ನೂರೊಂದು ನೆನಪು
ಬರಹ
ನೂರೊಂದು ನೆನಪು ಎದೆಯಾಳದಿಂದ ಹಾಡಿಗೆ ಸಾಹಿತ್ಯ ಬದಲಿಸಿದ್ದೇನೆ...ಒಳ್ಳೆಯ ಹಾಡನ್ನು ಹಾಳು ಮಾಡುತ್ತಿದ್ದೇನೆಂದು ಬೈದುಕೊಳ್ಳಬೇಡಿ..ಇದು ಕೇವಲ ಹಾಸ್ಯಕ್ಕಾಗಿ..
ನೂರೊಂದು ತಿಂಡಿ...ತಿನಬೇಕು ಇಂದು..
ಹಸಿವಾಗಿ ಬಂದೆ...ತಿನ್ನೋಕೆ ಬಂದೆ...
ನೂರೊಂದು ತಿಂಡಿ...ತಿನಬೇಕು ಇಂದು..
ಹಸಿವಾಗಿ ಬಂದೆ...ತಿನ್ನೋಕೆ ಬಂದೆ...
ಬಿಸಿಬೇಳೆಬಾತು ಜೊತೆಯಲ್ಲಿ ಬೂಂದಿ
ಇಡ್ಲಿ, ವಡೆ ಪೊಂಗಲ್ಲು ಬೇಕೆಂದು ಇಂದು..
ನೂರೊಂದು ತಿಂಡಿ...ತಿನಬೇಕು ಇಂದು..
ಹಸಿವಾಗಿ ಬಂದೆ...ತಿನ್ನೋಕೆ ಬಂದೆ
ಘಮ್ಮೆನ್ನೋ ದೋಸೆ,,ಆಲೂಗಡ್ಡೆ ಪಲ್ಯ
ಮದ್ದೂರು ವಡೆಯೋ..ಮೈಸೂರು ಪಾಕೋ...
ಬಿಸಿ ಬಿಸಿ ಪೂರಿ...ವೆಜಿಟೇಬಲ್ ಸಾಗು..
ಫ್ರೈಡ್ ರೈಸು,ಘೀ ರೈಸು ಎಲ್ಲಾನೂ ಚೈನೀಸು...
ತಿಂಡಿ ಬಿಸಿ ಇರಲಿ...ಪ್ಲೇಟು ಕ್ಲೀನಿರಲಿ..
ತಿಂಡಿ ಬಿಸಿ ಇರಲಿ...ಪ್ಲೇಟು ಕ್ಲೀನಿರಲಿ..
ಎಂದೆಂದೂ ತಿನಬೇಕು ಸಂತೋಷದಿಂದ...
ನೂರೊಂದು ತಿಂಡಿ...ತಿನಬೇಕು ಇಂದು..
ಹಸಿವಾಗಿ ಬಂದೆ...ತಿನ್ನೋಕೆ ಬಂದೆ...
ಮಂಗಳೂರು ಬನ್ಸು..ಜೊತೆಯಲ್ಲಿ ಚಟ್ನಿ..
ಚಿರೋಟಿ ಹೋಳಿಗೆ...ಕಜ್ಜಾಯ ಜಾಮೂನು...
ಸೌತ್ ಇಂಡಿಯನ್ನು..ನಾರ್ತ್ ಇಂಡಿಯನ್ನು...
ಎಲ್ಲ ತಿಂದಾಗ ಸಂತೋಷ ಉಂಟು...
ಕಾಫಿ ಬಿಸಿ ಇರಲಿ..ಬಿಲ್ಲು ಕಮ್ಮಿ ಇರಲಿ..
ಕಾಫಿ ಬಿಸಿ ಇರಲಿ..ಬಿಲ್ಲು ಕಮ್ಮಿ ಇರಲಿ..
ಹೊಟ್ಟೆನೆ ತುಂಬಿಲ್ಲ...ಗೊತ್ತಿಲ್ಲ ಇಂದು...
ನೂರೊಂದು ತಿಂಡಿ...ತಿನಬೇಕು ಇಂದು..
ಹಸಿವಾಗಿ ಬಂದೆ...ತಿನ್ನೋಕೆ ಬಂದೆ