ನು ಸಂದರ್ಶಿಸಿ ಅವರ ಪ್ರಯತ್ನಶೀಲದ ಪರಿಚಯವನ್ನು ಜನರಿಗೆ ಮಾಡಿಕೊಡಬಹುದಿತ್ತು.
  ಮಾಧ್ಯಮಗಳಿಗೆ ಕರ್ತವ್ಯಾಕರ್ತವ್ಯಪ್ರಜ್ಞೆ ಪ್ರಖರವಾಗಿರಬೇಕು.